ದೇಶಾದ್ಯಂತ ಕೊರೊನಾ ಮಹಾಮಾರಿ ತಾಂಡವ ಮುಂದುವರೆದಿದೆ. ಈ ಸಂದರ್ಭ 18 ವರ್ಷದವರಿಂದ ಹಿಡಿದು 45 ವರ್ಷ ಮೇಲ್ಪಟ್ಟದವರು ಕೋವಿಡ್ ಲಸಿಕೆ ಪಡೆಯುವಂತೆ ಆಯಾ ರಾಜ್ಯ ಸರ್ಕಾರ ಹೇಳಿದೆ. ಅದರಂತೆ ಜನಸಾಮಾನ್ಯರಿಂದ ಹಿಡಿದು ಸಿನಿಮಾ ನಟ, ನಟಿಯರು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.
ಕೋವಿಡ್ ವ್ಯಾಕ್ಸಿನ್ ಬಗ್ಗೆ ಭಯ ಪಡಬೇಡಿ: ನಟ ದಿಗಂತ್, ಐಂದ್ರಿತಾ ಕಿವಿಮಾತು - ನಟ ದಿಗಂತ್
ಕೊರೊನಾ ಲಸಿಕೆ ಬಗ್ಗೆ ಯಾವುದೇ ಭಯ ಪಡಬೇಡಿ. ಪ್ರತಿಯೊಬ್ಬರು ಲಸಿಕೆ ಪಡೆದು ಕೊರೊನಾ ಮಟ್ಟಹಾಕಿ ಎಂದು ಮನಸಾರೆ ಜೋಡಿ ದಿಗಂತ್ ಹಾಗೂ ಐಂದ್ರಿತಾ ರೇ ಕಿವಿಮಾತು ಹೇಳಿದ್ದಾರೆ.
ಈಗಾಗಲೇ ಸ್ಯಾಂಡಲ್ವುಡ್ನಲ್ಲಿ ಹಲವು ತಾರೆಯರು ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ಮನಸಾರೆ ಚಿತ್ರದ ಜೋಡಿ ದಿಗಂತ್ ಹಾಗೂ ಐಂದ್ರಿತಾ ರೇ ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಅಲ್ಲದೆ ವ್ಯಾಕ್ಸಿನ್ ಹೇಗೆ ಪಡೆಯುವುದು ಎನ್ನುವುದರ ಬಗ್ಗೆ ದಿಗಂತ್ ಹಾಗೂ ಐಂದ್ರಿತಾ ಸರಳವಾಗಿ ಹೇಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.
ಆರೋಗ್ಯ ಸೇತು ಆ್ಯಪ್ ಮೂಲಕ ಪ್ರತಿಯೊಬ್ಬರು ತಮ್ಮ ಹೆಸರನ್ನ ಹೇಗೆ ನೋಂದಾಯಿಸಿಕೊಳ್ಳಬೇಕು ಎಂಬುದನ್ನ ನಟ ದಿಗಂತ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ಕೊರೊನಾ ಲಸಿಕೆ ಬಗ್ಗೆ ಯಾವುದೇ ಭಯ ಪಡಬೇಡಿ, ಪ್ರತಿಯೊಬ್ಬರು ಲಸಿಕೆ ಪಡೆದು ಕೊರೊನಾ ಮಟ್ಟಹಾಕಿ ಎಂದು ಕಿವಿಮಾತು ಹೇಳಿದ್ದಾರೆ.