'ಟಗರು' ಚಿತ್ರದಲ್ಲಿ ಧನಂಜಯ್ ಡಾಲಿ ಪಾತ್ರ ಮಾಡಿದ್ದೇ ಮಾಡಿದ್ದು. ಅವರ ನಸೀಬು ಬದಲಾಗಿಹೋಯ್ತು. ಆ ಸಿನಿಮಾ ನಂತರ ಧನಂಜಯ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಹೆಸರಾದರು. ರಾಮ್ಗೋಪಾಲ್ ವರ್ಮಾ ನಿರ್ದೇಶನದ ತೆಲುಗು-ಕನ್ನಡ ಸಿನಿಮಾ 'ಭೈರವ ಗೀತ' ಚಿತ್ರದಲ್ಲೂ ನಟಿಸಿ ತೆಲುಗು ಜನರಿಗೆ ಪರಿಚಿತರಾದರು.
'ಪಾಪ್ಕಾರ್ನ್ ಮಂಕಿ ಟೈಗರ್' ಚಿತ್ರದ ಶೂಟಿಂಗ್ ಸದ್ಯಕ್ಕೆ ಧನಂಜಯ್ ಸೂರಿ ನಿರ್ದೇಶನದ 'ಪಾಪ್ಕಾರ್ನ್ ಮಂಕಿ ಟೈಗರ್' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಪೋಸ್ಟರ್, ಟೀಸರ್ನಿಂದಲೇ ಹವಾ ಎಬ್ಬಿಸಿತ್ತು. ಇದೀಗ ಬಿಡುಗಡೆಗೂ ಮುನ್ನವೇ ಈ ಸಿನಿಮಾದ ವಿತರಣೆ ಹಕ್ಕು ಭಾರೀ ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗುತ್ತಿದೆ. ಗಾಂಧಿನಗರದ ಸಿನಿ ಪಂಡಿತರ ಪ್ರಕಾರ ಈ ಚಿತ್ರ ರಿಲೀಸ್ಗೂ ಮೊದಲೇ ಬರೊಬ್ಬರಿ 10 ಕೋಟಿ ರೂಪಾಯಿ ವ್ಯಾಪಾರ ಮಾಡಿದೆ ಎನ್ನಲಾಗುತ್ತಿದೆ. ಧನಂಜಯ್ - ಸೂರಿ ಕಾಂಬಿನೇಷನ್ ಇರುವ ಈ ಸಿನಿಮಾವನ್ನು 4 ಕೋಟಿ ರೂಪಾಯಿ ಮೊತ್ತಕ್ಕೆ ಪುಷ್ಕರ್ ಫಿಲಂಸ್ ಮತ್ತು ಮೋಹನ್ ಫಿಲಂಸ್ ಖರೀದಿ ಮಾಡಿದೆ. ಈ ಮೂಲಕ ಡಾಲಿ ಧನಂಜಯ ನಾಯಕನಾಗಿ ಅಭಿನಯದ ಸಿನಿಮಾವೊಂದು ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತಕ್ಕೆ ವಿತರಣೆಯ ಹಕ್ಕು ಮಾರಾಟವಾಗಿದೆ.
ಈ ಸಿನಿಮಾದ ವಿತರಣೆ ಹಕ್ಕು, ಥಿಯೇಟರ್ ಡಿಮ್ಯಾಂಡ್ ಒಂದು ಕಡೆಯಾದರೆ,ಇನ್ನೊಂದು ಕಡೆ ಧನಂಜಯ್ ಮತ್ತು ಸೂರಿ ಕಾಂಬಿನೇಷನ್ನಿಂದ ಡಿಜಿಟಲ್ ಮಾರ್ಕೆಟ್ನಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಕನ್ನಡದ ಟಾಪ್ ಎಂಟರ್ಟೈನ್ಮೆಂಟ್ ಚಾನೆಲ್ಗಳು ದೊಡ್ಡ ಮೊತ್ತಕ್ಕೆ ಟಿವಿ ರೈಟ್ಸ್ ಕೊಡಲು ಮುಂದಾಗಿವೆಯಂತೆ. ಜೊತೆಗೆ ಡಿಜಿಟಲ್ ರೈಟ್ಸ್ ಕೂಡಾ ಕೋಟಿ ರೂಪಾಯಿಗೆ ಮಾತುಕತೆ ಆಗಿದೆಯಂತೆ. ನಿರ್ದೇಶಕ ಸೂರಿ, ರಾ ಶೈಲಿಯ ಮೇಕಿಂಗ್, ಡಾಲಿ ಧನಂಜಯ ವಿಭಿನ್ನ ಶೇಡ್ , ಪಂಚಿಂಗ್ ಡೈಲಾಗ್ ಗಳು ಈ ಚಿತ್ರದ ಪಿಲ್ಲರ್ ಎನ್ನಲಾಗುತ್ತಿದೆ.
ನಿರ್ದೇಶಕ ಸೂರಿ, ಡಾಲಿ ಧನಂಜಯ್ ಪಕ್ಕಾ ಮಾಸ್ ಎಂಟರ್ಟೈನ್ಮೆಂಟ್ ಎಂದು ಹೇಳಲಾಗುತ್ತಿರುವ 'ಪಾಪ್ಕಾರ್ನ್ ಮಂಕಿ ಟೈಗರ್', ಸಿನಿಮಾ ಎಲ್ಲಾ ವಲಯಗಳಿಂದ ರಿಲೀಸ್ಗೂ ಮುನ್ನವೇ ಬರೊಬ್ಬರಿ 10 ಕೋಟಿ ರೂಪಾಯಿ ವ್ಯಾಪಾರ ಮಾಡಿದ್ದು, ಸಿನಿಮಾ ಬಿಡುಗಡೆ ಆಗಿ ಮೊದಲ ವಾರದಲ್ಲೇ 7-8ಕೋಟಿ ರೂಪಾಯಿ ಲಾಭ ಗಳಿಸುವ ಸೂಚನೆ ನೀಡಿದೆ ಎಂದು ಕನ್ನಡ ಸಿನಿಮಾ ವಿತರಕ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿದೆ. ರಾಜ್ಯಾದ್ಯಂತ ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ವಿತರಕರು ಈ ವಾರ ಥಿಯೇಟರ್ ಪಟ್ಟಿ ಅನೌನ್ಸ್ ಮಾಡಲಿದ್ದಾರಂತೆ. ಒಟ್ಟಾರೆ ಈ ಸಿನಿಮಾ ಕ್ರೇಜ್ ಹೇಗಿದೆ ಎನ್ನುವುದಕ್ಕೆ ರಿಲೀಸ್ಗೂ ಮುನ್ನ 10 ಕೋಟಿ ವ್ಯಾಪಾರ ಆಗಿರುವುದು ಸಣ್ಣ ಉದಾಹರಣೆ ಎನ್ನಬಹುದು.
'ಪಾಪ್ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ಡಾಲಿ ಧನಂಜಯ್