ನೀವು ಬಿಗ್ ಬಾಸ್ ಮನೆಗೆ ಹೋಗಿದ್ದು ದಿವ್ಯಾ ಉರುಡುಗ ಅವರನ್ನು ಗೆಲ್ಲಲೋ ಅಥವಾ ಟ್ರೋಫಿ ಗೆಲ್ಲುವುದಕ್ಕೋ? ಎಂದು ಸಾಮಾಜಿಕ ಜಾಲತಾಣ ಫೇಸ್ಬುಕ್ ಮುಖಾಂತರ ಲೈವ್‌ಗೆ ಬಂದಿದ್ದ ಅರವಿಂದ್‌ಗೆ ಅಭಿಮಾನಿಗಳು ಕೇಳಿದರು.
ಬಿಗ್ಬಾಸ್ ಸ್ಪರ್ಧಿ ಅರವಿಂದ್ ದಿವ್ಯಾ ಉರುಡುಗ ಅವರು ನನ್ನನ್ನು ಚೂಸ್ ಮಾಡಿಬಿಟ್ಟಿದ್ದಾರೆ. ಹಾಗಾಗಿ ನಾನು ಅವರನ್ನು ಚೂಸ್ ಮಾಡುವುದೇನಿಲ್ಲ. ಬಿಗ್‍ಬಾಸ್ ಮನೆಗೆ ಎಲ್ಲರೂ ಬರುವುದು ಗೆಲ್ಲುವುದಕ್ಕೆ. ನಾನು ಅಲ್ಲಿಗೆ ಹೋಗಿದ್ದು ಯಾರನ್ನೂ ಫ್ರೆಂಡ್ ಮಾಡಿಕೊಳ್ಳುವುದಕ್ಕೆ ಅಲ್ಲ ಎಂದು ಅರವಿಂದ್ ಹೇಳಿದರು.
ನಾನು ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೆ ದಿವ್ಯಾ ಉರುಡುಗಗೆ ಕಾಲ್ ಮಾಡಿದ್ದೆ. ಅವರು ನಿನ್ನೆ ತಾನೇ ಮನೆಗೆ ತೆರಳಿದ್ದಾರೆ. ಅವರು ಚೇತರಿಸಿಕೊಂಡಿದ್ದಾರೆ ಮತ್ತು ಖುಷಿಯಾಗಿದ್ದಾರೆ. ಅವರು ಪೂರ್ತಿ ಹುಷಾರಾಗಲು ಸಮಯ ಬೇಕಾಗುತ್ತದೆ. ಅವರು ಕೊಟ್ಟಿರುವ ರಿಂಗ್ ನನ್ನ ಕೈಯಲ್ಲಿಯೇ ಇದೆ. ಅದನ್ನು ಯಾವತ್ತೂ ತೆಗೆಯುವುದಿಲ್ಲ. ಇದು ನನಗೆ ನೀಡಿದ ಒಲವಿನ ಉಡುಗೊರೆ. ಇದಕ್ಕೆ ಬಹಳ ವ್ಯಾಲ್ಯೂ ಇದೆ. ಹಾಗಾಗಿ ಬಿಚ್ಚಿಡಲಾರೆ. ಆದರೆ ಸ್ವಲ್ಪ ಟೈಟ್ ಇದೆ. ಅದನ್ನು ಸರಿಮಾಡಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದರು.
ದಿವ್ಯಾ ಉರುಡುಗ ಗಿಫ್ಟ್ ಆಗಿ ಕೊಟ್ಟಿರುವ ರಿಂಗ್ ತೋರಿಸಿದ ಅರವಿಂದ್ ದಿವ್ಯಾ ತಮ್ಮ ವಾಯ್ಸ್ ನೋಟ್ನಲ್ಲಿ ಉಡುಪಿ ಹೋಟೆಲ್ ಬಗ್ಗೆ ಯೋಚಿಸು ಎಂದಿದ್ದು ಅಭಿಮಾನಿಗಳಲ್ಲಿ ಕುತೂಹಲ ಉಂಟು ಮಾಡಿತ್ತು. ಈ ಬಗ್ಗೆ ಕೇಳಿದ ಪ್ರಶ್ನೆಗೆ, ದಿವ್ಯಾ ಮಾಡಿದ ಅಡುಗೆ ಬಹಳ ಚೆನ್ನಾಗಿತ್ತು. ಅವರ ಕೈರುಚಿ ಚೆನ್ನಾಗಿದೆ. ಉಡುಪಿಯಲ್ಲಿ ಹೋಟೆಲ್ ತೆರೆಯೋಣ ಎಂದು ನಾವು ಮಾತನಾಡಿಕೊಂಡಿದ್ದೆವು ಎಂದು ಹೇಳುತ್ತಾ ಅರವಿಂದ್ ಅಭಿಮಾನಿಗಳ ಕುತೂಹಲ ತಣಿಸುವ ಕೆಲಸ ಮಾಡಿದರು.
ಬಿಗ್ಬಾಸ್ ಸ್ಪರ್ಧಿ ಅರವಿಂದ್ ಕೊರೊನಾ ಮುಗಿದ ನಂತರ ಕ್ರೀಡಾ ತರಬೇತಿ ಆರಂಭಿಸಲಾಗುವುದು. ಎಂಟರ್ಟೈನ್ಮೆಂಟ್ ಕ್ಷೇತ್ರಕ್ಕೂ ಬರಲು ಉತ್ಸುಕನಾಗಿದ್ದೇನೆ. ನನ್ನ ಕ್ಷೇತ್ರವೇ ಬೇರೆ. ಬಿಗ್ ಬಾಸ್ ಮನೆ ನನಗೆ ಹೊಸ ಅನುಭವ. ಒಂದೇ ವಾರಕ್ಕೆ ವಾಪಸ್ ಆಗುತ್ತೇನೆ ಎಂದುಕೊಂಡಿದ್ದೆ. ಆದರೆ ಇಲ್ಲಿಗೆ ಬರದಿದ್ದರೆ ಅಮೂಲ್ಯವಾದದ್ದನ್ನು ಕಳೆದುಕೊಳ್ಳುತ್ತಿದ್ದೆ ಎನ್ನಿಸಿತು ಎಂದು ಅರವಿಂದ್ ಹೇಳಿದರು.