ಕರ್ನಾಟಕ

karnataka

ETV Bharat / sitara

'ಸಲಾರ್'​​​ ಚಿತ್ರದಲ್ಲಿ ಪ್ರಭಾಸ್​ ಎದುರು ನಟಿಸುತ್ತಿರುವ ವಿಲನ್ ಇವರೇನಾ..? - Madhu Guruswamy is Salaar villain

'ಸಲಾರ್' ಚಿತ್ರದಲ್ಲಿ ತೆಲುಗು-ಕನ್ನಡ ಕಲಾವಿದರು ಹಾಗೂ ತಾಂತ್ರಿಕ ವರ್ಗಕ್ಕೆ ಸಮಾನ ಅವಕಾಶ ನೀಡಲಾಗಿದ್ದು ಈ ಚಿತ್ರದಲ್ಲಿ ಪ್ರಭಾಸ್ ಎದುರು ಕನ್ನಡದ ಮಧು ಗುರುಸ್ವಾಮಿ ವಿಲನ್ ಆಗಿ ನಟಿಸುತ್ತಿರಬಹುದು ಎನ್ನಲಾಗುತ್ತಿದೆ. ಸಲಾರ್​​ನಲ್ಲಿ ನಾನು ನಟಿಸುತ್ತಿದ್ದೇನೆ ಎಂದು ಮಧು ಗುರುಸ್ವಾಮಿ ಪೋಸ್ಟ್ ಹಂಚಿಕೊಂಡಿದ್ದಾರೆ. ಆದರೆ ಇವರು ಪ್ರಮುಖ ವಿಲನ್ ಆಗಿ ನಟಿಸುತ್ತಿದ್ದಾರಾ ಇಲ್ಲವಾ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.

Salaar
'ಸಲಾರ್'​​​

By

Published : Feb 8, 2021, 7:03 PM IST

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ಹಾಗೂ ಶೃತಿ ಹಾಸನ್ ಅಭಿನಯಿಸುತ್ತಿರುವ 'ಸಲಾರ್' ಚಿತ್ರೀಕರಣ ಕಳೆದ ವಾರದಿಂದ ಆರಂಭವಾಗಿದೆ. ತೆಲಂಗಾಣದ ಗೋದಾವರಿಖನಿಯ ಕಲ್ಲಿದ್ದಲು ಗಣಿಯಲ್ಲಿ ಈ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು ಪ್ರಭಾಸ್ ಹಾಗೂ ಶ್ರುತಿ ಹಾಸನ್ ಇಬ್ಬರೂ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ಮಧು ಗುರುಸ್ವಾಮಿ

ಇನ್ನು ಈ ಸಿನಿಮಾದಲ್ಲಿ ಪ್ರಭಾಸ್ ಎದುರು ವಿಲನ್ ಆಗಿ ಯಾರು ನಟಿಸುತ್ತಿದ್ದಾರೆ ಎಂಬ ಪ್ರಶ್ನೆ ಬಹಳ ದಿನಗಳಿಂದ ಅಭಿಮಾನಿಗಳನ್ನು ಕಾಡುತ್ತಿತ್ತು. ಕನ್ನಡದ ಮಧು ಗುರುಸ್ವಾಮಿ 'ಸಲಾರ್' ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿರಬಹುದಾ ಎಂಬ ಅನುಮಾನ ಎಲ್ಲರನ್ನು ಕಾಡುತ್ತಿದೆ. ಏಕೆಂದರೆ ಮಧು ಗುರುಸ್ವಾಮಿ ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್​​​​​​ ನೋಡಿ ಬಹುಶ: ಸಲಾರ್ ಪ್ರಮುಖ ವಿಲನ್ ಇವರೇ ಇರಬಹುದಾ ಎನ್ನಲಾಗುತ್ತಿದೆ. "ಸಲಾರ್ ನನ್ನ ಮುಂದಿನ ಪ್ರಾಜೆಕ್ಟ್​​. ಈ ಚಿತ್ರದ ಭಾಗವಾಗಿರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ. ನನಗೆ ಈ ಸುವರ್ಣಾವಕಾಶ ನೀಡಿದ್ದಕ್ಕೆ ಪ್ರಶಾಂತ್ ನೀಲ್ ಹಾಗೂ ನಿರ್ಮಾಣ ಸಂಸ್ಥೆಗೆ ಧನ್ಯವಾದಗಳು" ಎಂದು ಮಧು ಗುರುಸ್ವಾಮಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಇನ್​ಸ್ಟಾಗ್ರಾಮ್​ನಲ್ಲಿ ಸುಂದರ್​ ಫೋಟೋ ಹಂಚಿಕೊಂಡ ಜೂಹಿ ಚಾವ್ಲಾ, ಭಾಗ್ಯಶ್ರೀ

ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಪ್ರಮುಖ ವಿಲನ್ ಆಗಿ ನಟಿಸಬಹುದು ಎಂಬ ಮಾತು ಬಹಳ ದಿನಗಳ ಹಿಂದೆ ಕೇಳಿ ಬಂದಿತ್ತು. ಆದರೆ ಈಗ ಮಧು ಗುರುಸ್ವಾಮಿ ಈ ರೀತಿ ಪೋಸ್ಟ್ ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ವಿಲನ್ ಆಗಿ ನಟಿಸುತ್ತಿರುವುದು ಯಾರು ಎಂಬ ವಿಚಾರ ತಿಳಿಯಲು ಕೆಲವು ದಿನಗಳು ಕಾದು ನೋಡಲೇಬೇಕು. ಸಲಾರ್ ಚಿತ್ರವನ್ನು ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿ ವಿಜಯ್ ಕಿರಗಂದೂರ್ ನಿರ್ಮಿಸುತ್ತಿದ್ದಾರೆ.

ABOUT THE AUTHOR

...view details