ಇಡೀ ವಿಶ್ವವನ್ನೇ ಭಯಭೀತರನ್ನಾಗಿ ಮಾಡಿರುವ ಕೊರೊನಾ ಅಟ್ಟಹಾಸ ದಿನೇ ದಿನೆ ಹೆಚ್ಚಾಗುತ್ತಿದೆ. ನಾಳೆ ಜನತಾ ಕರ್ಫ್ಯೂ ಎದುರಿಸಲು ಇಡೀ ದೇಶವೇ ರೆಡಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತಿನಂತೆ, ಕೊರೊನಾ ವೈರಸ್ಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರಿಗೆ, ಪೊಲೀಸ್, ಪೌರ ಕಾರ್ಮಿಕರಿಗೆ ಒಂದು ಸಲಾಂ ಹೊಡೆಯುವ ಕಾರ್ಯಕ್ಕೆ ಸಜ್ಜಾಗಿದೆ.
ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಮುಂದಾದ ಡಾ. ರಾಜ್ಕುಮಾರ್ ಅಕಾಡೆಮಿ - Dr Rajkumar academy spreading awareness about corona
ವಿಶ್ವದಲ್ಲೇ ಈ ಮಹಾಮಾರಿ ಕೊರೊನಾ ಭೀತಿ ಹೆಚ್ಚಾಗಿದ್ದು ಒಂದು ಕಡೆಯಾದ್ರೆ, ಕರ್ನಾಟಕದಲ್ಲಿ ಕಾಲರಾ ಭೀತಿ ಶುರುವಾಗಿದೆ.ಈ ಹಿನ್ನೆಲೆಯಲ್ಲಿ ಡಾ.ರಾಜ್ ಕುಮಾರ್ ಅಕಾಡೆಮಿ ವತಿಯಿಂದ ಸಾರ್ವಜನಿಕರ ಉಪಯೋಗಕ್ಕಾಗಿ , ಕೊರೊನಾ ಹಾಗೂ ಕಾಲರಾ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಿದೆ.
![ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಮುಂದಾದ ಡಾ. ರಾಜ್ಕುಮಾರ್ ಅಕಾಡೆಮಿ Dr Rajkumar academy](https://etvbharatimages.akamaized.net/etvbharat/prod-images/768-512-6490675-thumbnail-3x2-rajsamiti.jpg)
ವಿಶ್ವದಲ್ಲೇ ಈ ಮಹಾಮಾರಿ ಕೊರೊನಾ ಭೀತಿ ಹೆಚ್ಚಾಗಿದ್ದು ಒಂದು ಕಡೆಯಾದ್ರೆ, ಕರ್ನಾಟಕದಲ್ಲಿ ಕಾಲರಾ ಭೀತಿ ಶುರುವಾಗಿದೆ.ಈ ಹಿನ್ನೆಲೆಯಲ್ಲಿ ಡಾ.ರಾಜ್ ಕುಮಾರ್ ಅಕಾಡೆಮಿ ವತಿಯಿಂದ ಸಾರ್ವಜನಿಕರ ಉಪಯೋಗಕ್ಕಾಗಿ , ಕೊರೊನಾ ಹಾಗೂ ಕಾಲರಾ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಿದೆ. ಸಾರ್ವಜನಿಕರಿಗೆ ಸಹಕಾರಿಯಾಗಲೆಂದು, ಕೊರೊನಾ ವೈರಸ್ ಮತ್ತು ಕಾಲರಾ ಸೋಂಕಿನ ಲಕ್ಷಣಗಳು ಹಾಗೂ ಅವು ಬಾರದಂತೆ ಅನುಸರಿಸಬೇಕಾದ ಕ್ರಮಗಳನ್ನು ಒಳಗೊಂಡ ಮಾಹಿತಿಯನ್ನು ಡಾ.ರಾಜ್ಕುಮಾರ್ ಅಕಾಡೆಮಿಯಿಂದ ಸಿದ್ಧಪಡಿಸಲಾಗಿದೆ. ಡಾ.ರಾಜ್ಕುಮಾರ್ ಅಕಾಡೆಮಿಯಿಂದ ಹೊರಡಿಸಿರುವ ಮಾಹಿತಿಯಲ್ಲಿ ಭಾವಚಿತ್ರಗಳು ಹಾಗೂ ಅದರ ಲಕ್ಷಣಗಳ ಬಗ್ಗೆ ಮಾಹಿತಿ ನೀಡಲಾಗಿದೆ.ಈ ಮೂಲಕ ಡಾ. ರಾಜ್ಕುಮಾರ್ ಅಕಾಡೆಮಿ ಕೊರೊನಾ ಭೀತಿ ಬಗ್ಗೆ ಜಾಗೃತಿ ಮೂಡಿಸುವ ಸಮಾಜಮುಖಿ ಕೆಲಸ ಮಾಡುತ್ತಿದೆ.