ಕರ್ನಾಟಕ

karnataka

ETV Bharat / sitara

ಏನ್‌ ಚೆಂದ ಕಾಣ್ತಾವ್ಳೋ.. ಪಡ್ಡೆ ಹುಡುಗರ ತಾಪವೇರಿಸಿದ ದಿಶಾ ಪಟಾನಿ ಫೋಟೋಗಳು.. - ದಿಶಾ ಪಟಾಣಿ ಇತ್ತೀಚಿನ ಸುದ್ದಿ

ಬಾಲಿವುಡ್​ನ ದಿಶಾ ಪಟಾನಿ ಆಗಾಗ ಸೋಷಿಯಲ್​ ಮೀಡಿಯಾದಲ್ಲಿ ಪಡ್ಡೆ ಹುಡುಗರ ತಾಪಮಾನ ಹೆಚ್ಚಿಸುತ್ತಲೇ ಇರುತ್ತಾರೆ. ಕೆಲವು ದಿನಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ಮರೆಯಾಗಿದ್ದ ದಿಶಾ ಇದೀಗ ತಮ್ಮ ಹಾಟ್​ ಫೋಟೋಗಳನ್ನು ಶೇರ್​ ಮಾಡಿ ನವ ಯುವಕರ ನಿದ್ದೆಗೆಡಿಸಿದ್ದಾರೆ.

ಪಡ್ಡೆ ಹುಡುಗರ ತಾಪವೇರಿಸಿದ ದಿಶಾ ಪಟಾನಿಯ ಈ ಫೋಟೋಗಳು

By

Published : Oct 14, 2019, 7:04 PM IST

ಬಾಲಿವುಡ್​ನ ದಿಶಾ ಪಟಾನಿ ಆಗಾಗ ಸೋಷಿಯಲ್​ ಮೀಡಿಯಾದಲ್ಲಿ ಪಡ್ಡೆ ಹುಡುಗರ ತಪಮಾನವನ್ನ ಹೆಚ್ಚಿಸುತ್ತಲೇ ಇರುತ್ತಾರೆ. ಕೆಲವು ದಿನಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ಮರೆಯಾಗಿದ್ದ ದಿಶಾ ಇದೀಗ ತಮ್ಮ ಹಾಟ್​ ಫೋಟೋಗಳನ್ನು ಶೇರ್​ ಮಾಡಿ ನವ ಯುವಕರ ನಿದ್ದೆಗೆಡಿಸಿದ್ದಾರೆ.

ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅರೆಬರೆ ಬಟ್ಟೆ ಹಾಕಿಕೊಂಡು ಫೋಸ್​ ಕೊಟ್ಟಿರುವ ಫೋಟೋಗಳನ್ನು ಶೇರ್​ ಮಾಡಿದ್ದಾರೆ. ಈ ಪೋಟೋದಲ್ಲಿ ದಿಶಾ ಪುಟಾಣಿ ರೆಡ್​ ಕಲರ್​ ದಿರಿಸನ್ನು ತೊಟ್ಟು ಬೋಲ್ಡ್​ ಲುಕ್​ ಕೊಟ್ಟಿದ್ದಾರೆ.

ಫೇಮಸ್​ ಬಟ್ಟೆ ಬ್ರ್ಯಾಂಡ್ 'ಕ್ಯಾಲ್ವಿನ್ ಕ್ಲೈನ್' ಜತೆ ಕೈಜೋಡಿಸಿ ಪೋಸ್ಟ್​ಗಳ ಮೂಲಕ ಬಟ್ಟೆಗಳ ಪ್ರಚಾರ ಮಾಡ್ತಿರುವ ಸುಂದರಿ ನಟಿ ದಿಶಾ ಪಟಾನಿ. ಬಳಕುವಂತಹ ಮೈಮಾಟ, ಫ್ಯಾಷನ್ ಬಗೆಗಿನ ಕಾಳಜಿ ಇವೆಲ್ಲವೂ ಫೋಟೋ ವೈರಲ್ ಆಗುವಂತೆ ಮಾಡುತ್ತಿವೆ.

ಸದ್ಯ ದಿಶಾ ಪಟಾನಿ ಮಲಾಂಗ್​ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾವನ್ನು ಮೋಹಿತ್​ ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಆದಿತ್ಯ ರಾಯ್​​​ ಕಪೂರ್​,ಅನಿಲ್​ ಕಪೂರ್​ ಸೇರಿ ಹಲವು ದೊಡ್ಡ ದೊಡ್ಡ ತಾರೆಯರು ನಟಿಸುತ್ತಿದ್ದಾರೆ.

ABOUT THE AUTHOR

...view details