ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಪಾತ್ರಗಳನ್ನ ಮಾಡುತ್ತಾ ಸ್ಟಾರ್ ಡಮ್ ಹೆಚ್ಚಿಸಿಕೊಳ್ಳುತ್ತಿರುವ ನಟ ಡಾಲಿ ಧನಂಜಯ್. ರತ್ನನ್ ಪ್ರಪಂಚದ ರತ್ನಾಕರನಾಗಿ ಮಿಂಚಿದ ಧನಂಜಯ್, ಇದೀಗ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಬಡವ ರಾಸ್ಕಲ್.
ಸದ್ಯ ಈ ಚಿತ್ರದ ಟ್ರೈಲರ್ ಬಿಡುಗಡೆ ಆಗಿ, ಸಿನಿಮಾ ಪ್ರಿಯರಿಗೆ ಸಕತ್ ಕಿಕ್ ಕೊಡುತ್ತಿದೆ. ಸದ್ಯ ಟ್ರೇಲರ್‌ನಲ್ಲಿ ಧನಂಜಯ್ ಸ್ನೇಹಿತರಿಗಾಗಿ ಪ್ರಾಣ ಬೇಕಾದರೂ ಕೊಡೋಕೆ ರೆಡಿಯಾಗಿರೋ, ಮಧ್ಯಮ ವರ್ಗದ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಆಟೋ ಡ್ರೈವರ್ ಆಗಿ ಡಾಲಿ ಮಿಂಚಿದ್ದಾರೆ. ಇನ್ನು ಧನಂಜಯ್ಗೆ ಪ್ರೀತಿಸುವ ಹುಡುಗಿಯಾಗಿ ಅಮೃತ ಅಯ್ಯಂಗಾರ್, ಸಖತ್ ಬೋಲ್ಡ್ ಆಗಿ ಅಭಿನಯಿಸಿದ್ದಾರೆ.
ಜೊತೆಗೆ ತಾಯಿ ಸೆಂಟಿಮೆಂಟ್ ಸೇರಿದಂತೆ ಸಾಕಷ್ಟು ಆ್ಯಕ್ಷನ್ ದೃಶ್ಯಗಳು ಟ್ರೇಲರ್‌ನಲ್ಲಿ ಹೈಲೈಟ್ ಆಗಿದೆ. ಇನ್ನು ಟ್ರೈಲರ್ ಕೊನೆಯಲ್ಲಿ ಬರುವ ಡೈಲಾಗ್ಗಳು ಸಿನಿಮಾ ಪ್ರೀಯರಿಗೆ ಸಖತ್ ಕಿಕ್ ಕೊಡುತ್ತಿವೆ. ಫಿಲ್ಮ್ ಹೋಗೋಣ್ವಾ..? ಹೇ ಎಲ್ಲ ನೋಡಿದ್ದಿವಲ್ಲ ಪಾರ್ಕ್ಗೆ ಹೋಗೋಣ್ವಾ..? ನಾವೇನ್ ಪೊದೆ ಪ್ರೇಮಿಗಳಾ ಪಾರ್ಕ್ಗೆ ಹೋಗೋಕೆ? ಅಲ್ವಾ...ಎಣ್ಣೆ ಹೊಡೆಯೋಣ..? ನಾ ಯಾವತ್ತಾದ್ರೂ ನಿನ್ನ್ ಮಾತ್ ಮೀರಿದ್ದೀನಾ ಎಂಬ ಸಂಭಾಷಣೆ ಕಿಕ್ ಕೊಡುತ್ತಿದೆ.