ಡಾಲಿ ಧನಂಜಯ್ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು, ಬ್ಯಾನರ್‌ಗೆ ಡಾಲಿ ಪಿಕ್ಚರ್ಸ್ ಎಂದು ಹೆಸರಿಟ್ಟಿದ್ದಾರೆ. ಜೊತೆಗೆ ತಮ್ಮ ಬ್ಯಾನರ್‌ನಿಂದ ನಿರ್ಮಾಣವಾಗಲಿರುವ ಮೊದಲ ಚಿತ್ರಕ್ಕೆ 'ಬಡವ ರಾಸ್ಕಲ್' ಎಂದು ಟೈಟಲ್ ಇಟ್ಟಿದ್ದಾರೆ.
ಈ ಚಿತ್ರದ ಟೈಟಲ್ ಪೋಸ್ಟರ್ನನ್ನು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಲಾಂಚ್ ಮಾಡಿ 'ಬಡವ ರಾಸ್ಕಲ್'ಗೆ ಬೆನ್ನು ತಟ್ಟಿದ್ದಾರೆ. ಇನ್ನೂ ವೃತ್ತಿಯಲ್ಲಿ ಕೊರಿಯರ್ ಬಾಯ್ ಆಗಿ ಕೆಲಸ ಮಾಡಿರುವ ಶಂಕರ್‌ಗುರು ಎಂಬ ಹೊಸ ನಿರ್ದೇಶಕ ಡಾಲಿ ನಿರ್ಮಾಣದ ಮೊದಲ ಚಿತ್ರ" ಬಡವ ರಾಸ್ಕಲ್"ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ.
ಬಡವ ರಾಸ್ಕಲ್ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಆಗಸ್ಟ್ 23 ರಂದು ಡಾಲಿ ಧನಂಜಯ್ ಹುಟ್ಟುಹಬ್ಬದಂದು ಸಿನಿಮಾ ಸೆಟ್ಟೇರಲಿದೆ. ಇನ್ನೂ ಈ ಚಿತ್ರದ ಟೈಟಲ್ನನ್ನು ವಿಕಟಕವಿ ಯೋಗರಾಜ್ ಭಟ್ ಕೊಟ್ಟಿದ್ದು, ಚಿತ್ರದಲ್ಲಿ ಡಾಲಿಗೆ ನಾಯಕಿಯಾಗಿ ಅಮೃತಾ ಕಾಣಿಸಲಿದ್ದಾರೆ.
ಸಾಮಾನ್ಯ ಶಿಕ್ಷಕರ ಮಗನಾಗಿದ್ದ ನಾನು ಎಂಜಿನಿಯರಿಂಗ್ ಓದಿ, ಈಗ ನಟನಾಗಿದ್ದೇನೆ. ಇಷ್ಟು ದಿನ ನಟನಾಗಿದ್ದ ನಾನು ಈಗ ನಿರ್ಮಾಪಕನಾಗಿದ್ದೇನೆ. ಬಹಳಷ್ಟು ಜನ ಇಷ್ಟು ಬೇಗ ನಿರ್ಮಾಪಕನಾಗುವುದು ಬೇಕಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಇಲ್ಲಿಗೆ ಎಲ್ಲರೂ ಕನಸುಗಳನ್ನು ಮಾರಾಟ ಮಾಡಲು ಬರುತ್ತಾರೆ. ನಾನು ಇಷ್ಟು ದಿನ ಬೇರೆಯವರ ಕನಸಿಗಾಗಿ ಕೆಲಸ ಮಾಡುತ್ತಿದ್ದೆ. ಈಗ ನನ್ನ ಕನಸಿಗಾಗಿಯೇ ಕೆಲಸ ಮಾಡಲು ಆರಂಭಿಸಿದ್ದೇನೆ ಎಂದು ಡಾಲಿ ಧನಂಜಯ್ ತಮ್ಮ ಕನಸಿನ ಚಿತ್ರದ ಬಗ್ಗೆ ಹೇಳಿದ್ದಾರೆ.