ಅಲ್ಲು ಅರ್ಜುನ್ ಅಭಿನಯದ ಅಲ ವೈಕುಂಠಪುರಮುಲೋ ಸಿನಿಮಾ ಬಾಕ್ಸ್ ಆಫೀಸ್ನನ್ನು ಧೂಳಿಪಟ ಮಾಡುತ್ತಿದೆ. ಚಿತ್ರ ಮಂದಿರಗಳಲ್ಲಿ ಸಿನಿಮಾ ಧೂಳೆಬ್ಬಿಸುತ್ತಿದ್ರೆ, ಇತ್ತ ಸೋಷಿಯಲ್ ಮಿಡಿಯಾದಲ್ಲಿ ಬುಟ್ಟ ಬೊಮ್ಮ ಬುಟ್ಟ ಬೊಮ್ಮ ಸಾಂಗ್ ಸೆನ್ಷೇಷನ್ ಕ್ರಿಯೇಟ್ ಮಾಡುತ್ತಿದೆ. ಸಿನಿಮಾ ತಾರೆಯರಿಂದ ಹಿಡಿದು ಹಳ್ಳಿಯಲ್ಲಿರುವವರ ತನಕ ಈ ಹಾಡಿಗೆ ಟಿಕ್ ಟಾಕ್ ಮಾಡಿ ಎಂಜಾಯ್ ಮಾಡ್ತಿದ್ದಾರೆ.
Video : ಬುಟ್ಟ ಬೊಮ್ಮ ಹಾಡಿಗೆ ಡ್ಯಾನ್ಸ್ ಮಾಡಿದ ವಿಶೇಷ ಚೇತನರು : ಸ್ಟೈಲಿಶ್ ಸ್ಟಾರ್ ಮೆಚ್ಚುಗೆ! - ಅಲ್ಲು ಅರ್ಜುನ್
ಬುಟ್ಟ ಬೊಮ್ಮ ಹಾಡಿಗೆ ಇಬ್ಬರು ವಿಕಲ ಚೇತನರು ಡ್ಯಾನ್ಸ್ ಮಾಡಿದ್ದು ಎಲ್ಲೆಲ್ಲೂ ಸುದ್ದಿಯಾಗುತ್ತಿದೆ. ವಿಶೇಷ ಏನಂದ್ರೆ ಈ ಡ್ಯಾನ್ಸ್ ವಿಡಿಯೋವನ್ನು ಅಲ್ಲು ಅರ್ಜುನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಖುಷಿ ಹಂಚಿಕೊಂಡಿದ್ದಾರೆ.
ಬುಟ್ಟ ಬೊಮ್ಮ ಹಾಡಿಗೆ ಡ್ಯಾನ್ಸ್ ಮಾಡಿದ ವಿಕಲ ಚೇತನರು
ಇದೀಗ ಬುಟ್ಟ ಬೊಮ್ಮ ಹಾಡಿಗೆ ಇಬ್ಬರು ವಿಕಲ ಚೇತನರು ಡ್ಯಾನ್ಸ್ ಮಾಡಿದ್ದು ಎಲ್ಲೆಲ್ಲೂ ಸುದ್ದಿಯಾಗುತ್ತಿದೆ. ವಿಶೇಷ ಏನಂದ್ರೆ ಈ ಡ್ಯಾನ್ಸ್ ವಿಡಿಯೋವನ್ನು ಅಲ್ಲು ಅರ್ಜುನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು ಖುಷಿ ಹಂಚಿಕೊಂಡಿದ್ದಾರೆ.
ಟ್ವಿಟ್ಟರ್ನಲ್ಲಿ ವಿಡಿಯೋ ಬಗ್ಗೆ ಬರೆದಿರುವ ಅಲ್ಲು ಅರ್ಜುನ್, ಈ ವಿಡಿಯೋ ನನ್ನ ಹೃದಯವನ್ನು ಸ್ಪರ್ಶಿಸಿದೆ. ಈ ಹಾಡು ನಮ್ಮ ಸಾಮರ್ಥ್ಯ ಮೀರಿ ನಮ್ಮನ್ನು ಬೇರೆ ಕಡೆ ಕರೆದುಕೊಂಡು ಹೋಗಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಇನ್ಸ್ಪೈರ್ ಎಂದು ಬರೆದುಕೊಂಡಿದ್ದಾರೆ.