ದುನಿಯಾ ವಿಜಯ್ ಮೊಟ್ಟ ಮೊದಲ ಬಾರಿಗೆ ಡೈರೆಕ್ಷರ್ ಕ್ಯಾಪ್ ತೊಟ್ಟು , ನಾಯಕ ನಟನಾಗಿ ನಟಿಸಿರೋ ಸಿನಿಮಾ ಸಲಗ. ಈ ಚಿತ್ರ ಪೋಸ್ಟರ್ ಮತ್ತು ಟೈಟಲ್ನಿಂದಲೇ ಸಖತ್ ಸದ್ದು ಮಾಡಿತ್ತು.
ಇನ್ನು ಸಿನಿಮಾದ ಟೈಟಲ್ ಹೇಳುವಂತೆ ಈ ಸಿನಿಮಾದಲ್ಲಿ ಭರ್ಜರಿ ಫೈಟ್ಗಳು ಇರಲಿವೆ. ಅಲ್ಲದೆ ಈ ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ರಾಮ್-ಲಕ್ಷ್ಮಣ್ರನ್ನು ಭೇಟಿ ಮಾಡಿ ಮಾತುಕತೆಯನ್ನೂ ನಡೆಸಲಾಗಿತ್ತು.