ಕರ್ನಾಟಕ

karnataka

ETV Bharat / sitara

ಸಿದ್ಧವಾಗ್ತಿದೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಕುರಿತ ಸಾಕ್ಷ್ಯ ಚಿತ್ರ - ಹಿರಿಯ ನಟಿ ಭಾರತಿ

ಭಾರತಿ ವಿಷ್ಣುವರ್ಧನ್​ ಬಗ್ಗೆ ಅವರ ಅಳಿಯ ಅನಿರುದ್ಧ್​​ ಸಾಕ್ಷ್ಯ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ 'ಬಾಳ ಬಂಗಾರ ನೀನು' ಎಂದು ನಾಮಕರಣ ಮಾಡಲಾಗಿದೆ.

DOCUMENTARY ON DR BHARATHI VISHNUVARDHANA
ಹಿರಿಯ ನಟಿ ಭಾರತಿ ಬಗ್ಗೆ ಸಿದ್ಧವಾಗುತ್ತಿದೆ ಸಾಕ್ಷ್ಯ ಚಿತ್ರ

By

Published : Apr 25, 2020, 11:24 AM IST

ಸಾಹಸ ಸಿಂಹ ಡಾ.ವಿಷ್ಣುವರ್ಧನ್‌ ಅವರ ಪತ್ನಿ, ನಟಿ ಭಾರತಿ ವಿಷ್ಣುವರ್ಧನ್‌ ಕುರಿತು ಸಾಕ್ಷ್ಯಚಿತ್ರವೊಂದು ತಯಾರಾಗುತ್ತಿದೆ. ಈ ಚಿತ್ರವನ್ನು ಭಾರತಿ ಅವರ ಅಳಿಯ ಅನಿರುದ್ಧ್‌ ನಿರ್ದೇಶನ ಮತ್ತು ನಿರ್ಮಾಣ ಮಾಡುತ್ತಿದ್ದಾರೆ.

ಭಾರತಿ ಮತ್ತು ವಿಷ್ಣುವರ್ಧನ್​​​

ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಹೆಸರು ಮಾಡುತ್ತಿರುವ ಅನುರುದ್ಧ್​​, ಸದ್ಯ 'ಬಾಳ ಬಂಗಾರ ನೀನು' ಎಂಬ ಸಾಕ್ಷ್ಯ ಚಿತ್ರಕ್ಕೆ ಕಥೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದಾರಂತೆ.

ಭಾರತಿ ಮತ್ತು ಅನಿರುದ್ಧ್​

'ಬಾಳ ಬಂಗಾರ ನೀನು' ಸಾಕ್ಷ್ಯ ಚಿತ್ರ ಬರುವ ಆಗಸ್ಟ್ 15 ರಂದು ಡಾ. ಭಾರತಿ ವಿಷ್ಣುವರ್ಧನ್ ಅವರ ಜನ್ಮ ದಿನದಂದು ರಿಲೀಸ್ ಆಗುವ​ ಸಾಧ್ಯತೆ ಇದೆ.

ಭಾರತಿ

ನನಗಿಂತ ಹೆಚ್ಚು ಪುರಸ್ಕಾರ, ಪ್ರಶಸ್ತಿಗಳು ನನ್ನ ಮಡದಿ ಭಾರತಿಗೆ ಬರಬೇಕು ಎಂದು ವಿಷ್ಣುವರ್ಧನ್‌ ಅವರು ಬದುಕಿದ್ದಾಗ ಹೇಳುತ್ತಿದ್ದರಂತೆ. ಅದಕ್ಕೆ ಕಾರಣವೂ ಇದೆ. ಭಾರತಿ ಅವರು ಕನ್ನಡ ಅಲ್ಲದೆ ಪರಭಾಷೆಗಳಲ್ಲೂ ಮಿಂಚಿದವರು ಮತ್ತು ಜನಪ್ರಿಯತೆ ಪಡೆದವರು. ಆ ಕಾರಣಕ್ಕೆ ಡಾ ವಿಷ್ಣುವರ್ಧನ ಅವರು ಈ ಅಭಿಪ್ರಾಯ ಹೇಳುತ್ತಿದ್ದರಂತೆ.

ABOUT THE AUTHOR

...view details