ಕರ್ನಾಟಕ

karnataka

ETV Bharat / sitara

ಕಷ್ಟದ ದಿನಗಳಲ್ಲಿ ತಮಗೆ ಸಹಾಯ ಮಾಡಿದವರನ್ನು ನೆನಪಿಸಿಕೊಂಡ್ರು ದುನಿಯಾ ವಿಜಯ್...! - ತಮಗೆ ಸಹಾಯ ಮಾಡಿದವರನ್ನು ನೆನಪಿಸಿಕೊಂಡ ದುನಿಯಾ ವಿಜಯ್

ನನ್ನ ಸಾಧನೆ ಹಿಂದೆ ಬಹಳಷ್ಟು ಮಂದಿ ಇದ್ದಾರೆ.ಅವರಲ್ಲಿ ನಾಗೇಂದ್ರ ಪ್ರಸಾದ್ ಕೂಡಾ ಒಬ್ಬರು.ನಾನು ಅವರನ್ನು ಪ್ರೀತಿಯಿಂದ ಅಣ್ಣ ಎನ್ನುತ್ತೇನೆ. ಅವಕಾಶಕ್ಕಾಗಿ ಅಲೆಯುತ್ತಿದ್ದ ವೇಳೆ ನಾಗೇಂದ್ರ ಪ್ರಸಾದ್​​​​​​​​​​​​​​ ನನಗೆ ಅಂಬಿ ಚಿತ್ರದಲ್ಲಿ ನಟಿಸಲು ಅವಕಾಶ ಕೊಟ್ಟರು ಎಂದು ವಿಜಯ್ ತಮಗೆ ಸಹಾಯ ಮಾಡಿದವರನ್ನು ನೆನಪಿಸಿಕೊಂಡಿದ್ದಾರೆ.

Duniya Vijya recalls his old days
ಹಳೆಯ ದಿನಗಳನ್ನು ನೆನಪಿಸಿಕೊಂಡ್ರು ವಿಜಯ್

By

Published : Dec 18, 2019, 5:33 PM IST

ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ನಟ ವಿಜಯ್, 'ದುನಿಯಾ' ಚಿತ್ರದ ಮೂಲಕ ತಮ್ಮ ಇಮೇಜ್ ಬದಲಿಸಿಕೊಂಡವರು. ಯಾವ ಗಾಡ್​​ ಫಾದರ್ ಇಲ್ಲದೆ, ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡು ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದವರು.

ಹಳೆಯ ದಿನಗಳನ್ನು ನೆನಪಿಸಿಕೊಂಡ್ರು ವಿಜಯ್

ಹೊಟ್ಟೆಪಾಡಿಗಾಗಿ ಸಿನಿಮಾಗಳಲ್ಲಿ ಚಿಕ್ಕ ಪಾತ್ರಗಳನ್ನು ಮಾಡುತ್ತಿದ್ದ ವಿಜಯ್​​​ಗೆ 'ದುನಿಯಾ' ಸಿನಿಮಾ ಹೊಸ ದುನಿಯಾವನ್ನೇ ಸೃಷ್ಟಿಸಿಕೊಟ್ಟಿತು. ಆದರೆ ವಿಜಯ್ ಮಾತ್ರ ಸ್ಟಾರ್ ಆಗಿದ್ದರೂ, ಹಳೆಯದನ್ನು ಇನ್ನೂ ಮರೆತಿಲ್ಲ. ಈ ವಿಷಯದ ಬಗ್ಗೆ ಸರಳತೆ ತೋರಿಸಿರುವ ವಿಜಯ್​, 'ಸಲಗ' ಚಿತ್ರದ ಸುದ್ದಿಗೋಷ್ಠಿಯಲ್ಲಿ 'ಅಂಬಿ' ಚಿತ್ರದಲ್ಲಿ ತಮಗೆ ಅವಕಾಶ ನೀಡಿದ್ದ ನಾಗೇಂದ್ರ ಪ್ರಸಾದ್ ಅವರು ತಮಗೆ ಸಹಾಯ ಮಾಡಿದ್ದ ದಿನಗಳನ್ನು ನೆನಪಿಸಿಕೊಂಡರು.

ನನ್ನ ಸಾಧನೆ ಹಿಂದೆ ಬಹಳಷ್ಟು ಮಂದಿ ಇದ್ದಾರೆ.ಅವರಲ್ಲಿ ನಾಗೇಂದ್ರ ಪ್ರಸಾದ್ ಕೂಡಾ ಒಬ್ಬರು.ನಾನು ಅವರನ್ನು ಪ್ರೀತಿಯಿಂದ ಅಣ್ಣ ಎನ್ನುತ್ತೇನೆ. ನಾನು ಅವಕಾಶಕ್ಕಾಗಿ ಅಲೆಯುತ್ತಿದ್ದ ವೇಳೆ ನಾಗೇಂದ್ರ ಪ್ರಸಾದ್​​​​​​​ ನನಗೆ ಅಂಬಿ ಚಿತ್ರದಲ್ಲಿ ನಟಿಸಲು ಅವಕಾಶ ಕೊಟ್ಟರು. ಅವರೇ ಮುಂದೆ ನಿಂತು ಸಂಭಾವನೆ ಹಣ ಕೂಡಾ ಕೊಡಿಸಿದ್ದರು. ಅಂದು ಅವರು ನನಗೆ ಕೊಡಿಸಿದ ಸಂಭಾವನೆ ಇಂದು ಕೋಟಿಗೆ ಸಮ ಎಂದು ನಾಗೇಂದ್ರ ಪ್ರಸಾದ್ ಮಾಡಿದ ಸಹಾಯವನ್ನು ನೆನಪಿಸಿಕೊಂಡರು. ಅಮ್ಮ ನನ್ನನ್ನು ಕರಿಯ ಎಂದು ಕರೆಯುತ್ತಾರೆ. ನಾಗೇಂದ್ರ ಪ್ರಸಾದ್ 'ದುನಿಯಾ' ಚಿತ್ರದಲ್ಲಿ 'ಕರಿಯ ಐಲವ್ ಯೂ' ಎಂದು ಬರೆದಿದ್ರು. ಹಾಡುವಾಗ ಕೆಲವರು ಕರಿಯ ಪದದ ಬಗ್ಗೆ ವ್ಯಂಗ್ಯವಾಡಿದರು. ಅದರೆ ಆ ಹಾಡೇ ದೊಡ್ಡ ಹಿಟ್ ಆಯಿತು ಎಂದು ವಿಜಯ್ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದರು.

ABOUT THE AUTHOR

...view details