ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜಕುಮಾರ್ ಸ್ಮಾರಕದಂತೆಯೇ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಇದೀಗ ಡಾ. ಅಂಬರೀಶ್ ಸ್ಮಾರಕ ಸಹ ಅದೇ ನಿಟ್ಟಿನಲ್ಲಿ ರಚನೆ ಆಗಬೇಕು ಎಂದು ರಾಜ್ಯ ಸರ್ಕಾರ ಒಂದು ಸಮಿತಿಯನ್ನು ರಚಿಸಿದೆ.
ಇಂದು ಅಂಬರೀಶ್ ಸ್ಮಾರಕ ಸಮಿತಿಯ ಮೊದಲ ಸಭೆ - ಅಂಬರೀಶ್ ಸ್ಮಾರಕ ಸಮಿತಿ
ಅಂಬರೀಶ್ ಸ್ಮಾರಕ ಕಂಠೀರವ ಸ್ಟುಡಿಯೋದಲ್ಲಿಯೇ ನಿರ್ಮಾಣ ಆಗಲಿದೆ. ಅದಕ್ಕೆ ಮುಖ್ಯಮಂತ್ರಿ ಅಧ್ಯಕ್ಷತೆಯ ಸಮಿತಿ ರಚನೆ ಆಗಿದೆ. ಅಂಬರೀಶ್ ಪ್ರತಿಷ್ಠಾನ ಆಡಳಿತ ಮಂಡಳಿ ರೂಪುರೇಷೆ ಹಾಗೂ ಕಾರ್ಯಕ್ರಮಗಳ ನಿರ್ವಹಣೆ ಬಗ್ಗೆ ಇಂದು ಮೊದಲ ಸಭೆ ನಡೆಯಲಿದೆ.
ಇಂದು ಅಂಬರೀಶ್ ಸ್ಮಾರಕ ಸಮಿತಿಯ ಮೊದಲ ಸಭೆ
ಅಂಬರೀಶ್ ಸ್ಮಾರಕ ಕಂಠೀರವ ಸ್ಟುಡಿಯೋದಲ್ಲಿಯೇ ನಿರ್ಮಾಣ ಆಗಲಿದೆ. ಅದಕ್ಕೆ ಮುಖ್ಯಮಂತ್ರಿ ಅಧ್ಯಕ್ಷತೆಯ ಸಮಿತಿ ರಚನೆ ಆಗಿದೆ. ಅಂಬರೀಶ್ ಪ್ರತಿಷ್ಠಾನ ಆಡಳಿತ ಮಂಡಳಿ ರೂಪುರೇಷೆ ಹಾಗೂ ಕಾರ್ಯಕ್ರಮಗಳ ನಿರ್ವಹಣೆ ಬಗ್ಗೆ ಇಂದು ಮೊದಲ ಸಭೆ ನಡೆಯಲಿದೆ.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ, ವಾರ್ತಾ ಇಲಾಖೆ ಆಯುಕ್ತರು, ಡಾ. ಅಂಬರೀಶ್ ಪತ್ನಿ ಸುಮಲತಾ, ಪುತ್ರ ಅಭಿಷೇಕ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರತಿನಿಧಿ, ನಿರ್ಮಾಪಕರ ಸಂಘದ ಪ್ರತಿನಿಧಿ ಭಾಗಿಯಾಗಲಿದ್ದಾರೆ.