ಕರ್ನಾಟಕ

karnataka

ETV Bharat / sitara

'ಎಂದಿರನ್​​​​​'ಖ್ಯಾತಿಯ ಎಸ್​​​​​.ಶಂಕರ್ ನಿರ್ದೇಶನದಲ್ಲಿ ನಟಿಸಲಿದ್ದಾರಾ ಯಶ್​​...? - National star Yash new movie

ರಾಕಿಂಗ್ ಸ್ಟಾರ್ ಯಶ್ ಸದ್ಯ ಕೆಜಿಎಫ್ ಸೀಕ್ವೆಲ್​​​ನಲ್ಲಿ ಬ್ಯುಸಿ ಇದ್ದಾರೆ. ಕೆಜಿಎಫ್ ಬಿಡುಗಡೆ ನಂತರ ಯಶ್​​ಗೆ ಮತ್ತಷ್ಟು ಡಿಮ್ಯಾಂಡ್​ ಹೆಚ್ಚಾಗಿದ್ದು, ಖ್ಯಾತ ತಮಿಳು ನಿರ್ದೇಶಕ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ಯಶ್ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

Yash may act in Shankar direction
ಶಂಕರ್ ನಿರ್ದೇಶನದಲ್ಲಿ ಯಶ್

By

Published : Nov 16, 2020, 11:50 AM IST

'ಕೆಜಿಎಫ್ ' ಸಿನಿಮಾ ಬಿಡುಗಡೆ ಆಗಿದ್ದೇ ಆಗಿದ್ದು ಯಶ್ ಇಮೇಜ್ ಸಂಪೂರ್ಣ ಬದಲಾಯ್ತು. ನ್ಯಾಷನಲ್ ಸ್ಟಾರ್ ಆಗಿ ಬದಲಾದ ಯಶ್​​ಗೆ ತೆಲುಗು, ತಮಿಳು, ಮಲಯಾಳಂನಲ್ಲಿ ಮಾತ್ರವಲ್ಲ ಉತ್ತರ ಭಾರತದಲ್ಲಿ ಕೂಡಾ ಅಭಿಮಾನಿಗಳು ಹುಟ್ಟಿಕೊಂಡ್ರು. ಯಶ್ ಜೊತೆ ಸಿನಿಮಾ ಮಾಡಲು ನಿರ್ಮಾಪಕರು, ನಿರ್ದೇಶಕರು ಕಾಯುವ ಮಟ್ಟಿಗೆ ಆಗಿದೆ.

ನಿರ್ದೇಶಕ ಶಂಕರ್

ಟಾಲಿವುಡ್ ನಿರ್ದೇಶಕ ಪೂರಿ ಜಗನಾಥ್ ಯಶ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎಂಬ ವಿಚಾರ ಕೆಲವು ದಿನಗಳ ಹಿಂದೆ ಸದ್ದು ಮಾಡಿತ್ತು. ಇದೀಗ ಇಂಡಿಯನ್, ಶಿವಾಜಿ, ಎಂದಿರನ್ ಖ್ಯಾತಿಯ ನಿರ್ದೇಶಕ ಎಸ್. ಶಂಕರ್ ನಿರ್ದೇಶನದಲ್ಲಿ ಯಶ್ ಸಿನಿಮಾ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಯಶ್​ಗಾಗಿ ಶಂಕರ್ ಕಥೆಯೊಂದನ್ನು ರೆಡಿ ಮಾಡಿಕೊಂಡು ಈಗಾಗಲೇ ಯಶ್​​​​​ಗೆ ಕಥೆ ಹೇಳಿದ್ದು , ಯಶ್ ಕೂಡಾ ಶಂಕರ್ ನಿರ್ದೇಶನದಲ್ಲಿ ನಟಿಸಲು ಓಕೆ ಎಂದಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಯಶ್ ಜೊತೆ ವಿಜಯ್ ಸೇತುಪತಿ ಕೂಡಾ ನಟಿಸುತ್ತಿದ್ದಾರೆ ಎಂಬ ಮಾತು ಕಾಲಿವುಡ್ ಸಿನಿರಂಗದಲ್ಲಿ ಕೇಳಿಬರುತ್ತಿದೆ. ಆದರೆ ಇದರ ಬಗ್ಗೆ ಯಶ್ ಆಗಲೀ, ಶಂಕರ್ ಆಗಲೀ ಅಧಿಕೃತವಾಗಿ ಪ್ರಕಟಿಸಿಲ್ಲ. ಒಂದು ವೇಳೆ ಇದು ನಿಜ ಆದಲ್ಲಿ ಯಶ್ ಮತ್ತಷ್ಟು ಎತ್ತರಕ್ಕೆ ಏರುವುದರಲ್ಲಿ ನೋ ಡೌಟ್.

ಯಶ್

ABOUT THE AUTHOR

...view details