ಕರ್ನಾಟಕ

karnataka

ETV Bharat / sitara

ಸಲಾರ್​​ನಲ್ಲಿ ಪ್ರಭಾಸ್​​ ಜೊತೆ ನಟಿಸ್ತಾರಂತೆ ಈ ನಟಿ - Prabhas News

ಹೀಗೊಂದು ಮಾಹಿತಿ ಹರಿದಾಡುತ್ತಿದ್ದು, ದಿಶಾ ಪಟಾಣಿ ಸಲಾರ್​ ಚಿತ್ರದಲ್ಲಿ ಪ್ರಭಾಸ್​​ಗೆ ಜೋಡಿಯಾಗುತ್ತಾರೆ ಎನ್ನಲಾಗುತ್ತಿದೆ. ಪ್ರಭಾಸ್​​ ಸದ್ಯ ಸ್ಟಾರ್​ಡಮ್​ ಗಿಟ್ಟಿಸಿಕೊಂಡಿರುವ ನಟನಾಗಿದ್ದು, ಬಾಲಿವುಡ್​ ಬೆಡಗಿಯರು 'ಡಾರ್ಲಿಂಗ್​​' ಜೊತೆ ನಟಿಸಲು ಸಾಲಾಗಿ ಬರುತ್ತಿದ್ದಾರೆ.

ಸಲಾರ್​​ನಲ್ಲಿ ಪ್ರಭಾಸ್​​ ಜೊತೆ ನಟಿಸ್ತಾರಂತೆ ಈ ನಟಿ
ಸಲಾರ್​​ನಲ್ಲಿ ಪ್ರಭಾಸ್​​ ಜೊತೆ ನಟಿಸ್ತಾರಂತೆ ಈ ನಟಿ

By

Published : Dec 23, 2020, 9:34 PM IST

ಯಂಗ್​​ ರೆಬಲ್​​ಸ್ಟಾರ್​​ ಪ್ರಭಾಸ್​​​ ಇದೀಗ ಪ್ಯಾನ್​​ ಇಂಡಿಯಾ ನಟನಾಗಿ ಹೊರಹೊಮ್ಮಿದ್ದಾರೆ. ಬಾಹುಬಲಿ ಹಾಗೂ ಸಾಹೋ ಚಿತ್ರದ ಮೂಲಕ ಇದೀಗ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಇತ್ತೀಚೆಗೆ ಕೆಜಿಎಫ್​ ಖ್ಯಾತಿಯ ನಿರ್ದೇಶಕ ಪ್ರಶಾಂತ್​ ನೀಲ್,​​ 'ಸಲಾರ್'​​ ಚಿತ್ರ ಮಾಡುವುದಾಗಿ ಹೇಳಿರುವುದು ಎಲ್ಲರಿಗೂ ಗೊತ್ತಿದೆ. ಈ ಚಿತ್ರದಲ್ಲಿ ಪ್ರಭಾಸ್​ ನಾಯಕ ಎನ್ನುವುದೂ ಕೂಡ ಎಲ್ಲರಿಗೂ ಗೊತ್ತಿದೆ. ಆದ್ರೆ ಪ್ರಭಾಸ್​​ಗೆ ನಾಯಕಿ ಯಾರೆಂಬ ಮಾಹಿತಿ ಇನ್ನೂ ಅಧಿಕೃತವಾಗಿ ತಿಳಿದಿಲ್ಲ.

ಆದ್ರೆ ಹೀಗೊಂದು ಮಾಹಿತಿ ಹರಿದಾಡುತ್ತಿದ್ದು, ದಿಶಾ ಪಟಾನಿ ಸಲಾರ್​ ಚಿತ್ರದಲ್ಲಿ ಪ್ರಭಾಸ್​​ಗೆ ಜೋಡಿಯಾಗುತ್ತಾರೆ ಎನ್ನಲಾಗುತ್ತಿದೆ. ಪ್ರಭಾಸ್​​ ಸದ್ಯ ಸ್ಟಾರ್​ಡಮ್​ ಗಿಟ್ಟಿಸಿಕೊಂಡಿರುವ ನಟನಾಗಿದ್ದು, ಬಾಲಿವುಡ್​ ಬೆಡಗಿಯರು 'ಡಾರ್ಲಿಂಗ್​​' ಜೊತೆ ನಟಿಸಲು ಸಾಲಾಗಿ ಬರುತ್ತಿದ್ದಾರೆ.

ದಿಶಾ ಪಟಾನಿ

ಇನ್ನು ದಿಶಾ ಕೂಡ ವರುಣ್ ತೇಜ್ ಅಭಿನಯದ 'ಲೋಫರ್' ಚಿತ್ರದ ಮೂಲಕ ತೆಲುಗಿಗೂ ಪದಾರ್ಪಣೆ ಮಾಡಿದ್ದಾರೆ. ಬಾಲಿವುಡ್ ಚಿತ್ರಗಳಾದ 'ಎಂ.ಎಸ್.ಧೋನಿ' ಮತ್ತು 'ಬಾಘಿ' ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಅವರು ಸಲ್ಮಾನ್ ಖಾನ್ ಅಭಿನದಯ 'ರಾಧೆ' ಚಿತ್ರದಲ್ಲಿ ನಟಿಸುತ್ತಿದ್ದಾರೆ.

ದಿಶಾ ಪಟಾನಿ

ABOUT THE AUTHOR

...view details