ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಪಾತ್ರಕ್ಕಾಗಿ ಜೀವವನ್ನೇ ಪಣಕ್ಕಿಡಲು ರೆಡಿ ಎನ್ನುವ ನಟ ಅಂದ್ರೆ ಚಿಯಾನ್ ವಿಕ್ರಮ್. ಯಾವ ಪಾತ್ರವಾಗಲಿ ಜೀವ ತುಂಬಿ ನಟಿಸುತ್ತಾರೆ. ಡಬ್ಬಿಂಗ್ ಕಲಾವಿದನಾಗಿ ಬಂದು ಸೂಪರ್ ಸ್ಟಾರ್ ಆಗಿ ಮೆರೆದವರು ವಿಕ್ರಮ್.
ತಮಿಳು ನಟ ವಿಕ್ರಮ್ ಜೊತೆ ನಟಿಸಲಿದ್ದಾರಾ ಯಶ್? - undefined
ರಾಕಿಂಗ್ ಸ್ಟಾರ್ ಯಶ್ ಹಾಗೂ ಚಿಯಾನ್ ವಿಕ್ರಮ್ ಜೊತೆಗಿರುವ ಫೋಟೋವೊಂದು ವೈರಲ್ ಆಗಿದ್ದು, ಇಬ್ಬರೂ ಜೊತೆಯಾಗಿ ಸಿನಿಮಾದಲ್ಲಿ ನಟಿಸುತ್ತಿದ್ದಾರಾ ಎಂಬ ಅನುಮಾನ ಎಲ್ಲರಿಗೂ ಕಾಡತೊಡಗಿದೆ.
ಇತ್ತೀಚೆಗೆ ಸ್ಯಾಂಡಲ್ವುಡ್ ಹಾಗೂ ಕಾಲಿವುಡ್ನಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ವಿಕ್ರಮ್ ನಟನೆಯ 58ನೇ ಸಿನಿಮಾದಲ್ಲಿ ಯಶ್ ಕೂಡಾ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಕಳೆದ ತಿಂಗಳು ವಿಕ್ರಮ್ ನಟನೆಯ ಹೊಸ ಸಿನಿಮಾ ಅನೌನ್ಸ್ ಆಗಿತ್ತು. ಇದೊಂದು ದುಬಾರಿ ನಿರ್ಮಾಣದ ಸಿನಿಮಾವಾಗಿದ್ದು, ಇನ್ನೂ ಹೆಸರಿಡದ ಸಿನಿಮಾ ನಿರ್ದೇಶನದ ಹೊಣೆಯನ್ನು ಅಜಯ್ ಜ್ಞಾನಮುತ್ತು ಹೊತ್ತಿದ್ದಾರೆ. ವಯೋಕಾಮ್ 18 ಮತ್ತು ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿವೆ ಎನ್ನಲಾಗಿದ್ದು, ಈ ಚಿತ್ರದಲ್ಲಿ ಹಲವು ಭಾಷೆಯ ಸ್ಟಾರ್ ನಟರು, ತಂತ್ರಜ್ಞರು ಇರಲಿದ್ದಾರೆ ಎಂದು ಜ್ಞಾನಮುತ್ತು ಹೇಳಿದ್ದಾರೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಕ್ರಂ ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಇರುವ ಫೋಟೋವೊಂದು ಹರಿದಾಡುತ್ತಿದೆ. ಈ ಫೋಟೋ ನೋಡಿದ ಅಭಿಮಾನಿಗಳಿಗೆ ಯಶ್ ಹಾಗೂ ವಿಕ್ರಮ್ ಜೊತೆಯಾಗಿ ನಟಿಸಲಿದ್ದಾರಾ ಎಂಬ ಅನುಮಾನ ಕಾಡುತ್ತಿದೆಯಂತೆ. ಈ ಹಿಂದೆ ವಿಕ್ರಮ್ ನಿರ್ದೇಶನದ 'ಸ್ಪಿರಿಟ್ ಆಫ್ ಚೆನ್ನೈ ' ಎಂಬ ಹಾಡಿನಲ್ಲಿ ಯಶ್ ಕಾಣಿಸಿಕೊಂಡಿದ್ದರು. ಈಗ ವಿಕ್ರಮ್ ಜೊತೆ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದಕ್ಕೆ ಯಶ್ ಅವರು ಪ್ರತಿಕ್ರಿಯಿಸಬೇಕಿದೆ ಅಷ್ಟೇ.