ಕವಿ, ನಿರ್ದೇಶಕ, ನಟ ಯೋಗರಾಜ್ ಭಟ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕಿರುತೆರೆಯ 'ಚಕ್ರ' ಧಾರಾವಾಹಿಯನ್ನು ನಿರ್ದೇಶಿಸುವ ಮೂಲಕ ಬಣ್ಣದ ಲೋಕಕ್ಕೆ ಬಂದ ಯೋಗರಾಜ್ ಭಟ್ ಇಂದು ಕನ್ನಡದ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ಕುಟುಂಬದವರೊಂದಿಗೆ ಯೋಗರಾಜ್ ಭಟ್ ಇಂದು ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಉಡುಪಿಯ ತುಳು ಕುಟುಂಬದ ರಾಮಚಂದ್ರ ಹಾಗೂ ಜಯಲಕ್ಷ್ಮಿ ದಂಪತಿಯ 7 ಮಕ್ಕಳಲ್ಲಿ ಯೋಗರಾಜಭಟ್ ಕೊನೆಯವರು. ಚಿಕ್ಕಂದಿನಿಂದ ಸಿನಿಮಾಗಳ ಸೆಳೆತ ಇದ್ದ ಭಟ್ಟರು 2003 ರಲ್ಲಿ ಮಯೂರ್ ಪಟೇಲ್, ರಾಧಿಕಾ ಕುಮಾರಸ್ವಾಮಿ ನಟನೆಯ 'ಮಣಿ' ಚಿತ್ರವನ್ನು ನಿರ್ದೇಶಿಸುವ ಮೂಲಕ ಬೆಳ್ಳಿತೆರೆಗೆ ಬಂದರು. ಈ ಚಿತ್ರ ಅಷ್ಟೇನೂ ಯಶಸ್ಸು ಕಾಣದಿದ್ದರೂ ನಂತರ ಬಂದ 'ರಂಗ ಎಸ್ಎಸ್ಎಲ್ಸಿ' ಚಿತ್ರದ ಮೂಲಕ ಯೋಗರಾಜ್ ಭಟ್ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಆದರೆ 2006 ರಲ್ಲಿ ಬಿಡುಗಡೆಯಾದ 'ಮುಂಗಾರು ಮಳೆ' ಚಿತ್ರ ಯೋಗರಾಜ್ ಭಟ್ಗೆ ದೊಡ್ಡ ಬ್ರೇಕ್ ನೀಡಿತು. ಗಣೇಶ್ಗೆ ಕೂಡಾ ಈ ಚಿತ್ರ ಸ್ಟಾರ್ಡಮ್ ತಂದುಕೊಡ್ತು.