ಕರ್ನಾಟಕ

karnataka

ETV Bharat / sitara

ಸಲಗ ಚಿತ್ರ ಕಥೆಯು ನನ್ನನ್ನೇ ಡೈರೆಕ್ಟ್ ಮಾಡೋ ಹಾಗೆ ಮಾಡ್ತು: ದುನಿಯಾ ವಿಜಯ್ - duniya vijay talk with etv

ಇನ್ನು ನಟನಾಗಿದ್ದ ವಿಜಯ್ ನಿರ್ದೇಶನ ಮಾಡಬೇಕು ಅಂತಾ ಅನಿಸಿದ್ದು ಸಲಗ ಚಿತ್ರದ ಕಥೆಯಂತೆ. ಈ ಕಥೆಯನ್ನ ನಾನೇ ಡೈರೆಕ್ಟ್ ಮಾಡಬೇಕು ಅಂತಾ ಅನಿಸಿತ್ತು. ಈ ಕಾರಣಕ್ಕೆ ನಾನು ನಿರ್ದೇಶನ ಮಾಡಿದ್ದೇನೆ ಎನ್ನುತ್ತಾರೆ ದುನಿಯಾ ವಿಜಯ್​

ದುನಿಯಾ ವಿಜಯ್
ದುನಿಯಾ ವಿಜಯ್

By

Published : Aug 13, 2021, 6:59 PM IST

Updated : Aug 13, 2021, 10:54 PM IST

ಸಲಗ ಸ್ಯಾಂಡಲ್​ವುಡ್​​ನಲ್ಲಿ ಸದ್ದು ಮಾಡ್ತಿರೋ ಸಿನಿಮಾ. ದುನಿಯಾ ವಿಜಯ್ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿ ನಟಿಸಿರೋ ಸಲಗ ಚಿತ್ರದ ಪ್ರಮೋಷನಲ್ ಹಾಡು ಟಿಣಿಂಗಾ ಮಿಣಿಂಗಾ ಟಿಶ್ಯಾ ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್ ಗಟ್ಟಲೆ ಜನ ನೋಡಿ ಮೆಚ್ಚಿಕೊಂಡಿದ್ದಾರೆ‌. ಯಲ್ಲಾಪುರದ ಸಿದ್ದಿ ಬುಡಕಟ್ಟು ಜನಾಂಗದ ಜಾನಪದ ಗಾಯಕಿಯರಾದ ಗಿರಿಜಾ ಸಿದ್ದಿ ಹಾಗು ಗೀತಾ ಸಿದ್ದಿ ಈ ಹಾಡನ್ನ ಹಾಡಿ, ಅಭಿನಯಿಸಿದ್ದಾರೆ.

ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರೋ ಸಲಗ ಸಿನಿಮಾ ಬಗ್ಗೆ ನಟ,‌ನಿರ್ದೇಶದ ದುನಿಯಾ ವಿಜಯ್ ಮಾತನಾಡಿದ್ದಾರೆ. ಕಥೆಗೋಸ್ಕರ ಈ ಟೈಟಲ್ ಸೂಕ್ತ ಅನಿಸುತ್ತೆ ಈ ಕಾರಣಕ್ಕೆ ಸಲಗ ಅಂತಾ ಟೈಟಲ್ ಇಟ್ಟಿದ್ದೇವೆ ಎಂದಿದ್ದಾರೆ.

ಇನ್ನು ನಟನಾಗಿದ್ದ ವಿಜಯ್ ನಿರ್ದೇಶನ ಮಾಡಬೇಕು ಅಂತಾ ಅನಿಸಿದ್ದು ಸಲಗ ಚಿತ್ರದ ಕಥೆಯಂತೆ. ಈ ಕಥೆಯನ್ನ ನಾನೇ ಡೈರೆಕ್ಟ್ ಮಾಡಬೇಕು ಅಂತಾ ಅನಿಸಿತ್ತು. ಈ ಕಾರಣಕ್ಕೆ ನಾನು ನಿರ್ದೇಶನ ಮಾಡಿದ್ದೀನಿ ಎನ್ನುತ್ತಾರೆ ವಿಜಯ್​. ರೌಡಿಸಂ ಕಥೆ ಆಧರಿಸಿರೋ ಸಲಗ ಸಿನಿಮಾದಲ್ಲಿ ದುನಿಯಾ ವಿಜಯ್ ಅಲ್ಲದೇ ಡಾಲಿ ಧನಂಜಯ್ ಜೊತೆಗೆ ಸಾಕಷ್ಟು ಜನ ಹೊಸ ಪ್ರತಿಭೆಗಳನ್ನ ವಿಜಯ್ ಈ ಚಿತ್ರದಲ್ಲಿ ಪರಿಚಯಿಸಿದ್ದಾರಂತೆ.

ಸಲಗ ಚಿತ್ರ ಕಥೆಯು ನನ್ನನ್ನೇ ಡೈರೆಕ್ಟ್ ಮಾಡೋ ಹಾಗೆ ಮಾಡ್ತು: ದುನಿಯಾ ವಿಜಯ್

ಸಲಗ ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಟಿಣಿಂಗಾ ಮಿಣಿಂಗಾ ಟಿಶ್ಯಾ ಪ್ರಮೋಷನಲ್ ಹಾಡು. ಈ ಹಾಡು ಸೂಪರ್ ಹಿಟ್ ಆಗುವ ಮೂಲಕ ಸಲಗ ಚಿತ್ರಕ್ಕೆ ಒಳ್ಳೆಯ ಸ್ವಾಗತ ಕೋರಿದೆ. ಇನ್ನು ಸಲಗ ಚಿತ್ರಕ್ಕೆ ಸಿದ್ದಿ ಅನ್ನೋದು ವರವಾಗಿದೆ ಅನ್ನೋದು ದುನಿಯಾ ವಿಜಯ್ ನಂಬಿಕೆ.

ಸಲಗ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿವೆ. ಇದಕ್ಕೆಲ್ಲ ಕಾರಣ ನಿರ್ದೇಶಕ ಚರಣ್ ರಾಜ್​ ಅಂತೆ, ಯಾಕೆಂದರೆ, ಹಾಡಿನ ಬಗ್ಗೆ ಎಷ್ಟು ಆತಂಕ ಇದ್ದರೂ ಚರಣ್ ರಾಜ್ ಸಮಾಧಾನವಾಗಿ ಇರ್ತಾರೆ ಅಂತಾರೆ ವಿಜಯ್!

ಇನ್ನು ಸಲಗ ಸಿನಿಮಾ ಯಾವಾಗ ಬಿಡುಗಡೆ ಆಗುತ್ತೆ ಎಂಬುದರ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ಹಾಗೂ ಸಿಎಂ ಯಾವಾಗ ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಪ್ರೇಕ್ಷಕರಿಗೆ ಅವಕಾಶ ಕೊಡ್ತಾರೆ ಆಗ ನಾವು ಚಿತ್ರಮಂದಿರಕ್ಕೆ ಬರ್ತೀವಿ ಅಂತಾರೆ.

Last Updated : Aug 13, 2021, 10:54 PM IST

ABOUT THE AUTHOR

...view details