ಈ ರಾಜ್ಯೋತ್ಸವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮರಾಠಿ ಪ್ರಾಧಿಕಾರ ರಚನೆ ಮಾಡಿದ್ದರಿಂದ, ಕರ್ನಾಟಕದಲ್ಲಿ ಕನ್ನಡಿಗರ ಆಕ್ರೋಶ ಕಾರಣವಾಗಿದೆ. ಕೆಲ ದಿನಗಳ ಹಿಂದೆ ಕನ್ನಡಪರ ಸಂಘಟನೆಗಳು, ರಾಜ್ಯ ಸರ್ಕಾರ ಮರಾಠಿ ಪ್ರಾಧಿಕಾರ ರಚನೆ ವಿರುದ್ಧ ನೂರಾರು ಕನ್ನಡಿಗರ ಸಮ್ಮುಖದಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ, ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುತ್ತಿದೆ.
ಈಗಾಗಲೇ ಬೆಳಗಾವಿಯನ್ನ, ಎಂಇಎಸ್ ಸಂಘಟನೆ ಕನ್ನಡಿಗರ ಮೇಲೆ ದೌರ್ಜನ್ಯ ಮಾಡುತ್ತಿದೆ. ಈಗ ಮರಾಠಿ ಪ್ರಾಧಿಕಾರ ರಚನೆಯನ್ನ ಜಾರಿಗೆ ಮತ್ತಷ್ಟು ದೌರ್ಜನ್ಯ ಹೆಚ್ಚಾಗಲಿದೆ ಅಂತಾ ಕನ್ನಡ ಪರ ಸಂಘಟನೆಗಳು ಹೋರಾಟ ಮಾಡಿದ್ವು.
ಈ ಹೋರಾಟದಲ್ಲಿ ಯಾವೋಬ್ಬ ಸಿನಿಮಾ ನಟರು ಸಪೋರ್ಟ್ ಮಾಡಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ವು. ಈ ಮಾತಿಗೆ ಶಿವರಾಜ್ ಕುಮಾರ್ ತಮ್ಮ ಹೊಸ ಸಿನಿಮಾದ ಮುಹೂರ್ತದ ದಿನವೇ ಪ್ರತಿಕ್ರಿಯೆ ನೀಡಿದ್ದಾರೆ.
ಭಾಷೆ ವಿಚಾರದಲ್ಲಿ ಜಾತಿ, ಧರ್ಮವನ್ನ ತರಬೇಡಿ, ಹಾಗೇ ನಮ್ಮ ಕನ್ನಡದ ಬಗ್ಗೆ ಹೆಚ್ಚು ಒಲವು ಇರಲಿ. ಕನ್ನಡದ ಬಗ್ಗೆ ಹೆಚ್ಚು ಅಭಿಮಾನಿ ಇರಲಿ ಅಂತಾ ಶಿವರಾಜ್ ಕುಮಾರ್ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಈ ಭಾಷೆಯ ವಿಚಾರದಲ್ಲಿ ಯಾವ ನಿರ್ಧಾರಗಳನ್ನ ತೆಗೆದುಕೊಂಡ್ರೆ ಏನಾಗುತ್ತೆ ಅನ್ನೋದು ಸರ್ಕಾರಕ್ಕೆ ಗೊತ್ತಿರುತ್ತೆ ಅಂತಾ ಶಿವಣ್ಣ ಹೇಳಿದರು.
ಭಾಷೆ ವಿಷಯದಲ್ಲಿ ಜಾತಿ ಧರ್ಮವನ್ನ ತರಬೇಡಿ : ಶಿವರಾಜ್ ಕುಮಾರ್