ಕಳೆದ ನಾಲ್ಕು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಬಾಲಿವುಡ್ ಕಿರುತೆರೆ ಜೋಡಿ ದಿವ್ಯಾ ಅಗರ್ವಾಲ್ ಮತ್ತು ವರುಣ್ ಸೂದ್ ನಡುವಿನ ಸಂಬಂಧದಲ್ಲಿ ಬಿರುಕು ಬಿಟ್ಟಿದೆ. ತಾವಿಬ್ಬರು ಬೇರೆ ಬೇರೆಯಾಗುತ್ತಿರುವ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡಿರುವ ದಿವ್ಯಾ, 'ಜೀವನವೇ ಒಂದು ಸರ್ಕಸ್. ಎಲ್ಲರನ್ನೂ ಸಂತೋಷವಾಗಿಡಲು ಪ್ರಯತ್ನ ಮಾಡಿ, ಯಾವುದೂ ನಿಜವಲ್ಲ ಎಂದು ನಿರೀಕ್ಷಿಸಿ. ಆದರೆ ನಮ್ಮ ಪ್ರೀತಿ ಕ್ಷೀಣಿಸಲು ಪ್ರಾರಂಭಿಸಿದಾಗ ಏನಾಗುತ್ತದೆ?, ನಾನು ಯಾರನ್ನು ದೂಷಿಸುವುದಿಲ್ಲ. ನಾನು ನನಗಾಗಿ ಬದುಕಲು ಬಯಸುತ್ತೇನೆ. ನಾನು ಬಯಸಿದ ರೀತಿಯಲ್ಲಿ ಬದುಕಲು ಸಮಯ ಬೇಕು' ಎಂದು ಹೇಳಿದ್ದಾರೆ.