ಬಾಲಿವುಡ್ ಹಾಟ್ ಬೆಡಗಿ ದಿಶಾ ಪಟಾನಿ ಹಾಗೂ ನಟ ಟೈಗರ್ಶ್ರಾಫ್ ಇದೀಗ ಮಾಲ್ಡೀವ್ಸ್ ಹಾಲಿಡೆ ಟ್ರಿಪ್ ಎಂಜಾಯ್ ಮಾಡ್ತಿದ್ದಾರೆ. ಇತ್ತಿಚೆಗೆ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ಅವರಿಬ್ಬರು ಅಭಿಮಾನಿಗಳಿಗೆ ಖುಷಿ ಹಂಚಿದ್ದಾರೆ.
ಪ್ರೇಮಿಗಳು ಎನ್ನಲಾದ ದಿಶಾ ಮತ್ತು ಟೈಗರ್ ದೀಪಾವಳಿ ಹಬ್ಬದ ಸಮಯದಲ್ಲಿ ಐಸ್ಲ್ಯಾಂಡ್ ವಾತಾವರಣವನ್ನು ಸವಿಯುತ್ತಿದ್ದಾರೆ. ದಿಶಾ ಸ್ವಿಮ್ ಸೂಟ್ನಲ್ಲಿ ಇರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಟೈಗರ್ ಶ್ರಾಫ್ ಕೂಡ ಶರ್ಟ್ಲೆಸ್ ಪೋಟೋ ಹಂಚಿಕೊಂಡು ತಮ್ಮ ದೇಹ ಪ್ರದರ್ಶನ ಮಾಡಿದ್ದಾರೆ.
ಪಡ್ಡೆ ಹುಡುಗರ ಮನಕದ್ದ ದಿಶಾ ಫೋಟೋ : ಮಾಲ್ಡೀವ್ಸ್ನಲ್ಲಿ ಟೈಗರ್ & ಪಟಾನಿ ಪಡ್ಡೆ ಹುಡುಗರ ಮನಕದ್ದ ದಿಶಾ ಫೋಟೋ : ಮಾಲ್ಡೀವ್ಸ್ನಲ್ಲಿ ಟೈಗರ್ & ಪಟಾನಿ ಇನ್ನು ದಿಶಾ ಸಮುದ್ರ ತೀರದಲ್ಲಿ ಕುಳಿತಿರುವ ಹಾಗೂ ಸೆಲ್ಫಿಗೆ ಪೋಸ್ ಕೊಟ್ಟಿರುವ ಫೋಟೋಗಳನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. ಟೈಗರ್ ಶ್ರಾಫ್ ಮತ್ತು ದಿಶಾ ಡೇಟಿಂಗ್ ಮಾಡುತ್ತಿದ್ದಾರೆ ಹಾಗೂ ಅವರಿಬ್ಬರು ಲವ್ ಮಾಡುತ್ತಿದ್ದಾರೆ ಎಂಬ ಹಲ್ ಚಲ್ ಸುದ್ದಿಗಳು ಹರಿದಾಡುತ್ತಿವೆ. ಇದೀ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ ಟ್ರಿಪ್ ಮಾಡುತ್ತಿರುವ ಈ ತಾರೆಯರು ಇನ್ನೊಂಷ್ಟು ಸುದ್ದಿಯಾಗುತ್ತಿದ್ದಾರೆ.
ಇನ್ನು ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿರುವ ಇವರು, ಬಾಗಿ 2 ಮತ್ತು ಬಾಗಿ 3 ಸಿನಿಮಾದಲ್ಲಿ ಟೈಗರ್ ಶ್ರಾಫ್ ಜೊತೆ ನಟಿಸಿದ್ದಾರೆ.