ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತನ್ನ ಅಣ್ಣನ ಹುಟ್ಟುಹಬ್ಬದಂದು ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ಮಾಡಿಸಿದ್ದಾರೆ. ಬಸವೇಶ್ವರನಗರದಲ್ಲಿರೋ ಗಣಪತಿ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆ ನಡೆಯಿತು. ಪೊಗರು ಸಿನಿಮಾ ರಿಲೀಸ್ ಆಗಿಲ್ಲ, ಅವಾಗ್ಲೇ ಧ್ರುವ ಸರ್ಜಾ ಹಾಗು ನಿರ್ದೇಶಕ ನಂದ ಕಿಶೋರ್ ಕಾಂಬಿನೇಷನ್ನಲ್ಲಿ ಈ ಸಿನಿಮಾ ಶುರುವಾಗುತ್ತಿದೆ.
ಅಣ್ಣನ ಹುಟ್ಟಿದ ದಿನವೇ ಹೊಸ ಸಿನಿಮಾ ಶುರು ಮಾಡಿದ 'ಪೊಗರು' ಬಾಯ್ - ಧ್ರುವ ಸರ್ಜಾ ಹೊಸ ಸಿನಿಮಾ
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತನ್ನ ಅಣ್ಣ ಚಿರು ಹುಟ್ಟು ಹಬ್ಬದಂದು ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ಮಾಡಿಸಿದ್ದಾರೆ. ಬಸವೇಶ್ವರನಗರದಲ್ಲಿರೋ ಗಣಪತಿ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆ ನಡೆಯಿತು.
ಅಣ್ಣನ ಹುಟ್ಟಿದ ದಿನವೇ ತಮ್ಮ ಹೊಸ ಸಿನಿಮಾ ಶುರು ಮಾಡಿದ ಪೊಗರು ಬಾಯ್
ಪೊಗರು ಚಿತ್ರದ ಬಳಿಕ ಮತ್ತೊಮ್ಮೆ ಧ್ರುವ ಸರ್ಜಾ ಹಾಗು ನಂದ ಕಿಶೋರ್ ಜೊತೆಯಾಗಿದ್ದಾರೆ. ಬಚ್ಚನ್, ಬ್ರಹ್ಮಚಾರಿ ಸಿನಿಮಾಗಳ ನಿರ್ಮಾಪಕ ಉದಯ್ ಕೆ. ಮೆಹ್ತಾ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಟೈಟಲ್ ಏನು, ನಾಯಕಿ ಯಾರು ಆಗ್ತಾರೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.
Last Updated : Oct 17, 2020, 3:24 PM IST