ದೇಶಾದ್ಯಂತ ಇಂದು ಸಡಗರ ಸಂಭ್ರಮದಿಂದ 73ನೇ ಸ್ವಾತಂತ್ಯ್ರ ದಿನವನ್ನು ಆಚರಿಸಲಾಗುತ್ತಿದೆ. ಜೊತೆಗೆ ಇಂದು ದಕ್ಷಿಣ ಭಾರತದ ಖ್ಯಾತ ನಟ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ತಮ್ಮ 57ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಕರ್ಣನ ಹುಟ್ಟುಹಬ್ಬ ಸಂಭ್ರಮದಲ್ಲಿ ಭಾಗಿಯಾದ ದುರ್ಯೋಧನ - ಬಾಕ್ಸ್ ಆಫೀಸ್ ಸುಲ್ತಾನ
ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಇಂದು ತಮ್ಮ 57ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 'ರಾಬರ್ಟ್' ಚಿತ್ರದ ಶೂಟಿಂಗ್ಗಾಗಿ ಚೆನ್ನೈನಲ್ಲಿ ನೆಲೆಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಬಿಡುವು ಮಾಡಿಕೊಂಡು ಅರ್ಜುನ್ ಸರ್ಜಾ ನಿವಾಸಕ್ಕೆ ತೆರಳಿ ಬರ್ತಡೇ ಶುಭ ಕೋರಿ ಬಂದಿದ್ದಾರೆ.
ಚೆನ್ನೈನ ತಮ್ಮ ನಿವಾಸದಲ್ಲಿ ಈ ಜಂಟಲ್ಮ್ಯಾನ್ ತಮ್ಮ ಕುಟುಂಬ ಹಾಗೂ ಕೆಲವೇ ಆಪ್ತರ ಸಮ್ಮುಖದಲ್ಲಿ ಕೇಕ್ ಕಟ್ ಮಾಡುವ ಮೂಲಕ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ಅರ್ಜುನ್ ಸರ್ಜಾ ಹುಟ್ಟುಹಬ್ಬದ ಸಂಭ್ರಮಕ್ಕೆ ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಗ್ ಸ್ಟಾರ್ ದರ್ಶನ್ ಕೂಡಾ ಜೊತೆಯಾಗಿದ್ದಾರೆ. ದರ್ಶನ್ ಚೆನ್ನೈನಲ್ಲಿ ನಡೆಯುತ್ತಿರುವ 'ರಾಬರ್ಟ್' ಚಿತ್ರೀಕರಣದಲ್ಲಿ ಬ್ಯುಸಿಯಿದ್ದು ಬಿಡುವು ಮಾಡಿಕೊಂಡು ಅರ್ಜುನ್ ಸರ್ಜಾ ಮನೆಗೆ ಹೋಗಿ ಆ್ಯಕ್ಷನ್ ಕಿಂಗ್ಗೆ ಹುಟ್ಟುಹಬ್ಬದ ಶುಭ ಕೋರಿ ಬಂದಿದ್ದಾರೆ. ದರ್ಶನ್ ಹಾಗೂ ಅರ್ಜುನ್ ಸರ್ಜಾ 'ಕುರುಕ್ಷೇತ್ರ' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅರ್ಜುನ್ ಸರ್ಜಾ ಕರ್ಣನ ಪಾತ್ರದಲ್ಲಿ ನಟಿಸಿದ್ದಾರೆ. ಅರ್ಜುನ್ ಸರ್ಜಾ ಹುಟ್ಟುಹಬ್ಬಕ್ಕೆ ಚಿತ್ರರಂಗದ ಗಣ್ಯರು ಶುಭ ಕೋರಿದ್ದಾರೆ.