ಕರ್ನಾಟಕ

karnataka

ETV Bharat / sitara

ಮನೇಲಿ‌ ಮದ್ವೆ ಇದ್ರೂ  ಫೋಟೋಗ್ರಾಫರ್ ಮದುವೆಗೆ ಧ್ರುವ ಹಾಜರ್ - druva sarja in photographer marraige funtion

ಭರ್ಜರಿ ಮದುವೆ ತಯಾರಿಯಲ್ಲಿರೋ ಆ್ಯಕ್ಷನ್​ ಪ್ರಿನ್ಸ್​​ ಧ್ರುವ ಸರ್ಜಾ ಸಿನಿಮಾ ಫೋಟೋಗ್ರಾಫರ್​​ ಒಬ್ಬರ ಮದುವೆಗೆ ಹಾಜರಾಗಿ ಶುಭಕೋರಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಫೋಟೋಗ್ರಾಫರ್ ಮ್ಯಾರೇಜ್ ಗೆ ಧ್ರುವ ಹಾಜರ್

By

Published : Nov 16, 2019, 11:55 PM IST

ಬೆಂಗಳೂರು : ಸ್ಯಾಂಡಲ್​​ವುಡ್​​ನ ಪೊಗರ್ದ​​ಸ್ತ್​​ ಆ್ಯಕ್ಷನ್‌ ಪ್ರಿನ್ಸ್ ಇದೇ 22-23ಕ್ಕೆ ಪ್ರೇರಣಾ ಅವರ ಜೊತೆ ಹಸೆಮಣೆ ಏರ್ತಿದ್ದಾರೆ. ಆದ್ರೆ ಈ ಮಧ್ಯೆ ಪ್ರೇಕ್ಷಕರಿಗೆ ಅಚ್ಚರಿಯೊಂದನ್ನು ಮೂಡಿಸಿದ್ದಾರೆ.

ಹೌದು ಆ್ಯಕ್ಷನ್​ ಪ್ರಿನ್ಸ್​​ ಧ್ರುವ ಸರ್ಜಾ ಇನ್ನೇನು ಸಂಸಾರಿಯಾಗ್ತಿದ್ದಾರೆ. ಚಿತ್ರರಂಗದ ಎಲ್ಲಾ ಗಣ್ಯರಿಗೂ ಇನ್ವಟೇಷನ್‌ ಕೊಟ್ಟಿರೋ ಧ್ರುವ ಸರ್ಜಾ ತಮ್ಮ ‌ಮದ್ವೆಗೆ ಭರ್ಜರಿ ತಯಾರಿ ನಡೆಸ್ತಿದ್ದಾರೆ. ಇದೇ 23- 24ಕ್ಕೆ ಧ್ರುವಾ ಸರ್ಜಾ ಪ್ರೇರಣಾರ ಕೈ ಹಿಡಿಯಲಿದ್ದು, ನೆಚ್ಚಿನ‌ ನಟನಿಗೆ ಅಕ್ಷತೆ ಹಾಕೋಕೆ ಅಭಿಮಾನಿಗಳು ಕಾಯ್ತಿದ್ದಾರೆ.

ಫೋಟೋಗ್ರಾಫರ್ ಮ್ಯಾರೇಜ್ ಗೆ ಧ್ರುವ ಹಾಜರ್

ಸರ್ಜಾ ಫ್ಯಾಮಿಲಿಯಲ್ಲಿ ಮದ್ವೆ ಸಂಭ್ರಮ ತುಂಬಿದೆ. ಆದ್ರೆ ಈ ಮದ್ಯೆ ಧ್ರುವ ತಮ್ಮ ಮದುವೆ ಇದ್ರೂ ಸಹ ಫೋಟೋಗ್ರಾಫರ್ ಒಬ್ಬರ ಮದ್ವೆಗೆ ಹಾಜರಾಗಿ ಶುಭಕೋರಿ ಗಮನ ಸೆಳೆದಿದ್ದಾರೆ. ಸಿನಿಮಾದಲ್ಲಿ ಫೋಟೋಗ್ರಾಫರ್ ಆಗಿ ಕೆಲಸ ಮಾಡುವ ಸಿದ್ದು ಅವರ ಮದ್ವೆಗೆ ಹಾಜರಾಗಿರೋ ಆ್ಯಕ್ಷನ್ ಪ್ರಿನ್ಸ್ ನವದಂಪತಿಗೆ ಅಕ್ಷತೆ ಹಾಕಿ ಶುಭಕೋರಿದ್ದಾರೆ. ಸದ್ಯ ಸರ್ಜಾ‌ಮನೆಯಲ್ಲಿ ಮದುವೆ ಸಂಭ್ರಮ‌ ಮನೆಮಾಡಿದ್ದು, ಬಹದ್ದೂರ್ ಹುಡ್ಗನ ಭರ್ಜರಿ‌ ಮದ್ವೆಗೆ ಇಡೀ ಕರ್ನಾಟಕವೇ ಕಾಯ್ತಿದೆ.

ABOUT THE AUTHOR

...view details