ಸ್ಯಾಂಡಲ್ವುಡ್ನ ಡಾಲಿ ಧನಂಜಯ್ ನಟನೆಯಲ್ಲಿ ಮಾತ್ರ ಭಯಂಕರ ಅಲ್ಲ, ಬರವಣಿಗೆಯಲ್ಲೂ ಎತ್ತಿದ ಕೈ. ಸಿನಿಮಾದಲ್ಲಿ ಗನ್ ಹಿಡಿದು ಅಬ್ಬರಿಸೊದು ಗೊತ್ತು, ಪೆನ್ ಹಿಡಿದು ಸಾಹಿತ್ಯ ಬರೆಯೋಕು ಗೊತ್ತು ಎಂದು ಈಗಾಗಲೇ ಸಾಬೀತುಪಡಿಸಿದ್ದಾರೆ.
ಕುವೆಂಪು ಸಾಹಿತ್ಯಕ್ಕೆ ತಲೆದೂಗಿದ 'ಡಾಲಿ' ಧನಂಜಯ್....! - undefined
ಡಾಲಿ ಧನಂಜಯ್ ನಟನೆಯಲ್ಲಿ ಮಾತ್ರವಲ್ಲದೇ ಸಾಹಿತ್ಯ ಬರೆಯುವುದರಲ್ಲೂ ಎತ್ತಿದ ಕೈ ಎಂದು ಸಾಭೀತುಪಡಿಸಿದ್ದಾರೆ. ಅದಲ್ಲದೇ ಆಗಾಗ ಕನ್ನಡ ಪದ್ಯಗಳನ್ನ ಓದಿ ಸಂತಸ ಪಡಿ ಎಂದು ತಮ್ಮ ಅಭಿಮಾನಿಗಳಿಗೆ ಹೇಳಿದ್ದಾರೆ.
ಟಗರು ಸಿನಿಮಾದ ನಂತರ ತನ್ನ ಖದರ್ ಹೆಚ್ಚಿಸಿಕೊಂಡ ನಟ ಧನಂಜಯ್, ಉತ್ತಮ ನಟ ಮಾತ್ರ ಅಲ್ಲ ಒಳ್ಳೆ ಬರವಣಿಗೆಯಲ್ಲೂ ಛಾಪು ಮೂಡಿಸಲು ಹೊರಟಿದ್ದಾರೆ. ಬ್ಯೂಟಿ ಕ್ವೀನ್ ಹರಿಪ್ರಿಯಾ ಅಭಿನಯದ 25ನೇ ಚಿತ್ರ 'ಡಾಟರ್ ಆಫ್ ಪಾರ್ವತಮ್ಮ' ಚಿತ್ರದಲ್ಲಿ ಒಳ್ಳೆಯ ಸಾಹಿತ್ಯ ಬರೆಯುವುದರ ಮೂಲಕ ಸೈ ಅನಿಸಿಕೊಂಡಿದ್ದಾರೆ. ಅಲ್ಲದೆ ಈಗ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿ ಇರುವ ಡಾಲಿ ತಮಗೆ ಸಿಕ್ಕ ಬಿಡುವಿನ ವೇಳೆಯಲ್ಲಿ ಮನೆಯಲ್ಲಿ ಏನಾದರೊಂದು ಸಾಹಿತ್ಯ ಅಥವಾ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಡುತ್ತಾರೆ.
ಡಾಲಿ ತಮ್ಮ ಫ್ಯಾನ್ಸ್ಗೆ ಸಿನಿಮಾಗಳ ಮೂಲಕ ಮಾತ್ರವಲ್ಲದೇ, ಬೇರಾವುದಾದರು ವಿಷಯಗಳ ಕುರಿತು ಮಾಹಿತಿ ಹಂಚುತ್ತಾ, ಸೋಷಿಯಲ್ ಮೀಡಿಯಾದಲ್ಲಿ ಕನೆಕ್ಟ್ ಆಗಿಯೇ ಇರ್ತಾರೆ. ಈ ಬಾರಿ ಕೊಂಚ ಡಿಫರೆಂಟ್ ಆಗಿ ಫ್ಯಾನ್ಸ್ ಗೆ ಸಂದೇಶವೊಂದನ್ನ ನೀಡಿದ್ದಾರೆ. ಅದೇನೆಂದರೆ, ರಾಷ್ಟ್ರ ಕವಿ ಕುವೆಂಪು ಅವರ ನವಿಲಿನ ವರ್ಣನೆಯ ಕವಿತೆಯನ್ನ ತಾವು ಓದಿ ಹೇಳುವ ಮೂಲಕ ನೀವು ಆಗಾಗ ಓದುತ್ತಿರಿ ಎಂದು ಕವಿಪ್ರೇಮವನ್ನ ತೋರಿಸಿದ್ದಾರೆ.