ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಸಿನಿಮಾ 'ಸಲಗ'. ಭೂಗತ ಲೋಕದ ಕಥೆ ಹೊಂದಿರುವ ಸಿನಿಮಾದಲ್ಲಿ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಎರಡನೇ ಶೆಡ್ಯೂಲ್ ಶೂಟಿಂಗ್ ಆರಂಭವಾಗಿದೆ.
ಆ್ಯಕ್ಷನ್ ಮೂಡ್ನಲ್ಲಿ ಬ್ಲಾಕ್ ಕೋಬ್ರಾ...ಭರದಿಂದ ಸಾಗುತ್ತಿದೆ 'ಸಲಗ' ಚಿತ್ರೀಕರಣ..! - undefined
'ಸಲಗ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ನಿರ್ದೇಶಕ ದುನಿಯಾ ವಿಜಯ್ ಬೆಂಗಳೂರಿನ ಲಗ್ಗೆರೆಯಲ್ಲಿ ಕೆಲವೊಂದು ಆ್ಯಕ್ಷನ್ ಸ್ವೀಕ್ವೆನ್ಸ್ಗಳನ್ನು ಚಿತ್ರೀಕರಣ ಮಾಡಿಕೊಂಡರು. ಶೀಘ್ರದಲ್ಲಿ ಧನಂಜಯ್, ಕಾಕ್ರೋಚ್ ಸುಧೀರ್ ಹಾಗೂ ಇನ್ನಿತರರು ಚಿತ್ರತಂಡ ಸೇರಿಕೊಳ್ಳಲಿದ್ದಾರೆ.
ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ನಿರ್ದೇಶನದಲ್ಲಿ 'ಸಲಗ' ಚಿತ್ರದ ಕಾರ್ ಚೇಸಿಂಗ್ ಸನ್ನಿವೇಶವನ್ನು ನಟ, ನಿರ್ದೇಶಕ ವಿಜಯ್ ಚಿತ್ರೀಕರಿಸಿಕೊಳ್ಳುತ್ತಿದ್ದಾರೆ. ಮೊದಲ ಶೆಡ್ಯೂಲ್ನಲ್ಲಿ ಟಾಕಿ ಪೋಷನ್ ಜೊತೆಗೆ ಒಂದು ಹಾಡನ್ನು ವಿಜಯ್ ಶೂಟಿಂಗ್ ಮಾಡಿದ್ದರು. ಇದೀಗ ಎರಡನೇ ಶೆಡ್ಯೂಲ್ನಲ್ಲಿ ಡಾಲಿ ಧನಂಜಯ್ 'ಸಲಗ' ಅಡ್ಡಾಕ್ಕೆ ಎಂಟ್ರಿ ಕೊಡಲಿದ್ದಾರೆ. ಅವರೊಂದಿಗೆ ಕಾಕ್ರೋಚ್ ಸುಧಿ, ಸಂಜನಾ ಆನಂದ್ ಕೂಡಾ ಸಲಗ ಟೀಮ್ ಸೇರಿಕೊಳ್ಳಲಿದ್ದಾರೆ. ಲಗ್ಗೆರೆಯ ರಸ್ತೆಯಲ್ಲಿ, ವಿಜಯ್ ಕಾರ್ ಚೇಸಿಂಗ್ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ.
'ಟಗರು' ಚಿತ್ರಕ್ಕೆ ಕೆಲಸ ಮಾಡಿದ ತಂತ್ರಜ್ಞರು ಸಲಗ ಚಿತ್ರಕ್ಕೆ ಸೇರ್ಪಡೆಯಾಗಿದ್ದು, ಚಿತ್ರತಂಡಕ್ಕೆ ಮತ್ತಷ್ಟು ಬಲ ತಂದಿದೆ. ಇನ್ನು ಚಿತ್ರಕ್ಕೆ ಮಾಸ್ತಿ ಮಂಜು ಡೈಲಾಗ್ ಬರೆದಿದ್ದು ಚರಣ್ ರಾಜ್ ಹಾಗೂ ನವೀನ್ ಸಜ್ಜು ಸಂಗೀತವಿರಲಿದೆ. 'ಟಗರು' ಸಿನಿಮಾ ನಿರ್ಮಿಸಿದ್ದ ಕೆ.ಪಿ. ಶ್ರೀಕಾಂತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.