ಕರ್ನಾಟಕ

karnataka

ETV Bharat / sitara

'ಸಂಜನಾ,, ಐ ಲವ್​ ಯೂ ಸಂಜನಾ’ ಅಂತಾ ಜಪಿಸ್ತಿದ್ದಾರೆ ದುನಿಯಾ ವಿಜಿ! - Duniya Vijaya Salaga movies Sanjana song,

ಸಲಗ.. ಕನ್ನಡ ಚಿತ್ರರಂಗದಲ್ಲಿ ಹಾಡು ಮತ್ತು ಟೀಸರ್​ನಿಂದಲೇ ಸಿಕ್ಕಾಪಟ್ಟೇ ಸುದ್ದಿ ಮಾಡ್ತಿರೋ ಚಿತ್ರ. ರಿಯಲ್​ ಸ್ಟಂಟ್ ಮೂಲಕವೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿರೋ ನಟ ದುನಿಯಾ ವಿಜಯ್ ಈಗ ಸಂಜನಾ ಆನಂದ್ ಬಗ್ಗೆ ಜಪ ಮಾಡ್ತಿದ್ದಾರೆ.

Duniya Vijaya Salaga movie, Duniya Vijaya Salaga movies Sanjana song, Duniya Vijaya Salaga movies Sanjana song promo release, ಸಂಜನಾ ಸಾಂಗ್​ ಪ್ರೊಮೊ ಬಿಡುಗಡೆ, ಸಲಗ ಚಿತ್ರದ ಸಂಜನಾ ಸಾಂಗ್​ ಪ್ರೊಮೊ ಬಿಡುಗಡೆ, ದುನಿಯಾ ವಿಜಯ ಸಲಗ ಚಿತ್ರದ ಸಂಜನಾ ಸಾಂಗ್​ ಪ್ರೊಮೊ ಬಿಡುಗಡೆ,
ಜಪ ಮಾಡುತ್ತಿದ್ದಾರೆ ದುನಿಯಾ ವಿಜಯ್

By

Published : Mar 9, 2020, 7:45 PM IST

ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ದುನಿಯಾ ವಿಜಯ್, ಈಗ ಸಂಜನಾ ಆನಂದ್ ಹೆಸರಿನ ಮೇಲೆ ಸಲಗ ಚಿತ್ರದಲ್ಲಿ ಒಂದು ಹಾಡೊಂದನ್ನ ಮಾಡಿದ್ದಾರೆ. ಸದ್ಯ ಮಾಸ್ ಲಿರಿಕಲ್ ಹೊಂದಿರುವ ಈ ಹಾಡನ್ನ ಗಾಯಕ ನವೀನ್ ಸಜ್ಜು ಹಾಡಿದ್ದಾರೆ.

ನವೀನ್ ಸಜ್ಜು ಜೊತೆ ದುನಿಯಾ ವಿಜಯ್, ನಟಿ ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಮೇಕಿಂಗ್ ರಿವೀಲ್ ಆಗಿದೆ. ಹೋಳಿ ಹಬ್ಬದ ಪ್ರಯುಕ್ತ ಈ ವಿಶೇಷ ಹಾಡನ್ನ ರಿಲೀಸ್ ಮಾಡುವ ಪ್ಲಾನ್ ಮಾಡಿದೆ ಚಿತ್ರತಂಡ.

ಸಂಜನಾ ಜಪ ಮಾಡುತ್ತಿದ್ದಾರೆ ದುನಿಯಾ ವಿಜಯ್..

ಸಂಜನಾ ಐ‌‌ಲವ್​ಯೂ ಹಾಡನ್ನ ಚರಣ್ ರಾಜ್ ಮತ್ತು ನವೀನ್ ಸಜ್ಜು ಜಂಟಿಯಾಗಿ‌ ಕಂಪೋಸ್ ಮಾಡಿದ್ದಾರೆ. ವಿಜಯ್, ನವೀನ್ ಸಜ್ಜು, ಬಹದ್ದೂರ್ ಚೇತನ್ ಕುಮಾರ್ ಸಾಹಿತ್ಯವನ್ನ ಬರೆದಿದ್ದಾರೆ. ಡಾಲಿ ಧನಜಂಯ್, ಕಾಕ್ರೋಚ್ ಸುಧಿ, ಹೀಗೆ ಬಹು ತಾರಗಣವೇ ಚಿತ್ರದಲ್ಲಿದೆ. ಈ ಚಿತ್ರದ ಸಾಂಗ್ ಕಂಪೋಸ್​ನಲ್ಲಿ ವಿಜಯ್ ಮತ್ತು ನಿರ್ಮಾಪಕ ಕೆಪಿ ಶ್ರೀಕಾಂತ್ ಜೊತೆಯಲ್ಲಿದ್ದರು.‌

ಚಿತ್ರಕ್ಕೆ ಮಾಸ್ತಿ ಮಂಜು ಡೈಲಾಗ್ ಬರೆದಿದ್ದು, ಚರಣ್ ರಾಜ್ ಹಾಗೂ ನವೀನ್ ಸಜ್ಜು ಸಂಗೀತವಿರಲಿದೆ. ಟಗರು ಸಿನಿಮಾ ನಿರ್ಮಾಣ ಮಾಡಿದ್ದ ಕೆ ಪಿ ಶ್ರೀಕಾಂತ್ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಹಲವು ವಿಷಯಗಳಿಗೆ ಸಲಗ ಸೌಂಡ್ ಮಾಡುತ್ತಿದ್ದು, ಸದ್ಯದಲ್ಲೇ ಈ ಚಿತ್ರದ ಟೀಸರ್ ರಿಲೀಸ್ ಮಾಡೋದಕ್ಕೆ ಚಿತ್ರತಂಡ ಪ್ಲಾನ್ ಮಾಡಿದೆ.

ABOUT THE AUTHOR

...view details