ಕರ್ನಾಟಕ

karnataka

ETV Bharat / sitara

ಬಾದಾಮಿಯಲ್ಲಿ ನಿರ್ದೇಶಕ ಯೋಗರಾಜ್ ಭಟ್ಟರ 'ಗರಡಿ' ಸಿನಿಮಾ ಚಿತ್ರೀಕರಣ - ಬಾದಾಮಿಯಲ್ಲಿ ಗರಡಿ ಸಿನಿಮಾ ಚಿತ್ರೀಕರಣ

ನಿರ್ದೇಶಕ ಯೋಗರಾಜ್ ಭಟ್ ಆ್ಯಕ್ಷನ್-ಕಟ್​​ ಹೇಳುತ್ತಿರುವ ಗರಡಿ ಸಿನಿಮಾ ಸದ್ದಿಲ್ಲದೇ ಬಾದಾಮಿಯಲ್ಲಿ ಚಿತ್ರೀಕರಣ ನಡೆಸುತ್ತಿದೆ. ಸಿನಿಮಾದಲ್ಲಿ ನಟ‌ ಸೂರ್ಯ ಹಾಗೂ ಸೋನಾಲ್ ಮಾಂಟೆರೊ ಮತ್ತು ಬಿ ಸಿ ಪಾಟೀಲ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ..

Garadi movie shooting going in Badami
ಬಾದಾಮಿಯಲ್ಲಿ ಯೋಗರಾಜ್ ಭಟ್ಟರ ಗರಡಿ ಸಿನಿಮಾ ಚಿತ್ರೀಕರಣ

By

Published : Mar 29, 2022, 1:34 PM IST

ನಟ‌ ಸೂರ್ಯ ಹಾಗೂ ಸೋನಾಲ್ ಮಾಂಟೆರೊ ಮತ್ತು ಬಿ ಸಿ ಪಾಟೀಲ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಚಿತ್ರ ಗರಡಿ. ನಿರ್ದೇಶಕ ಯೋಗರಾಜ್ ಭಟ್ ಆ್ಯಕ್ಷನ್-ಕಟ್​​ ಹೇಳುತ್ತಿರುವ ಗರಡಿ ಸಿನಿಮಾ ಸದ್ದಿಲ್ಲದೇ ಚಿತ್ರೀಕರಣ ಮಾಡುತ್ತಿದೆ.

ಗರಡಿ ಸಿನಿಮಾದಲ್ಲಿ ಸಚಿವ ಬಿ ಸಿ ಪಾಟೀಲ್​

ಕನ್ನಡನಾಡಿನ ಐತಿಹಾಸಿಕ ಬಾದಾಮಿಯ ಸುಂದರ ತಾಣದಲ್ಲಿ ಗರಡಿ ಚಿತ್ರದ ಟೈಟಲ್ ಸಾಂಗ್ ಅದ್ಧೂರಿಯಾಗಿ ಚಿತ್ರೀಕರಣಗೊಂಡಿದೆ. ಸಚಿವರು, ನಿರ್ಮಾಪಕರು ಆಗಿರುವ ಬಿಸಿ ಪಾಟೀಲ್​, ನಾಯಕ ಸೂರ್ಯ, ನಾಯಕಿ ಸೋನಾಲ್ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಗರಡಿ ಮನೆಯಲ್ಲಿ ತರಬೇತಿ ಪಡೆದಿರುವ ಸಾಕಷ್ಟು ಕುಸ್ತಿ ಪಟುಗಳು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ನಟ‌ ಸೂರ್ಯ ಹಾಗೂ ಸೋನಾಲ್ ಮಾಂಟೆರೊ

ಸೂರ್ಯ, ಸೋನಾಲ್, ಬಿ ಸಿ ಪಾಟೀಲ್, ರವಿಶಂಕರ್, ಸಚಿವ ಎಸ್ ಟಿ ಸೋಮಶೇಖರ್, ಬಲ ರಾಜವಾಡಿ, ಚೆಲುವರಾಜು, ರಾಘವೇಂದ್ರ, ಸೂರಜ್ ಬೇಲೂರ್, ಕಾಮಿಡಿ ಕಿಲಾಡಿ ನಯನ, ತ್ರಿವೇಣಿ(ಟಗರು), ರವಿಚೇತನ್, ತೇಜಸ್ವಿನಿ ಪ್ರಕಾಶ್ ಸೇರಿದಂತೆ ದೊಡ್ಡ ತಾರಬಳಗ ಚಿತ್ರದಲ್ಲಿ ನಟಿಸಿದೆ.

ನಟ ಸೂರ್ಯ ಅಭಿನಯದ ಗರಡಿ ಸಿನಿಮಾ

ಬಹಳ ದಿನಗಳ ಬಳಿಕ ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿದ್ದು, ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಸಿನಿಮಾಗೆ ಹರಿಕೃಷ್ಣರವರ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಇದೆ. ಸಿನಿಮಾವನ್ನು ವನಜಾ ಪಾಟೀಲ್ ನಿರ್ಮಾಣ ಮಾಡುತ್ತಿದ್ದು, ಸೃಷ್ಟಿ ಪಾಟೀಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಇದನ್ನೂ ಓದಿ: ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ ಟಾಲಿವುಡ್ ನಿರ್ದೇಶಕ ಆರ್​​ಜಿವಿ

ABOUT THE AUTHOR

...view details