ಬಿಗ್ಬಾಸ್ ಸ್ಪರ್ಧಿಯಾಗಿರುವ ದಿವ್ಯಾ ಉರುಡುಗ ಅವರ ಹಳೆಯ ಫೋಟೋಗಳನ್ನು ಬಳಸಿ ಟ್ರೋಲ್ ಮಾಡುತ್ತಿರುವುದರಿಂದ, ಇದನ್ನು ತಡೆಯಬೇಕೆಂದು ದಿವ್ಯಾ ಕುಟುಂಬ ನ್ಯಾಯಾಲಯ ಮೊರೆ ಹೋಗಿದ್ದಾರೆ.
ಮಾಧ್ಯಮಗಳ ವಿರುದ್ಧ ದಿವ್ಯಾ ಉರುಡುಗ ತಮಗೆ ಮಾನಹಾನಿಯಾಗುವಂತಹ ಸುದ್ದಿಗಳನ್ನು ಪ್ರಸಾರ ಮಾಡದಂತೆ ನಿರ್ಬಂಧ ಕೋರಿದ್ದಾರೆ. ದಿವ್ಯಾ ಉರುಡುಗ ಬಿಗ್ಬಾಸ್ ಮನೆಯಲ್ಲಿರುವಾಗಲೇ ಅವರ ಹಳೆಯ ಅಥವಾ ಎಡಿಟ್ ಮಾಡಲಾಗಿರುವ ಎನ್ನಲಾದ ಕೆಲವು ವೈಯಕ್ತಿಕ ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿವೆ. ಆದ್ದರಿಂದ ದಿವ್ಯಾ ಕುರಿತು ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ಅವರ ಕುಟುಂಬಸ್ಥರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.