ಒಂದೆಡೆ ಕೊರೊನಾದಿಂದ ಜನರು ಕಷ್ಟಪಡುತ್ತಿದ್ದರೆ ಮತ್ತೊಂದೆಡೆ ಚಿತ್ರರಂಗ ಸಾಲು ಸಾಲಾಗಿ ಪ್ರತಿಭಾವಂತರನ್ನು ಕಳೆದುಕೊಳ್ಳುತ್ತಿದೆ. 'ಕಮರೊಟ್ಟು ಚೆಕ್ಪೋಸ್ಟ್', 'ಸಲಗ' ಚಿತ್ರಗಳಲ್ಲಿ ಮಿಂಚಿದ್ದ ನಟ ಸುಶೀಲ್ ಮಂಡ್ಯದ ತಮ್ಮ ಫಾರ್ಮ್ಹೌಸ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
'ಸಲಗ' ಚಿತ್ರದ ಸಹನಟನ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ದುನಿಯಾ ವಿಜಯ್ - Duniya vijya reaction about costar death
'ಸಲಗ' ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದ ಸುಶೀಲ್ ತಮ್ಮ ಫಾರ್ಮ್ಹೌಸ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಶೀಲ್ ಸಾವಿನ ಸುದ್ದಿ ತಿಳಿದ ದುನಿಯಾ ವಿಜಯ್ ಬಹಳ ಬೇಸರ ವ್ಯಕ್ತಪಡಿಸಿದ್ದಾರೆ.
!['ಸಲಗ' ಚಿತ್ರದ ಸಹನಟನ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ದುನಿಯಾ ವಿಜಯ್ Duniya vijya reaction about costar death](https://etvbharatimages.akamaized.net/etvbharat/prod-images/768-512-7942133-14-7942133-1594204947199.jpg)
ದುನಿಯಾ ವಿಜಯ್
ಸುಶೀಲ್ ನಿಧನ ಸ್ಯಾಂಡಲ್ವುಡ್ಗೆ ಆಘಾತ ಉಂಟುಮಾಡಿದೆ. ದುನಿಯಾ ವಿಜಯ್ ನಟಿಸಿ, ಮೊದಲ ಬಾರಿ ನಿರ್ದೇಶಿಸಿರುವ 'ಸಲಗ' ಚಿತ್ರದಲ್ಲಿ ಸುಶೀಲ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಸುಶೀಲ್ ಸಾವಿನ ಬಾಗಿಲು ತಟ್ಟಿದ್ದಾರೆ. ಸುಶೀಲ್ ಸಾವಿನ ವಿಚಾರ ತಿಳಿದು ದುನಿಯಾ ವಿಜಯ್ ಕೂಡಾ ಬಹಳ ಬೇಸರ ವ್ಯಕ್ತಪಡಿಸಿದ್ದು ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
-
'ಸಲಗ' ಚಿತ್ರದಲ್ಲಿ ಒಂದು ಒಳ್ಳೆಯ ಪೊಲೀಸ್ ಪಾತ್ರವಿದೆ. ಅದನ್ನು ಒಬ್ಬ ಸ್ಫುರದ್ರೂಪಿ ಹುಡುಗ ನಿರ್ವಹಿಸಿದ್ದ. ಆತನ ಹೆಸರು ಸುಶೀಲ್ ಅಂತ....
Posted by Duniya Vijay on Wednesday, 8 July 2020