ಕರ್ನಾಟಕ

karnataka

ETV Bharat / sitara

ದಿಗಂತ್​ ಸಿನಿಮಾಗಳ ಮೇಲೆ ಬಿತ್ತು ಡ್ರಗ್ಸ್​​ ಪ್ರಕರಣದ ಕರಿನೆರಳು! - ಕನ್ನಡ ನಟ ದಿಗಂತ್​​

ದಿಗಂತ್ ಅಭಿನಯದ ಹುಟ್ಟು ಹಬ್ಬದ ಶುಭಾಶಯಗಳು ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿ, ಮುಂದಿನ ತಿಂಗಳು ರಿಲೀಸ್ ಆಗೋದಿಕ್ಕೆ ಸಜ್ಜಾಗಿತ್ತು. ಆದರೆ ದಿಗಂತ್​​ಗೆ ಸಿಸಿಬಿ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಚಿತ್ರವನ್ನ ತಡವಾಗಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡುತ್ತಿದೆ.

Drug mafia has an impact on Digant movies
ದಿಗಂತ್​ ಸಿನಿಮಾಗಳ ಮೇಲೆ ಬಿತ್ತು ಡ್ರಗ್ಸ್​​ ಪ್ರಕರಣದ ಕರಿನೆರಳು

By

Published : Sep 17, 2020, 7:23 PM IST

ಬೆಂಗಳೂರು: ಸ್ಯಾಂಡಲ್​​ವುಡ್​​ನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೂದ್ ಪೇಡಾ ದಿಗಂತ್ ಮತ್ತು ಪತ್ನಿ ಐಂದ್ರಿತಾ ರೇ ಸಿಸಿಬಿ ವಿಚಾರಣೆಗೆ ಹಾಜರಾಗಿದ್ರು. ಈಗ ಇದರ ಎಫೆಕ್ಟ್ ದೂದ್ ಪೇಡಾ ದಿಗಂತ್ ಸಿನಿಮಾಗಳ ಮೇಲೆ ಬೀಳುವ ಸಾಧ್ಯತೆ ಇದೆ.

ದಿಗಂತ್ ಅಭಿನಯದ 'ಹುಟ್ಟು ಹಬ್ಬದ ಶುಭಾಶಯಗಳು' ಸಿನಿಮಾ ಆಲ್ ಮೋಸ್ಟ್ ಚಿತ್ರೀಕರಣ ಮುಗಿಸಿ, ಮುಂದಿನ ತಿಂಗಳು ರಿಲೀಸ್ ಆಗೋದಿಕ್ಕೆ ಸಜ್ಜಾಗಿತ್ತು. ಆದರೆ ದಿಗಂತ್​​ಗೆ ಸಿಸಿಬಿ ನೋಟಿಸ್ ನೀಡಿದ ಹಿನ್ನೆಲೆ, ಚಿತ್ರವನ್ನ ತಡವಾಗಿ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡುತ್ತಿದೆ.

ಚಿತ್ರದ ನಿರ್ದೇಶಕ ನಾಗರಾಜ್ ಮುಂದಿನ‌ ತಿಂಗಳು ಚಿತ್ರಮಂದಿರಗಳನ್ನು ತೆರೆಯಲಾಗುತ್ತಿದ್ದು, ಆಗ ದಿಗಂತ್ ನಟನೆಯ ಹುಟ್ಟು ಹಬ್ಬದ ಶುಭಾಶಯಗಳು ಸಿಮಿಮಾವನ್ನ ಬಿಡುಗಡೆ ಮಾಡಲು ಸಿದ್ದತೆ ನಡೆಸಿದ್ರು. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸಿನಿಮಾವನ್ನು ನಿರ್ಮಿಸಲಾಗಿದೆ.

ಇನ್ನು, ಸಿಸಿಬಿಯಿಂದ ದಿಗಂತ್ ಎಲ್ಲಾ ವಿಚಾರಣೆ ಮುಗಿದ ಮೇಲೆ, ಹುಟ್ಟು ಹಬ್ಬದ ಶುಭಾಶಯಗಳು ಸಿನಿಮಾವನ್ನ ರಿಲೀಸ್ ಮಾಡುತ್ತೇವ ಎಂದು ನಿರ್ದೇಶಕರು ಹೇಳುತ್ತಿದ್ದಾರೆ.

ನಾಳೆ ಕೂಡ ಮಾರಿ ಗೋಲ್ಡ್ ಸಿನಿಮಾ ಶೂಟಿಂಗ್ ಇದೆ. ಆದರೆ ಸಿಸಿಬಿ ಅಧಿಕಾರಿಗಳು ಅನುಮತಿ ಇಲ್ಲದೆ ದೂರದ ಊರಿಗೆ ಹೋಗಲು ಅವಕಾಶ ಇಲ್ಲ. ಹೀಗಾಗಿ ಮಾರಿಗೋಲ್ಡ್ ಚಿತ್ರತಂಡ ಹೊರ ರಾಜ್ಯದ ಶೂಟಿಂಗ್ ರದ್ದು ಮಾಡಿಕೊಂಡು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲು ಸಿದ್ಧತೆ ನಡೆಸಿದೆಯಂತೆ.

ABOUT THE AUTHOR

...view details