ಕಳೆದ ಎರಡು ದಿನಗಳ ಹಿಂದೆ ವಿಶ್ವಾದ್ಯಂತ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಂ, ಟ್ವಿಟ್ಟರ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳ ಸರ್ವರ್ ಡೌನ್ ಆಗಿ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಕೆಲವರಂತೂ ಸೋಶಿಯಲ್ ಮೀಡಿಯಾಗಳನ್ನು ಬಳಸಲು ಆಗದೆ ತಾವು ಏನೋ ಕಳೆದುಕೊಂಡಿದ್ದೇವೆ ಎಂಬಂತೆ ಕೂಡಾ ವರ್ತಿಸಿದ್ದರು.
ನಮಗೆ, ತಮಿಳುನಾಡಿಗೂ ನೀರು ಸಿಗುವಷ್ಟು ಮಳೆಯಾಗಲಿ.. ವರುಣನನ್ನು ಪ್ರಾರ್ಥಿಸಲು ಡಾಲಿ ಕೋರಿಕೆ - undefined
ಸೋಶಿಯಲ್ ಮೀಡಿಯಾ ಬಗ್ಗೆ ಬಿಟ್ಟು ಯೋಚಿಸಬೇಕಾದ ವಿಷಯದ ಬಗ್ಗೆ ಗಮನ ಕೊಡಿ. ನೀರನ್ನು ಮಿತವಾಗಿ ಬಳಸಿ, ಉತ್ತಮ ಮಳೆ ಆಗಲಿ, ನಮಗೂ ನೀರು ದೊರೆತು ಪಕ್ಕದ ರಾಜ್ಯಕ್ಕೂ ಕೊಡುವಷ್ಟು ಮಳೆ ಬೀಳುವಂತೆ ಪ್ರಾರ್ಥಿಸಿ ಎಂದು ನಟ ಧನಂಜಯ್ ಮನವಿ ಮಾಡಿದ್ದಾರೆ.

ಹೆಚ್ಚಾಗಿ ಯುವಜನತೆ ಈ ವಿಚಾರದಲ್ಲಿ ತೊಂದರೆಗೆ ಸಿಲುಕಿದ್ದವರಂತೆ ಆಗಿದ್ದರು. ಆದರೆ ಇವರೆಲ್ಲರ ಈ ವರ್ತನೆಗೆ ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಕಳವಳ ವ್ಯಕ್ತಪಡಿಸಿದ್ದಾರೆ. 'ಸೋಶಿಯಲ್ ಮೀಡಿಯಾಗಳ ವಿಚಾರವಾಗಿ ಕೆಲವರ ಮಾತುಗಳನ್ನು ಕೇಳಿದ್ರೆ ನಗು ಬರುತ್ತೆ. ನಾವು ಯೊಚಿಸಬೇಕಾದ ವಿಷಯವೇ ಬೇರೆ ಇದೆ. ಪಕ್ಕದ ರಾಜ್ಯ ಚೆನ್ನೈನಲ್ಲಿ ಕುಡಿಯಲು ನೀರಿಲ್ಲದೆ ಜನ ಒದ್ದಾಡುತಿದ್ದಾರೆ. ಆದರೆ ಅವರಿಗೆ ಕೊಡುವಷ್ಟು ನೀರೂ ಕೂಡಾ ನಮ್ಮ ರಾಜ್ಯದಲ್ಲಿಲ್ಲ. ಸರಿಯಾಗಿ ಮಳೆಯಾಗದಿದ್ರೆ ನಮಗೂ ಕೂಡಾ ನೀರಿನ ಸಮಸ್ಯೆ ಎದುರಾಗಲಿದೆ. ಒಂದು ವೇಳೆ ಜಗತ್ತಿನಲ್ಲಿ ಮುಂದೇನಾದ್ರೂ ಯುದ್ಧ ಸಂಭವಿಸಿದರೆ ಅದು ನೀರಿಗಾಗಿ ಎನ್ನುವ ಮಾತೂ ಕೇಳಿಬರುತ್ತಿದೆ.
ಇಷ್ಟೆಲ್ಲಾ ಸಮಸ್ಯೆಗಳಿರುವಾಗ ಅದನ್ನು ಬಿಟ್ಟು ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಇಷ್ಟು ಯೋಚಿಸುವುದು ಅರ್ಥವಿಲ್ಲ. ಯೋಚಿಸಬೇಕಾದ ವಿಷಯಗಳ ಬಗ್ಗೆ ಗಮನ ಕೊಡಿ. ನೀರನ್ನು ಹಿತಮಿತವಾಗಿ ಬಳಸಿ. ಉತ್ತಮ ಮಳೆ ಆಗಲಿ, ನಮಗೂ ನೀರು ಸಿಕ್ಕಿ ಪಕ್ಕದ ರಾಜ್ಯಕ್ಕೂ ಕೊಡುವಷ್ಟು ಮಳೆಯಾಗುವಂತೆ ಪ್ರಾರ್ಥಿಸಿ' ಎಂದು ಹೇಳುವ ಮೂಲಕ ಯುವ ಸಮೂಹಕ್ಕೆ ಮಾತಿನಲ್ಲೇ ಚಾಟಿ ಬೀಸಿದ್ದಾರೆ ಈ ಭೈರವ. ದ.ರಾ. ಬೇಂದ್ರೆಯವರ 'ಇಳಿದು ಬಾ ತಾಯೇ ಇಳಿದು ಬಾ' ಕವಿತೆಯನ್ನು ಹಾಡುವ ಮೂಲಕ ಧನಂಜಯ್ ನೀರಿನ ಬಗ್ಗೆ ಜಾಗೃತಿ ವಹಿಸುವಂತೆ ಎಲ್ಲರಲ್ಲೂ ಮನವಿ ಮಾಡಿದ್ದಾರೆ.