ಕರ್ನಾಟಕ

karnataka

ETV Bharat / sitara

ಮಾತಿನ ಮನೆ ಸೇರಿದ 'ಪೊಗರು'...ಶೀಘ್ರದಲ್ಲೇ ಸಿನಿಮಾ ಬಿಡುಗಡೆ - ಪೊಗರು ಸಿನಿಮಾಗೆ ಡಬ್ಬಿಂಗ್ ಆರಂಭ

ನಂದಕಿಶೋರ್ ನಿರ್ದೇಶನದಲ್ಲಿ ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದ ಡಬ್ಬಿಂಗ್ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಇಂದಿನಿಂದ ಪ್ರಾರಂಭವಾಗಿದೆ. ಚಿತ್ರತಂಡ ಈ ಬಾರಿ ಅಭಿಮಾನಿಗಳಿಗೆ ನಿರಾಸೆ ಮಾಡದೆ ಅಂದುಕೊಂಡಂತೆ ಯುಗಾದಿ ವೇಳೆಗೆ ಸಿನಿಮಾ ರಿಲೀಸ್ ಮಾಡಲು ಹಗಲು ಇರುಳು ಶ್ರಮ ವಹಿಸುತ್ತಿದೆ.

Dubbing started for Pogaru movie
ಪೊಗರು ಸಿನಿಮಾಗೆ ಡಬ್ಬಿಂಗ್ ಆರಂಭ

By

Published : Jan 18, 2020, 7:59 PM IST

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಪೊಗರು' ಸಿನಿಮಾ ಆರಂಭವಾಗಿ ಮೂರು ವರ್ಷಗಳು ಕಳೆಯುತ್ತಾ ಬಂದಿದೆ. ಮೂರು ವರ್ಷಗಳಿಂದ ಧ್ರುವ ಅವರ ಯಾವುದೇ ಸಿನಿಮಾ ಬಿಡುಗಡೆಯಾಗದೆ ಅಭಿಮಾನಿಗಳು ಕೂಡಾ ಬೇಸರದಿಂದ ಇದ್ದಾರೆ. ಆದರೆ ಇನ್ನು ಕಾಯುವ ಸಮಯ ಮುಗಿದಿದೆ.

'ಪೊಗರು' ಚಿತ್ರಕ್ಕೆ ಡಬ್ಬಿಂಗ್ ಮಾಡುತ್ತಿರುವ ಧ್ರುವ ಸರ್ಜಾ

ಸೆಟ್ಟೇರಿದಾಗಿನಿಂದ ಸಾಕಷ್ಟು ಹವಾ ಎಬ್ಬಿಸಿದ್ದ 'ಪೊಗರು' ಸಿನಿಮಾ ಸದ್ಯಕ್ಕೆ ಎಡಿಟಿಂಗ್ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ಇಂದಿನಿಂದ ಸಿನಿಮಾಗೆ ಧ್ರುವ ಡಬ್ಬಿಂಗ್ ಆರಂಭಿಸಿದ್ದಾರೆ. ಪೋಸ್ಟರ್ ಹಾಗೂ ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದಲ್ಲಿ ಧ್ರುವ ಪಕ್ಕಾ ಮಾಸ್ ಲುಕ್​​​​​​​ನಲ್ಲಿ ಮಿಂಚಿದ್ದಾರೆ. ಆ್ಯಕ್ಷನ್ ಪ್ರಿನ್ಸ್​​​​ಗೆ ನಾಯಕಿಯಾಗಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ನಂದಕಿಶೋರ್ ನಿರ್ದೇಶನದ 'ಪೊಗರು' ಚಿತ್ರದ ಡಬ್ಬಿಂಗ್ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಇಂದಿನಿಂದ ಪ್ರಾರಂಭವಾಗಿದೆ. ರಶ್ಮಿಕಾ ಭಾಗದ ಡಬ್ಬಿಂಗ್ ಕೂಡಾ ಶೀಘ್ರದಲ್ಲೇ ಆರಂಭವಾಗಲಿದೆ. ಚಿತ್ರದಲ್ಲಿ ಧ್ರುವ ಅವರ ಖಡಕ್ ಡೈಲಾಗ್​​​​​ಗಳಿಗೆ ಅಭಿಮಾನಿಗಳು ಫಿದಾ ಆಗುವುದರಲ್ಲಿ ಅನುಮಾನವೇ ಇಲ್ಲ. ‌ಸದ್ಯ ಡಬ್ಬಿಂಗ್ ಕೆಲಸ ಆರಂಭಿಸಿರುವ ಚಿತ್ರತಂಡ ಈ ಬಾರಿ ಅಭಿಮಾನಿಗಳಿಗೆ ನಿರಾಸೆ ಮಾಡದೆ ಅಂದುಕೊಂಡಂತೆ ಯುಗಾದಿ ವೇಳೆಗೆ ಸಿನಿಮಾ ರಿಲೀಸ್ ಮಾಡಲು ಹಗಲು ಇರುಳು ಶ್ರಮ ವಹಿಸುತ್ತಿದೆ.

ABOUT THE AUTHOR

...view details