ಕರ್ನಾಟಕ

karnataka

ETV Bharat / sitara

ಈ ವರ್ಷವೇ ಚಿತ್ರೀಕರಣ ಮುಗಿಸಲು ಡೆಡ್​​​​ಲೈನ್​ ಹಾಕಿಕೊಂಡ ‘ಮಾರ್ಟಿನ್​’ ತಂಡ - ನಿರ್ದೇಶಕ ಎ.ಪಿ ಅರ್ಜುನ್

ಧ್ರುವ ಸರ್ಜಾ ಅಭಿನಯದ ಹೊಸ ಚಿತ್ರ 'ಮಾರ್ಟಿನ್' ಸೆಟ್ಟೇರಿಜೆ. ಎ.ಪಿ ಅರ್ಜುನ್ ಚಿತ್ರ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಬಿಡುಗಡೆಯೂ ತಡವಾಗಬಹುದಾ? ಎಂಬ ಅಭಿಮಾನಿಗಳ ಅನುಮಾನಕ್ಕೆ ಉತ್ತರ ಸಿಕ್ಕಿದೆ.

druva-sarjas-martin-to-complete-by-december
ಧ್ರುವ ಸರ್ಜಾ ಅಭಿನಯದ ಮಾರ್ಟಿನ್

By

Published : Aug 17, 2021, 12:13 PM IST

ನಟ ಧ್ರುವ ಸರ್ಜಾ ಅಭಿನಯದ ಹೊಸ ಚಿತ್ರದ ಆರಂಭದ ಬಗ್ಗೆ ಮಾತ್ರ ಹೇಳಬಹುದು. ಮಿಕ್ಕಂತೆ ಯಾವಾಗ ಮುಕ್ತಾಯ, ಬಿಡುಗಡೆ ಎಂದೆಲ್ಲ ಹೇಳುವುದು ಕಷ್ಟ ಎಂಬ ಮಾತು ಗಾಂಧಿನಗರದಲ್ಲಿದೆ. ಈ ಮಾತಿಗೆ ಪೂರಕವಾಗಿ ಧ್ರುವ ಅಭಿನಯದ ಒಂದೊಂದು ಚಿತ್ರವೂ ಸಹ ಎರಡ್ಮೂರು ವರ್ಷಗಳ ಕಾಲ ಎಳೆಯಲ್ಪಟ್ಟಿವೆ.

ಇದೇ ಕಾರಣಕ್ಕೆ ಅವರ ನಟನೆಯ ಹೊಸ ಚಿತ್ರ 'ಮಾರ್ಟಿನ್' ಕಥೆ ಏನಾಗಬಹುದು ಎಂಬ ಕುತೂಹಲ ಎಲ್ಲರಿಗೂ ಸಹಜವಾಗಿಯೇ ಇದೆ. ಏಕೆಂದರೆ, ಚಿತ್ರದ ಶೂಟಿಂಗ್‌ ಆಗಸ್ಟ್ 15ರ ಭಾನುವಾರದಂದು ಶುರುವಾಗಿದ್ದು, ಬಿಡುಗಡೆ ಯಾವಾಗ? ಮುಂದಿನ ವರ್ಷವೋ, 2023ಕ್ಕೋ ಅಥವಾ ಅದರ ಮುಂದಿನ ವರ್ಷವೋ ಎಂಬುದು ಧ್ರುವ ಅಭಿಮಾನಿಗಳ ಪ್ರಶ್ನೆ.

ಆದರೆ, ಈ ಬಾರಿ ನಿರ್ದೇಶಕ ಎ.ಪಿ ಅರ್ಜುನ್ ಚಿತ್ರವನ್ನು ಬೇಗ ಮುಗಿಸಬೇಕು ಎಂಬ ಡೆಡ್ಲೈನ್ ಹಾಕಿಕೊಂಡಿದ್ದಾರೆ. ಬರೀ ಧ್ರುವ ಅಷ್ಟೇ ಅಲ್ಲ, ಅರ್ಜುನ್ ಮೇಲೂ ಚಿತ್ರ ತಡ ಮಾಡುತ್ತಾರೆ ಎಂಬ ದೂರು ಇದ್ದೇ ಇದೆ. ಇದನ್ನು ತೊಡೆದುಹಾಕಲು ಅರ್ಜುನ್ ಮತ್ತು ಧ್ರುವ ಇಬ್ಬರೂ ಒಂದು ತೀರ್ಮಾನ ತೆಗೆದುಕೊಂಡಿದ್ದಾರೆ.

ಈ ಕುರಿತು ಮುಹೂರ್ತದ ದಿನ ಮಾತನಾಡಿರುವ ಅರ್ಜುನ್, ಡಿಸೆಂಬರ್​​​​​ನಲ್ಲಿ ಚಿತ್ರೀಕರಣ ಮುಗಿಯಲಿದೆ ಎಂದಿದ್ದಾರೆ. ಸೆಪ್ಟೆಂಬರ್​​​​​ನಿಂದ ಚಿತ್ರೀಕರಣ ಪ್ರಾರಂಭವಾದರೂ 4 ತಿಂಗಳ ಅಂತರದಲ್ಲೇ ಚಿತ್ರೀಕರಣ ಮಾಡಿ ಮುಗಿಸುವ ಯೋಚನೆ ಅವರದ್ದು.

ಬೆಂಗಳೂರಷ್ಟೇ ಅಲ್ಲ, ಹೈದರಾಬಾದ್, ಮುಂಬೈ, ಮಲೇಷ್ಯಾ, ಇಸ್ತಾನ್ಬುಲ್​​ನಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. ಡಿಸೆಂಬರ್​​​ನಲ್ಲಿ ಚಿತ್ರೀಕರಣವೇನೋ ಮುಗಿಯಲಿದೆ, ಇನ್ನು ಬಿಡುಗಡೆ ಯಾವಾಗ ಎಂಬ ಪ್ರಶ್ನೆ ಸಹಜ. ಈ ಕುರಿತು ಮಾತನಾಡಿರುವ ಅವರು, ಚಿತ್ರದ ಬಿಡುಗಡೆ ದಿನಾಂಕವನ್ನೂ ಈಗಲೇ ಘೋಷಿಸಬಹುದು. ಆದರೆ, ಕೊರೊನಾ ಗೊಂದಲದಿಂದ ಬಿಡುಗಡೆ ದಿನಾಂಕ ಘೋಷಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ABOUT THE AUTHOR

...view details