ಕರ್ನಾಟಕ

karnataka

ETV Bharat / sitara

ಸಖತ್​ ಸದ್ದು ಮಾಡುತ್ತಿದೆ "ಡೋಂಟ್ ಬ್ಲೇಮ್ ಬೆಂಗಳೂರು" ಸಾಂಗ್ - ಡೋಂಟ್ ಬ್ಲೇಮ್ ಬೆಂಗಳೂರು ಕನ್ನಡ ಹಾಡು ಬಿಡುಗಡೆ

ಎಂ.ಜೆ ತಿಮ್ಮೇಗೌಡ ಸಾಹಿತ್ಯ ಮತ್ತು ಸಂಗೀತ ನೀಡಿರುವ ಈ ಹಾಡು ಗಾಯಕ ಅಶ್ವಿನ್ ಶರ್ಮಾ ಕಂಠದಲ್ಲಿ ಮೂಡಿಬಂದಿದೆ.

Dont Blame Bangalore Song Release
ಡೋಂಟ್ ಬ್ಲೇಮ್ ಬೆಂಗಳೂರು ಕನ್ನಡ ಹಾಡು ಬಿಡುಗಡೆ

By

Published : Jun 6, 2021, 10:56 AM IST

Updated : Jun 6, 2021, 11:04 AM IST

ತಾವು ಕಂಡ ಕನಸುಗಳನ್ನು ನನಸು ಮಾಡುವ ಹಾಗು ಲಕ್ಷಾಂತರ ಜನರಿಗೆ ಬದುಕು ಕಟ್ಟಿಕೊಟ್ಟಿರುವ ಏಕೈಕ ನಗರ ಬೆಂಗಳೂರು. ಆದರೆ ಕೊರೊನಾ ಎಂಬ ಹೆಮ್ಮಾರಿ ಈ ಸಿಲಿಕಾನ್‌ ಸಿಟಿಗೆ ವಕ್ಕರಿಸಿ, ಸಾವಿರಾರು ಜನರ ಬದುಕಿನ ಜೊತೆಗೆ ಪ್ರಾಣವನ್ನು ಕಸಿದುಕೊಂಡಿದೆ. ಈ ಕಾರಣಕ್ಕಾಗಿ ಸಾವಿರಾರು ಜನರು ಬೆಂಗಳೂರನ್ನು ತೊರೆದು, ರೋಗದ ಭಯಕ್ಕೆ ಬೆಂಗಳೂರು ಸೇಫ್ ಅಲ್ಲಾ ಅಂತ ಜನರು ಬೆಂಗಳೂರನ್ನು ಬೈದುಕೊಂಡು ತಮ್ಮೂರಿಗೆ ಹೋಗಿದ್ದಾರೆ.

ಅಂತವರನ್ನು ಗಮನದಲ್ಲಿ ಇಟ್ಟುಕೊಂಡು ಯುವ ಗೀತರಚನೆಕಾರ ಎಂಜೆ ತಿಮ್ಮೇಗೌಡ, ಡೋಂಟ್ ಬ್ಲೇಮ್ ಬೆಂಗಳೂರು ಎಂಬ ಹಾಡು ಬರೆದು, ಸಂಗೀತ ನೀಡಿದ್ದಾರೆ‌. ಸದ್ಯ ಈ ಹಾಡು, ಆರ್ ಜೆ ಸುನಿಲ್ ಪ್ರಾಂಕ್ ಕಾಲ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗಿದೆ.

ಎಂಜೆ ತಿಮ್ಮೇಗೌಡ

ಎಂಜೆ ತಿಮ್ಮೇಗೌಡ ಸಾಹಿತ್ಯ ಮತ್ತು ಸಂಗೀತ ನೀಡಿರುವ ಹಾಡು ಗಾಯಕ ಅಶ್ವಿನ್ ಶರ್ಮಾ ಕಂಠದಲ್ಲಿ ಮೂಡಿಬಂದಿದೆ. ಈ ಹಾಡಿನ ವಿಡಿಯೋದಲ್ಲಿ ನಟ ವಸಿಷ್ಠಸಿಂಹ, ಅನಿರುದ್ಧ, ನಟಿ ಪ್ರಣೀತಾ ಸುಭಾಷ್, ಸೋನುಗೌಡ, ಹರ್ಷಿಕಾ ಪೂಣಚ್ಚ ರೂಪಿಕಾ, ಆರ್ ಜೆ ನೇತ್ರಾ, ಬಿಗ್ ಬಾಸ್ ಖ್ಯಾತಿಯ ಗೀತಾ ಭಟ್, ಗಾಯಕರಾದ ಅನುರಾಧಾ ಭಟ್, ಡಾ. ಶಮಿತಾ ಮಲ್ನಾಡ್, ಸಂತೋಷ್ ವೆಂಕಿ ಕಾಣಿಸಿಕೊಂಡಿದ್ದಾರೆ.

ಇನ್ನು ಮಾಧ್ಯಮ ಲೋಕದಲ್ಲಿ ಹಲವು ವರ್ಷಗಳ ಕೆಲಸ ಮಾಡಿರುವ ಎಂಜೆ ತಿಮ್ಮೇಗೌಡ, ನಾದಬ್ರಹ್ಮ ಹಂಸಲೇಖ ಸಂಗೀತ ಸ್ಕೂಲ್‌ನಲ್ಲಿ, ಸಂಗೀತಾಭ್ಯಾಸ ಮಾಡಿ ಕೊರೊನಾ ಸಂದರ್ಭವನ್ನೇ ಇಟ್ಟುಕೊಂಡು, ಡೋಂಟ್ ಬ್ಲೆಮ್ ಬೆಂಗಳೂರು ಹಾಡು ಮಾಡಿದ್ದಾರೆ.

Last Updated : Jun 6, 2021, 11:04 AM IST

ABOUT THE AUTHOR

...view details