ಕರ್ನಾಟಕ

karnataka

ETV Bharat / sitara

ಕೇರಳದ ಅಲ್ಲೆಪ್ಪಿಯಲ್ಲಿ ಕನ್ನಡದ ‘ಹನಿಮೂನ್​’ ಶೂಟಿಂಗ್​ - ಅಲ್ಲೆಪ್ಪಿ

ಶಿವರಾಜ್​ ಕುಮಾರ್​ ಹಾಗೂ ನಿವೇದಿತಾ ಶಿವರಾಜ್​ ಕುಮಾರ್​ ಅವರ ಶ್ರೀ ಮುತ್ತು ಹಾಗೂ ಸಕ್ಕತ್​ ಸ್ಟುಡಿಯೋ ಸಹಾಯದಿಂದ ‘ಹನಿಮೂನ್’ ಎಂಬ ವೆಬ್​ ಸಿರೀಸ್​ಗೆ ಚಿತ್ರೀಕರಣ ಮಾಡಲಾಗಿದೆ.

ಹನಿಮೂನ್​ ವೆಬ್​ ಸೀರೀಸ್​

By

Published : May 11, 2019, 9:24 AM IST

Updated : May 11, 2019, 12:17 PM IST

ಬೆಂಗಳೂರು :ಚಂದನವನದಲ್ಲಿ ಎವರ್​ ಗ್ರೀನ್​ ಸ್ಟಾರ್ ಯಾರು ಎಂದು ಕೇಳಿದರೆ ಥಟ್ಟನೆ ನೆನಪಾಗುವ ಮೊದಲ ಹೆಸರು ಡಾ. ಶಿರವರಾಜ್​ ಕುಮಾರ್. ಸೆಂಚುರಿ ಸ್ಟಾರ್​ ಶಿವಣ್ಣ ಇದೀಗ ತಮ್ಮ ವೆಬ್​ ಸಿರೀಸ್​ ಚಿತ್ರೀಕರಣದಲ್ಲಿ ಕೊಂಚ ಬ್ಯುಸಿಯಾ್ಗಿದ್ದಾರೆ. ಇತ್ತೀಚಿಗೆ ಶಿವರಾಜ್​ ಕುಮಾರ್​ ಹಾಗೂ ನಿವೇದಿತಾ ಶಿವರಾಜ್​ ಕುಮಾರ್​ ಅವರ ಶ್ರೀ ಮುತ್ತು ಹಾಗೂ ಸಕ್ಕತ್​ ಸ್ಟುಡಿಯೋ ಸಹಾಯದಿಂದ ‘ಹನಿಮೂನ್’ ಎಂಬ ವೆಬ್​ ಸಿರೀಸ್​ಗೆ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರೀರಕರಣವನ್ನು ಕೇರಳದ ಅಲ್ಲೆಪಿ ಎಂಬ ಜಾಗದಲ್ಲಿ ಮಾಡಲಾಗಿದೆ. ಇದರಿಂದ ಅಲ್ಲೆಪ್ಪಿಯಲ್ಲಿ ಚಿತ್ರೀಕರಣಗೊಂಡ ಭಾರತದ ಮೊದಲ ವೆಬ್​ ಸರಣಿ ಹನಿಮೂನ್​ ಎಂದು ಹೇಳಲಾಗ್ತಿದೆ.

ಹನಿಮೂನ್

ಇನ್ನು ಹನಿಮೂನ್​​ನಲ್ಲಿ ನಾಗಭೂಷಣ್ ಮತ್ತು ಸಂಜನಾ ಮುಖ್ಯ ಭೂಮಿಕೆಯಲ್ಲಿ ಕಾಣ ಸಿಗಲಿದ್ದಾರೆ. ಹನಿಮೂನ್​ನಲ್ಲಿ ಹೆಚ್ಚು ಮಂದಿ ಮಲಯಾಳಂ ಕಲಾವಿದರೂ ಅಭಿನಯಿಸಿದ್ದಾರಂತೆ. ಕನ್ನಡದ ಬಹದ್ದೂರ್​, ಭರ್ಜರಿ ಹಾಗೂ ಯಜಮಾನ ಸಿನಿಮಾಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದ ಶ್ರೀಶ ಕೂದುವಳ್ಳಿ ಹನಿಮೂನ್​ನನ್ನು ಚಿತ್ರೀಕರಿಸಿದ್ದಾರೆ. ವಾಸುಕಿ ವೈಭವ್​ರ ಸಂಗೀತ ಸಂಯೋಜನೆಯಲ್ಲಿ ಈ ವೆಬ್​ ಸಿರೀಸ್​ ಮೂಡಿಬರಲಿದೆ.

ಹನಿಮೂನ್​ಗೆ ಕೇರಳದ ನಂತರ ಬೆಂಗಳೂರಿನಲ್ಲೂ ಶೂಟಿಂಗ್​ ನಡೆಯಲಿದೆಯಂತೆ. ‘ಹೇಟ್​ ಯು ರೋಮಿಯೋ’ ವೆಬ್​ ಸರಣಿ ಬಿಡುಗಡೆಯ ನಂತರ ಈ ಸರಣಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.

ಹನಿಮೂನ್

ಚಿತ್ರೀಕರಣದ ವೇಳೆ ಸಹಾಯ ಮಾಡಿದ ಕೇರಳದ ಅಲ್ಲೆಪ್ಪಿ ಜಿಲ್ಲಾಧಿಕಾರಿ ಕನ್ನಡದ ಸುಹಾಸ್​ರಿಗೆ ಹನಿಮೂನ್​ ತಂಡ ಕೃತಜ್ಞತೆ ಸಲ್ಲಿಸಿದೆ.

Last Updated : May 11, 2019, 12:17 PM IST

ABOUT THE AUTHOR

...view details