ಕರ್ನಾಟಕ

karnataka

ETV Bharat / sitara

’ಮೊದಲು ನೀನು ಸರಿಯಾಗು’: ರವಿ ಬೆಳಗೆರೆ ವಿರುದ್ಧ ದುನಿಯಾ ವಿಜಯ್  ಹಿಗ್ಗಾಮುಗ್ಗಾ ವಾಗ್ದಾಳಿ - duniya vijay

ಪತ್ರಕರ್ತ ರವಿ ಬೆಳೆಗೆರೆ ವಿರುದ್ಧ ನಟ ದುನಿಯಾ ವಿಜಯ್ ಏಕವಚನದಲ್ಲೇ ಗುಡುಗಿದ್ದಾರೆ. ಡಾಲಿ ಧನಂಜಯ್ ಅಭಿನಯದ 'ಬಡವ ರಾಸ್ಕಲ್'ಚಿತ್ರದ ಮುಹೂರ್ತ ಸಮಾರಂಭಕ್ಕೆ ಬಂದಿದ್ದ ವೇಳೆ ಮಾತನಾಡಿದ ದುನಿಯಾ ವಿಜಯ್ ಬೆಳಗೆರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ

vijay

By

Published : Aug 23, 2019, 12:36 PM IST

Updated : Aug 23, 2019, 2:47 PM IST

ಹಿರಿಯ ಪತ್ರಕರ್ತ ರವಿಬೆಳಗೆರೆ ವಿರುದ್ಧ ಏಕವಚನ ಬಳಕೆ ಮಾಡಿ, ನಟ ದುನಿಯಾ ವಿಜಯ್ ಗುಡುಗಿದ್ದಾರೆ.

ಇಂದು ಡಾಲಿ ಧನಂಜಯ್ ಅಭಿನಯದ 'ಬಡವ ರಾಸ್ಕಲ್' ಚಿತ್ರದ ಮುಹೂರ್ತ ಸಮಾರಂಭಕ್ಕೆ ಬಂದಿದ್ದ ವೇಳೆ ಮಾತನಾಡಿದ ದುನಿಯಾ ವಿಜಯ್, ಬೆಳಗೆರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೊದಲು ರವಿಬೆಳಗೆರೆ ಕುಟುಂಬ ಸರಿಯಾಗಿದೆಯೇ? ಅಂತ ನೋಡಿಕೊಳ್ಳಲಿ. ’ಅವನಿಗೆ ಇಬ್ಬರು ಹೆಂಡತಿಯರು. ಅವನ ಕುಟುಂಬವೇ ಸರಿಯಾಗಿ ಇಲ್ಲ ಅಂದಮೇಲೆ ನಮ್ಮ ಕುಟುಂಬಗಳ ಬಗ್ಗೆ ಏಕೆ ಮಾತನಾಡಬೇಕು’ ಎಂದು ಏಕವಚನದಲ್ಲೇ ಮಾತನಾಡಿ ಪ್ರಶ್ನೆ ಮಾಡಿದ್ದಾರೆ.

ರವಿ ಬೆಳೆಗರೆ ವಿರುದ್ಧ ಗುಡುಗಿದ ವಿಜಯ್

ಮೊದಲೇ ಆರೋಗ್ಯ ಸರಿಯಿಲ್ಲ ವಾರದಲ್ಲಿ ಮೂರು ದಿನ ಆಸ್ಪತ್ರೆಯಲ್ಲಿ ಇರುವ ವ್ಯಕ್ತಿ, ಪ್ರಜ್ಞೆ ಬಂದ ನಂತರ ಆತನ ನೆನಪಿಗೆ ಬರುವುದು ದರ್ಶನ್ ಹೆಂಡತಿ ಮತ್ತು ನನ್ನ ಹೆಂಡತಿ. ಅವನಿಗೆ ಅವನ ಹೆಂಡತಿ ನೆನಪಿಗೆ ಬರುವುದಿಲ್ಲ. ಅವರ ಕುಟುಂಬವೇ ಸರಿ ಇಲ್ಲ ಅಂದಮೇಲೆ ನಮ್ಮ ಕುಟುಂಬದ ಮೇಲೆ ಅವನೇಕೆ ಮಾತನಾಡಬೇಕು ಎಂದು ಏಕವಚನದಲ್ಲಿ ದಬಾಯಿಸಿದ್ದಾರೆ.

ಇಷ್ಟೇ ಅಲ್ಲದೆ, ಬೆಳಗೆರೆ ವಿರುದ್ಧ ಇದೇ ಕೊನೆಯ ವಾರ್ನಿಂಗ್ ಎಂದು ಸಿಡಿದಿದ್ದಾರೆ.

ಘಟನೆಯ ಹಿನ್ನೆಲೆ:

ಪತ್ರಕರ್ತ ರವಿಬೆಳಗೆರೆ ಅವರು ನಿನ್ನೆ ಒಂದು ವಿಡಿಯೋ ಮೂಲಕ ದರ್ಶನ್ ಕುಟುಂಬ ಹಾಗೂ ನಟ ವಿಜಯ್ ವಿಜಯ್ ಕುಟುಂಬವನ್ನು ಉಲ್ಲೇಖಿಸಿ ಅದನ್ನು ಯೂಟ್ಯೂಬ್​ನಲ್ಲಿ ಅಪ್‌ಲೋಡ್ ಮಾಡಿದ್ದರು. ವಿಡಿಯೋದಲ್ಲಿ ದರ್ಶನ್ ಹೆಂಡತಿಗೆ ಹೊಡೆದಿದ್ದ ವಿಚಾರ ಹಾಗೂ ನಟ ದುನಿಯಾ ವಿಜಯ್ ಹೆಂಡತಿಗೆ ಹೊಡೆದಿದ್ದ ವಿಚಾರ ಮತ್ತು ಎರಡೆರಡು ಮದುವೆ ಮಾಡಿಕೊಂಡ ವಿಚಾರವನ್ನು ಉಲ್ಲೇಖಿಸಿದ್ದರು.

Last Updated : Aug 23, 2019, 2:47 PM IST

ABOUT THE AUTHOR

...view details