ದೊಡ್ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ರಾಘವೇಂದ್ರ ರಾಜಕುಮಾರ್ ಅವರ ಕಿರಿಯ ಪುತ್ರ ಯುವರಾಜನ ಕಲ್ಯಾಣ ಅದ್ಧೂರಿಯಾಗೇ ನಡೆಯುತ್ತಿದೆ.
'ಬೆಳೆಯುವ ಸಿರಿ ಮೊಳಕೆಯಲ್ಲಿ'... ಪುನೀತ್ ಪುತ್ರಿ ಈಗ ವಿನ್ಯಾಸಗಾರ್ತಿ - undefined
ಪುನೀತ್ ರಾಜಕುಮಾರ್ ಪುತ್ರಿ ಧೃತಿ ವಿನ್ಯಾಸಗಾರ್ತಿ. ಇದು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುದು ತಿಳಿಯುತ್ತಿದೆ.
!['ಬೆಳೆಯುವ ಸಿರಿ ಮೊಳಕೆಯಲ್ಲಿ'... ಪುನೀತ್ ಪುತ್ರಿ ಈಗ ವಿನ್ಯಾಸಗಾರ್ತಿ](https://etvbharatimages.akamaized.net/etvbharat/prod-images/768-512-3380748-thumbnail-3x2-puneeth.jpg)
ವಿನ್ಯಾಸಗಾರ್ತಿ
ಯುವರಾಜಕುಮಾರ್ ಹಾಗೂ ಶ್ರೀದೇವಿ ಅವರ ವಿವಾಹ ಆಮಂತ್ರಣ ಪತ್ರಿಕೆ ಎಲ್ಲರ ಗಮನ ಸೆಳೆಯುತ್ತಿದೆ. ಇದರ ಎಲ್ಲ ಕ್ರೇಡಿಟ್ ಪುನೀತ್ ರಾಜಕುಮಾರ ಹಿರಿಯ ಪುತ್ರಿ ಧೃತಿಗೆ ಸಲ್ಲುತ್ತದೆ. ಏಕಂದ್ರೆ ಇದರ ವಿನ್ಯಾಸ ಮಾಡಿದ್ದು ಧೃತಿ ಅನ್ನೋದು ಇಂಟ್ರೆಸ್ಟಿಂಗ್ ಸಂಗತಿ.
ಓದಿನ ಕಡೆ ಗಮನ ಕೊಡುತ್ತಾ ಆಮಂತ್ರಣ ಪತ್ರಿಕೆ ವಿನ್ಯಾಸದ ಆಲೋಚನೆ ಬೆಳಸಿಕೊಂಡಿರುವುದು ಈಕೆಯ ಕಲಾಸಕ್ತಿ ತೋರಿಸುತ್ತದೆ. ಧೃತಿಗೆ 15 ರ ಆಸುಪಾಸಿನ ವಯಸ್ಸು. ಈಗಿನಿಂದಲೇ ಈ ಹುಡುಗಿ ವಿನ್ಯಾಸಗಾರ್ತಿ ಆಗಿರೋದು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುದನ್ನು ತಿಳಿಸುತ್ತದೆ.