ಕರ್ನಾಟಕ

karnataka

ETV Bharat / sitara

'ಏಕ್​​ ವಿಲನ್​​ 2'ನಲ್ಲಿ ಬಣ್ಣ ಹಚ್ಚಲಿದ್ದಾರೆ ದಿಶಾ ಪಟಾಣಿ - Bollywood star Disha Patani news

ಮಲಾಂಗ್​ ನಿರ್ದೇಶಕರಾದ ಮೋಹಿತ್​ ಸೂರಿ 'ಏಕ್​ ವಿಲನ್​​ 2' ಸಿನಿಮಾ ಮಾಡುತ್ತಿದ್ದು, ಈ ಚಿತ್ರದಲ್ಲಿ ದಿಶಾ ಪಟಾಣಿ ಬಣ್ಣ ಹಚ್ಚುತ್ತಿದ್ದಾರೆ.

'ಏಕ್​​ ವಿಲನ್​​ 2'ನಲ್ಲಿ ಬಣ್ಣ ಹಚ್ಚಲಿದ್ದಾರೆ ದಿಶಾ ಪಟಾಣಿ
'ಏಕ್​​ ವಿಲನ್​​ 2'ನಲ್ಲಿ ಬಣ್ಣ ಹಚ್ಚಲಿದ್ದಾರೆ ದಿಶಾ ಪಟಾಣಿ

By

Published : Jan 30, 2021, 7:27 PM IST

ಬಾಲಿವುಡ್​ ಬೆಡಗಿ ದಿಶಾ ಪಟಾಣಿ ಕೊನೆಯದಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದು 'ಮಲಾಂಗ್'​ ಸಿನಿಮಾದಲ್ಲಿ. ಬಳಿಕ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ಹಾಗಂತ ಅವರು ಸಿನಿಮಾದಲ್ಲೇ ನಟಿಸಿಲ್ವಾ ಅಂತ ಅಲ್ಲ. ನಟಿಸಿರುವ ಯಾವ ಸಿನಿಮಾಗಳೂ ಇನ್ನೂ ರಿಲೀಸ್​​ ಆಗಿಲ್ಲ. ಈ ನಡುವೆಯೇ ನಟಿ ಮತ್ತೊಂದು ಚಿತ್ರದಲ್ಲಿ ನಟಿಸಲು ತಯಾರಿ ನಡೆಸುತ್ತಿದ್ದಾರೆ.

ಹೌದು, ಮಲಾಂಗ್​ ನಿರ್ದೇಶಕರಾದ ಮೋಹಿತ್​ ಸೂರಿ 'ಏಕ್​ ವಿಲನ್​​ 2' ಸಿನಿಮಾ ಮಾಡುತ್ತಿದ್ದು, ಈ ಚಿತ್ರದಲ್ಲಿ ದಿಶಾ ಪಟಾಣಿ ಬಣ್ಣ ಹಚ್ಚುತ್ತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಟಿಸಲು ಹಲವು ದಿನಗಳಿಂದ ತಯಾರಿ ನಡೆಸುತ್ತಿರುವ ದಿಶಾ ಸಾಕಷ್ಟು ಪುಸ್ತಕಗಳನ್ನು ಅಧ್ಯಯನ ಮಾಡಿದ್ದಾರಂತೆ.

ಲಾಕ್​ಡೌನ್​ ವೇಳೆ ಫ್ರೀ ಇದ್ದ ನಟಿ ಸಾಕಷ್ಟು ಕಥೆಗಳನ್ನು ಓದಿದ್ದಾರಂತೆ. ಅಲ್ಲದೆ ಆನ್​ಲೈನ್​​ನಲ್ಲಿ ಸಿಗುವ ಕಥೆಗಳನ್ನು ಓದುತ್ತ ಸಮಯ ಕಳೆದಿದ್ದಾರೆ. ದಿಶಾ ಅಭಿನಯದ ಏಕ್​​ ವಿಲನ್​ 2 ಸಿನಿಮಾ ಅತೀ ಶೀಘ್ರದಲ್ಲಿ ಸೆಟ್ಟೇರುತ್ತಿದೆ.

ದಿಶಾ ಅಭಿನಯದ ರಾಧೆ ಸಿನಿಮಾ ರೆಡಿಯಾಗಿದ್ದು, ಮುಂಬರುವ ಈದ್​ ಹಬ್ಬಕ್ಕೆ ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ಸಲ್ಮಾನ್​ ಖಾನ್​ ಜೊತೆ ದಿಶಾ ನಟಿಸಿದ್ದಾರೆ.

ABOUT THE AUTHOR

...view details