ಕರ್ನಾಟಕ

karnataka

ETV Bharat / sitara

ಶಸ್ತ್ರಚಿಕಿತ್ಸೆ ಬಳಿಕ ಶಿವಣ್ಣನಿಗೆ ಲಂಡನ್​​​ ಡಾಕ್ಟರ್ ಹೇಳಿದ ಮಾತೇನು? - ಲಂಡನ್​ ಡಾಕ್ಟರ್

ನಟ ಶಿವರಾಜಕುಮಾರ್​ ಲಂಡ್​​ನ್​​ನಲ್ಲಿ ತಮ್ಮ ಭುಜ ನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಇನ್ನಷ್ಟೆ ತವರಿಗೆ ಆಗಮಿಸಲಿರುವ ಕರುನಾಡ ಚಕ್ರವರ್ತಿ ಶಿವಣ್ಣ, ತಮಗೆ ಚಿಕಿತ್ಸೆ ನೀಡಿದ ಲಂಡನ್ ವೈದ್ಯರನ್ನು ನೆನೆದಿದ್ದಾರೆ.

ಶಿವರಾಜಕುಮಾರ್

By

Published : Jul 18, 2019, 8:22 PM IST

ಬಲಭುಜದ ನೋವಿನಿಂದ ಬಳಲುತ್ತಿದ್ದ ಶಿವರಾಜ್​ಕುಮಾರ್​ ಕಳೆದ ವಾರ ಲಂಡನ್​​ಗೆ ಹಾರಿದ್ದರು. ಅಲ್ಲಿಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ತಮ್ಮನ್ನು ಆರೈಕೆ ಮಾಡಿರುವ ಅಲ್ಲಿಯ ವೈದ್ಯ ಡಾ. ಆಂಡ್ರ್ಯೂ ವ್ಯಾಲೇಸ್ ಬಗ್ಗೆ ಶಿವಣ್ಣ ಮಾತಾಡಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಆ ವೈದ್ಯರು ತಮಗೆ ಏನು ಹೇಳಿದರು ಎಂಬುದನ್ನು ರಿವೀಲ್ ಮಾಡಿದ್ದಾರೆ.

ಶಿವಣ್ಣ ಇನ್ಮುಂದೆ ಮೊದಲಿಗಿಂತ ಹೆಚ್ಚು ಎನರ್ಜಿಟಕ್​​ ಹಾಗೂ ಆರಾಮಾಗಿ ಡಾನ್ಸ್​ ಹಾಗೂ ಫೈಟ್ ಮಾಡಬಹುದೆಂದು ಆ್ಯಂಡ್ರ್ಯೂ ಭರವಸೆ ನೀಡಿದ್ದಾರಂತೆ. ಈ ವಿಚಾರವನ್ನು ಖುಷಿಯಾಗಿ ಅಭಿಮಾನಿಗಳಿಗೆ ತಿಳಿಸಿರುವ ಕರುನಾಡ ಚಕ್ರವರ್ತಿ ಶಿವರಾಜಕುಮಾರ್​, ಬೆಂಗಳೂರಿಗೆ ವಾಪಾಸ್ ಆಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಉತ್ಸುಕನಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details