ಕಳೆದ ಒಂದು ವಾರದಲ್ಲಿ ಕನ್ನಡದ ಕ್ಲಾಸಿಕ್ ಸಿನಿಮಾ 'ಆ್ಯಕ್ಸಿಡೆಂಟ್' ಬಗ್ಗೆ ಎರಡು ಕಾರ್ಯಕ್ರಮಗಳಲ್ಲಿ ಚರ್ಚೆಯಾಗಿದೆ. 1985 ರಲ್ಲಿ ಶಂಕರ್ ನಾಗ್ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ನಂತರ 2008 ರಲ್ಲಿ ರಮೇಶ್ ಅರವಿಂದ್ ಇದೇ ಹೆಸರಿನ ಸಿನಿಮಾವನ್ನು ನಿರ್ದೇಶಿಸಿದ್ದರು.
'ಆ್ಯಕ್ಸಿಡೆಂಟ್' ಚಿತ್ರದ ಬಗ್ಗೆ ಚರ್ಚೆ ನಿರ್ದೇಶಕ ಪವನ್ ಕುಮಾರ್ ಅವರ ಎಫ್ಯುಸಿಯಲ್ಲಿ 'ಆ್ಯಕ್ಸಿಡೆಂಟ್' ಚಿತ್ರದ ಲೇಖಕ ವಸಂತ್ ಮೊಕಾಶಿ ಮುಂಬೈನಿಂದ ಚರ್ಚೆಯಲ್ಲಿ ಭಾಗಿಯಾಗಿದ್ದರು. ಅನಂತ್ ನಾಗ್, ರಮೇಶ್ ಭಟ್, ಟಿ.ಎಸ್. ನಾಗಾಭರಣ, ಅಶೋಕ್ ಮಂದಣ್ಣ ಹಾಗೂ ಇನ್ನಿತರರು ಕೂಡಾ ಈ ಚರ್ಚೆಯಲ್ಲಿ ಭಾಗಿಯಾಗಿದ್ದರು. ಈ ಚಿತ್ರದ ಬಗ್ಗೆ ಸುಮಾರು 1 ಗಂಟೆ ಕಾಲ ಚರ್ಚೆ ಮಾಡಲಾಯ್ತು.
ಶಂಕರ್ ನಾಗ್ ನಿರ್ದೇಶನದ 'ಆ್ಯಕ್ಸಿಡೆಂಟ್' ಈ 'ಆ್ಯಕ್ಸಿಡೆಂಟ್' ಚಿತ್ರಕ್ಕೆ ಉತ್ತರ ಭಾರತದಲ್ಲಿ ನಡೆದ ಘಟನೆಯೊಂದು ಸ್ಫೂರ್ತಿಯಾಗಿದ್ದು ಈ ಬಗ್ಗೆ ಅನಂತ್ನಾಗ್ ಅವರೊಂದಿಗೆ ಚರ್ಚಿಸಿದ ವಿಚಾರವನ್ನು ವಸಂತ್ ಮೊಕಾಶಿ ಹೇಳಿಕೊಂಡರು. ನಂತರ ಅನಂತ್ ನಾಗ್ ಮಾತನಾಡಿ, ಈ ಚಿತ್ರವನ್ನು ಮೊದಲು ಟಿ.ಎಸ್. ನಾಗಾಭರಣ ನಿರ್ದೇಶನ ಮಾಡಬೇಕಿತ್ತು. ಆದರೆ ಸ್ಕ್ರಿಪ್ಟ್ ಓದಿದ ಶಂಕರ್ ನಾಗ್ ಈ ಚಿತ್ರವನ್ನು ನಾನೇ ನಿರ್ದೇಶನ ಮಾಡುವುದಾಗಿ ಪಟ್ಟು ಹಿಡಿದಾಗ ಅನಂತ್ ನಾಗ್ ಹಾಗೂ ನಾಗಾಭರಣ ಒಪ್ಪಂದಕ್ಕೆ ಬಂದು ಕೊನೆಗೆ ಶಂಕರ್ನಾಗ್ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುವಂತಾಯ್ತು ಎಂಬ ಹಳೆಯ ನೆನಪನ್ನು ಮೆಲುಕು ಹಾಕಿದರು.
1985 ರಲ್ಲಿ ಬಿಡುಗಡೆಯಾದ ಚಿತ್ರ ಆದರೆ ಚಿತ್ರದಲ್ಲಿ ನನಗೆ ಒಂದು ಪಾತ್ರ ನೀಡಬೇಕು ಎಂದು ನಾಗಾಭರಣ ಕಂಡಿಷನ್ ಹಾಕಿದ್ದರಿಂದ ಅವರ ಕಂಡಿಷನ್ಗೆ ಶಂಕರ್ ನಾಗ್ ಒಪ್ಪಿದ್ದರಂತೆ. ಶಂಕರ್ ನಾಗ್ ಅವರೊಂದಿಗೆ ರಮೇಶ್ ಭಟ್ ಕೂಡಾ ಈ ಚಿತ್ರಕ್ಕೆ ಸಹ ನಿರ್ದೇಶನ ಮಾಡಿದ್ದಾರೆ. ರಂಗಭೂಮಿ ಕಲಾವಿದರನ್ನು ಆಯ್ಕೆ ಮಾಡಿಕೊಂಡು ಚಿತ್ರ ಮಾಡಿದ್ದನ್ನು ಅಶೋಕ್ ಮಂದಣ್ಣ ನೆನಪಿಸಿಕೊಂಡರು. ಅಷ್ಟೇ ಅಲ್ಲ ಬ್ಯುಸಿ ಕೆಲಸಗಳ ನಡುವೆಯೂ ಈ ಚಿತ್ರಕ್ಕೆ ಇಳಯರಾಜ ಅವರು ಒಂದು ದಿನದಲ್ಲಿ ಹಿನ್ನೆಲೆ ಸಂಗೀತ ಮಾಡಿಕೊಟ್ಟಿದ್ದನ್ನು ಈ ಚರ್ಚೆಯಲ್ಲಿ ನೆನಪು ಮಾಡಿಕೊಳ್ಳಲಾಯ್ತು.
ಚರ್ಚೆಯಲ್ಲಿ ಭಾಗಿಯಾಗಿದ್ದ ಅನಂತ್ ನಾಗ್ ಹಾಗೂ ಇತರ ಗಣ್ಯರು ಇದನ್ನು ಹೊರತುಪಡಿಸಿ ಎರಡು ದಿನಗಳ ಹಿಂದೆ ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರ ಪುತ್ರ ನವೀನ್ ಕೃಷ್ಣ, ಕನ್ನಡ ಮಾಣಿಕ್ಯ ಯೂಟ್ಯೂಬ್ ಚಾನೆಲ್ನಲ್ಲಿ 1985 ರ 'ಆ್ಯಕ್ಸಿಡೆಂಟ್' ಸಿನಿಮಾದ ಬಗ್ಗೆ ಚರ್ಚಿಸಿದ್ದರು. ಈ ಚರ್ಚೆಯಲ್ಲಿ ಹಿರಿಯ ನಟ ರಮೇಶ್ ಭಟ್ ಭಾಗಿಯಾಗಿದ್ದರು.