ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಆರತಕ್ಷತೆ ಕಾರ್ಯಕ್ರಮವು ಭಜರಂಗಿ ಸಮ್ಮುಖದಲ್ಲಿಯೇ ಅದ್ಧೂರಿಯಾಗಿನಡೆಯುತ್ತಿದೆ.
ಅದ್ಧೂರಿಯಾಗಿ ನೆರವೇರಿದ ಧ್ರುವ ಸರ್ಜಾ ಆರತಕ್ಷತೆ - Kannada Actor Druva Sarja Marriage
ಆಂಜನೇಯನ ಭಕ್ತನಾಗಿರುವ ನಟ ಧ್ರುವ ಸರ್ಜಾ ಆರತಕ್ಷತೆಯ ವೇದಿಕೆ ಮಧ್ಯಭಾಗದಲ್ಲೇ ಹನುಮಂತನ ಮೂರ್ತಿ ಸ್ಥಾಪಿಸಲಾಗಿದೆ. ವೇದಿಕೆಯನ್ನು ಕಾರ್ನೇಷಿಯಾ, ಆರ್ಕೆಡ್, ಬಿಳಿ ಮತ್ತು ಕೆಂಪು ಗುಲಾಬಿಗಳಿಂದ ಅಲಂಕಾರ ಮಾಡಲಾಗಿದೆ. ಧ್ರುವ ಸರ್ಜಾ ಇಟಲಿಯಿಂದ ತರಿಸಲಾದ ವೆಸ್ಟ್ ಕೋಟ್ ಮತ್ತು ಬ್ಲೇಸರ್ ಧರಿಸಿದ್ದರೆ, ವಧು ಪ್ರೇರಣಾ ಸಬ್ಯಸಾಚಿ ವೆಡ್ಡಿಂಗ್ ಕಲೆಕ್ಷನ್ ಬಾಟಲ್ ಗ್ರೀನ್ ಲೆಹೆಂಗಾದಲ್ಲಿ ಮಿಂಚುತ್ತಿದ್ದಾರೆ.

ಆರತಕ್ಷತೆ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ತಾರೆಯರು, ರಾಜಕಾರಣಿಗಳು ಬಂದು ನೂತನ ವಧು-ವರರಿಗೆ ಶುಭ ಕೋರುತ್ತಿದ್ದಾರೆ. ಸಚಿವ ಆರ್.ಅಶೋಕ್, ನಿರ್ಮಾಪಕ ಕೆ.ಮಂಜು, ಲಹರಿ ಸಂಸ್ಥೆಯ ಲಹರಿ ವೇಲು, ಸಾರಾ ಗೋವಿಂದು, ಹಿರಿಯ ನಟ ದೊಡ್ಡಣ್ಣ, ನಿರ್ದೇಶಕ ತರುಣ್, ನಿರ್ಮಾಪಕ ಸೌಂದರ್ಯ ಜಗದೀಶ್, ಕನಕಪುರ ಶ್ರೀನಿವಾಸ್, ನಟರಾದ ಶರಣ್, ರಾಘವೇಂದ್ರ ರಾಜ್ ಕುಮಾರ್, ಗಣೇಶ್, ತಬಲನಾಣಿ, ಉಪೇಂದ್ರ, ರಮೇಶ್ ಅರವಿಂದ್, ಯಶ್, ಶ್ರೀಮುರಳಿ, ಸಂಗೀತ ನಿರ್ದೇಶಕ ಹಂಸಲೇಖ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ನವ ವಧುವರರಿಗೆ ಶುಭ ಕೋರಿದರು.