ಕರ್ನಾಟಕ

karnataka

ETV Bharat / sitara

ಹಾಸನದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸುವ ಮೂಲಕ ಡಾ. ರಾಜ್​​​​ಕುಮಾರ್ ಹುಟ್ಟುಹಬ್ಬ ಆಚರಣೆ

ಕೊರೊನಾ ಭೀತಿ ನಡುವೆಯೂ ಇಂದು ರಾಜ್ಯದೆಲ್ಲೆಡೆ ವರನಟ ಡಾ. ರಾಜ್​​ಕುಮಾರ್ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಗಿದೆ. ಹಾಸನದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸುವ ಮೂಲಕ ಅಣ್ಣಾವ್ರ ಬರ್ತಡೇ ಆಚರಿಸಲಾಗಿದೆ.

By

Published : Apr 24, 2020, 4:11 PM IST

Dr Rajkumar Birthday celebration
ಡಾ. ರಾಜ್​​​​ಕುಮಾರ್ ಹುಟ್ಟುಹಬ್ಬ

ಹಾಸನ: ಇಂದು ವರನಟ ಡಾ. ರಾಜ್​​ಕುಮಾರ್ ಅವರ 92ನೇ ವರ್ಷದ ಹುಟ್ಟುಹಬ್ಬ. ಲಾಕ್​ಡೌನ್​ ಆದೇಶ ಇರುವುದರಿಂದ ಅಭಿಮಾನಿಗಳು ತಾವು ಇರುವಲ್ಲಿಯೇ ಅಣ್ಣಾವ್ರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ. ಹಾಸನದಲ್ಲಿ ಕೂಡಾ 20 ಮಂದಿ ಪೌರಕಾರ್ಮಿಕರಿಗೆ ಸನ್ಮಾನ ಮಾಡುವ ಮೂಲಕ ಡಾ. ರಾಜ್​ ಬರ್ತಡೇಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಡಾ. ರಾಜ್​​​​ಕುಮಾರ್ ಹುಟ್ಟುಹಬ್ಬ ಆಚರಣೆ

ನಗರದ ಅಡ್ಲಿಮನೆ ರಸ್ತೆ, ಶಿವಜ್ಯೋತಿ ಕಲ್ಯಾಣ ಮಂಟಪ ಬಳಿ ಅಭಿಮಾನಿ ಸಂಘದಿಂದ ಏರ್ಪಡಿಸಲಾಗಿದ್ದ ಡಾ. ರಾಜ್​​​​​​ಕುಮಾರ್ ಹುಟ್ಟುಹಬ್ಬವನ್ನು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಿದರು. ನಂತರ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುವ 20 ಮಂದಿ ಪೌರಕಾರ್ಮಿಕರಿಗೆ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿ ಅವರಿಗೆ ಆಹಾರ ಪದಾರ್ಥಗಳ ಕಿಟ್​​​​​​​​ಗಳನ್ನು ನೀಡಿದರು. ಕಾರ್ಯಕ್ರಮದ ನಂತರ ಮಾತನಾಡಿದ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜು, ವರನಟ ಕನ್ನಡಿಗರ ಆರಾಧ್ಯ ದೇವರಾದ ಡಾ. ರಾಜಕುಮಾರ್ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ದೇಶವೇ ಲಾಕ್​​​ಡೌನ್​​​​ ಆಗಿರುವ ಹಿನ್ನೆಲೆ ಜನರು ತತ್ತರಿಸಿಹೋಗಿದ್ದಾರೆ. ಪೌರ ಕಾರ್ಮಿಕರು, ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಹಗಲು ರಾತ್ರಿ ಎನ್ನದೆ, ತಮ್ಮ ಜೀವವನ್ನು ಲೆಕ್ಕಿಸದೆ ಜನಗಳ ಸೇವೆಯಲ್ಲಿ ತೊಡಗಿದ್ದಾರೆ. ಈ ನಿಟ್ಟಿನಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸುವ ಮೂಲಕ ಅವರ ಸೇವೆಗೆ ಅಭಿನಂದಿಸಿ, ಪ್ರೋತ್ಸಾಹಿಸುತ್ತಿದ್ದೇವೆ ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details