ಸಿನಿಮಾ ಎಂದ ಮೇಲೆ ಅಲ್ಲಿ ನಾಯಕ-ನಾಯಕಿ ನಡುವೆ ಚುಂಬನದ ದೃಶ್ಯಗಳು ಸಾಮಾನ್ಯ. ಕೆಲವೊಮ್ಮೆ ಈ ಕಿಸ್ಸಿಂಗ್ ದೃಶ್ಯಗಳೇ ಹೆಚ್ಚು ಚರ್ಚೆಯಲ್ಲಿರುತ್ತವೆ. ಇದೀಗ ಕೃತಿ ಖರಬಂಧ ಅವರ ಮುತ್ತಿನ ಕಥೆ ಬಹಳ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಕೃತಿ ಕಿಸ್ ಮಾಡಿದ್ದು ಯಾರಿಗೆ..? ಯಾವ ಸಿನಿಮಾ ಎಂದು ಯೋಚಿಸುತ್ತಿದ್ದೀರಾ..?
ಚಿರು, ಗೂಗ್ಲಿ, ಗಲಾಟೆ, ಪ್ರೇಮ್ ಅಡ್ಡಾ, ಮಾಸ್ತಿಗುಡಿ ಸಿನಿಮಾಗಳಲ್ಲಿ ನಟಿಸಿರುವ ಕೃತಿ ಈಗ ಇದೇ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಅಷ್ಟಕ್ಕೂ ಕೃತಿ ಮುತ್ತು ನೀಡಿದ್ದು ತನ್ನ ಮುದ್ದಿನ ನಾಯಿಗೆ. ಕೃತಿ ತನ್ನ ಪ್ರೀತಿಯ ಶ್ವಾನಕ್ಕೆ ಮುತ್ತು ನೀಡಿರುವ ಫೊಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿರುವ ನೆಟಿಜನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೃತಿ ಅಭಿಮಾನಿಗಳು ಸಿನಿಮಾಗಳಲ್ಲಿ ನಾಯಕನಿಗೆ ಕಿಸ್ ಮಾಡಿದರೆ ಅದನ್ನು ನೋಡಿ ಎಂಜಾಯ್ ಮಾಡುವ ಜನರು, ನಾಯಿಗೆ ಮುತ್ತು ಕೊಟ್ಟರೆ ಈ ರೀತಿ ಏಕೆ ಪ್ರತಿಕ್ರಿಯಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.