ಸಂಕ್ರಾಂತಿ ಮುಗಿಯುವವರೆಗೂ ಅಯ್ಯಪ್ಪ ಸ್ವಾಮಿ ಭಕ್ತರು ಮಾಲೆ ಧರಿಸಿ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಶಬರಿ ಮಲೆ ಬೆಟ್ಟ ಹತ್ತಿ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿ ಬರುತ್ತಾರೆ.
ಶಬರಿಮಲೆಗೆ ಹೋಗುತ್ತಿರುವ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಡಾ.ಶಿವರಾಜ್ ಕುಮಾರ್ ಶುಭ ಹಾರೈಕೆ - ಶಬರಿ ಮಲೆ ಭಕ್ತರಿಗೆ ಶುಭ ಹಾರೈಸಿದ ಶಿವರಾಜ್ಕುಮಾರ್
ಗುರುಸ್ವಾಮಿ ಆಗಿ ಹಿರಿಯ ನಟ ಶಿವರಾಮಣ್ಣ ಮುಖಂಡತ್ವದಲ್ಲಿ 18 ನೇ ಬಾರಿ ಶಬರಿಮಲೆ ಯಾತ್ರೆ ಹೊರಟಿರುವ ತಂಡದ ಪೂಜೆಯಲ್ಲಿ ಶಿವಣ್ಣ ಪಾಲ್ಗೊಂಡಿದ್ದರು. ಕಲೈಮಾಮಣಿ ವೀರಮಣಿ ರಾಜು ನಡೆಸಿದ ಭಕ್ತಿ ಗೀತೆಗಳು, ಭಜನೆ ಕಾರ್ಯಕ್ರಮದಲ್ಲಿ ಕೂಡಾ ಡಾ. ಶಿವರಾಜಕುಮಾರ್ ಪಾಲ್ಗೊಂಡಿದ್ದರು.
![ಶಬರಿಮಲೆಗೆ ಹೋಗುತ್ತಿರುವ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಡಾ.ಶಿವರಾಜ್ ಕುಮಾರ್ ಶುಭ ಹಾರೈಕೆ Dr. Shivarajkumar in Ayyappa swamy pooja](https://etvbharatimages.akamaized.net/etvbharat/prod-images/768-512-5434362-thumbnail-3x2-shivanna.jpg)
ಶಬರಿಮಲೆಗೆ ಹೋಗಿ ಬರುವ ನಟರಲ್ಲಿ ಡಾ. ಶಿವರಾಜ್ಕುಮಾರ್ ಕೂಡಾ ಒಬ್ಬರು. ಈ ಬಾರಿ ಶಿವಣ್ಣ ಮಾಲೆ ಧರಿಸುವ ಮುನ್ನವೇ ಭಕ್ತರ ಅಯ್ಯಪ್ಪ ಪೂಜೆಯಲ್ಲಿ ಭಾಗವಹಿಸಿ ಶುಭ ಹಾರೈಸಿ ಬಂದಿದ್ದಾರೆ. ಶ್ರೀ ಧರ್ಮಶಾಸ್ತ್ರ ಅನ್ನದಾನ ಸಮಿತಿ ಅಡಿಯಲ್ಲಿ ಗುರುಸ್ವಾಮಿ ಆಗಿ ಹಿರಿಯ ನಟ ಶಿವರಾಮಣ್ಣ ಮುಖಂಡತ್ವದಲ್ಲಿ 18 ನೇ ಬಾರಿ ಶಬರಿಮಲೆ ಯಾತ್ರೆ ಹೊರಟಿರುವ ತಂಡದ ಪೂಜೆಯಲ್ಲಿ ಶಿವಣ್ಣ ಪಾಲ್ಗೊಂಡಿದ್ದರು. ಕಲೈಮಾಮಣಿ ವೀರಮಣಿ ರಾಜು ನಡೆಸಿದ ಭಕ್ತಿ ಗೀತೆಗಳು, ಭಜನೆ ಕಾರ್ಯಕ್ರಮದಲ್ಲಿ ಕೂಡಾ ಡಾ. ಶಿವರಾಜ್ ಕುಮಾರ್ ಪಾಲ್ಗೊಂಡಿದ್ದರು.
ಅಯ್ಯಪ್ಪ ಸ್ವಾಮಿಯ ಅಭಿಷೇಕ, ಅಲಂಕಾರ, ಮಹಾಪೂಜೆ ನಂತರ ಅನ್ನದಾನ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಪ್ರಸಾದ ವಿತರಣೆ ಕೂಡಾ ಮಾಡಿದರು. ಧರ್ಮಶಾಸ್ತ್ರ ರಮೇಶ್ ರಾಮಸ್ವಾಮಿ ಅವರು 18 ನೇ ಬಾರಿ ಶಬರಿ ಮಲೆ ಯಾತ್ರೆ ಹೊರಟಿದ್ದಾರೆ, ಅವರಿಗೆ ದೇವರ ಅನುಗ್ರಹವಿರಲಿ ಎಂದು ಶಿವಣ್ಣ ಹರಸಿದರು. ಈ ವೇಳೆ ಉಪ ಮುಖ್ಯಮಂತ್ರಿ ಡಾ ಸಿ.ಎನ್. ಅಶ್ವಥ್ ನಾರಾಯಣ್, ಶಾಸಕ ಗೋಪಾಲಯ್ಯ, ಕಾರ್ಪೊರೇಟರ್ ಶಿವರಾಜ್ ಮತ್ತು ಶಬರಿ ಮಲೆ ದೇವಸ್ಥಾನದ ಅರ್ಚಕ ಬ್ರಹ್ಮಶ್ರೀ ರಾಜೀವ ತಂತ್ರಿ ಕೂಡಾ ಆಗಮಿಸಿದ್ದರು.