ಕರ್ನಾಟಕ

karnataka

ETV Bharat / sitara

ಥಿಯೇಟರ್​​​​​ಗೆ ಜನ ಬರ್ತಿಲ್ಲ...ಅಳಲು ತೋಡಿಕೊಂಡ ನಟ ವಿಕಾಸ್​ - ಜನರು ಥಿಯೇಟರ್​​​​​​ಗೆ ಬರುತ್ತಿಲ್ಲ ಎಂದು ವಿಕಾಸ್ ಬೇಸರ

ಥ್ರಿಲ್ಲರ್ ಜೊತೆಗೆ ಫ್ಯಾಂಟಸಿ ಕಥೆ ಆಧರಿಸಿದ 'ಕಾಣದಂತೆ ಮಾಯವಾದನು' ಸಿನಿಮಾ ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಸಿನಿಮಾ ಬಿಡುಗಡೆ ಆಗಿ ಎರಡು ವಾರಗಳು ಕಳೆದರೂ ಜನರು ಥಿಯೇಟರ್​​​​​ಗೆ ಬರುತ್ತಿಲ್ಲ ಎಂದು ವಿಕಾಸ್ ಮಾಧ್ಯಮದ ಮುಂದೆ ನೋವು ತೋಡಿಕೊಂಡರು.

Director Vikas felt bad about hi movie failure
ಅಳಲು ತೋಡಿಕೊಂಡ ನಟ ವಿಕಾಸ್​

By

Published : Mar 7, 2020, 7:43 PM IST

ಸ್ಯಾಂಡಲ್​​​​ ವುಡ್​​​ನಲ್ಲಿ ಸಿನಿಮಾ ಮಾಡುವುದು ಒಂದು ದೊಡ್ಡ ಸಾಹಸ. ಆ ಸಿನಿಮಾವನ್ನು ಥಿಯೇಟರ್​​​ನಲ್ಲಿ ಉಳಿಸಿಕೊಳ್ಳುವುದು ಇನ್ನೂ ದೊಡ್ಡ ಸಾಹಸ ಎನ್ನಬಹುದು. ಮೊದಲ ಬಾರಿ ಪೂರ್ಣ ಪ್ರಮಾಣದ ಹೀರೋ ಆಗಿ ನಟಿಸಿರುವ ವಿಕಾಸ್ ಸಿನಿಮಾ ವಿಚಾರವಾಗಿ ಬೇಸರದ ಸಂಗತಿ ಹೊರಹಾಕಿದ್ದಾರೆ.

ಅಳಲು ತೋಡಿಕೊಂಡ ನಟ ವಿಕಾಸ್​

'ಜಯಮ್ಮನ ಮಗ' ಸಿನಿಮಾ ನಿರ್ದೇಶನ ಮಾಡಿದ ವಿಕಾಸ್ 'ಕಾಣದಂತೆ ಮಾಯವಾದನು' ಚಿತ್ರದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಣದ ನಾಯಕ ಆಗಿ ನಟಿಸಿದರು. ಸಿನಿಮಾ ಕಳೆದ ತಿಂಗಳು ಫೆಬ್ರವರಿಯಲ್ಲಿ ರಾಜ್ಯಾದ್ಯಂತ ತೆರೆ ಕಂಡಿತ್ತು. ಥ್ರಿಲ್ಲರ್ ಜೊತೆಗೆ ಫ್ಯಾಂಟಸಿ ಕಥೆ ಆಧರಿಸಿದ 'ಕಾಣದಂತೆ ಮಾಯವಾದನು' ಸಿನಿಮಾ ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಸಿನಿಮಾ ಬಿಡುಗಡೆ ಆಗಿ ಎರಡು ವಾರಗಳು ಕಳೆದರೂ ಜನರು ಥಿಯೇಟರ್​​​​​ಗೆ ಬರುತ್ತಿಲ್ಲ ಎಂದು ವಿಕಾಸ್ ಮಾಧ್ಯಮದ ಮುಂದೆ ನೋವು ತೋಡಿಕೊಂಡರು.

ಸಿನಿಮಾ ಬಹಳ ಚೆನ್ನಾಗಿದೆ ಎಂದು ಎಷ್ಟೋ ಜನರು ನನ್ನ ಬಳಿ ಹೇಳಿದ್ದರು. ಆದರೆ ಜನರು ಥಿಯೇಟರ್​ಗೆ ಮಾತ್ರ ಬರ್ತಿಲ್ಲ. ಇದರ ಜೊತೆಗೆ ಬುಕ್ ಮೈ ಶೋನವರು ಹೊಸಬರ ಸಿನಿಮಾಗೆ, ರೇಟಿಂಗ್ ವಿಷಯದಲ್ಲಿ ಅನ್ಯಾಯ ಮಾಡಿದ್ದಾರೆ ಎಂಬ ನೋವನ್ನು ಹೊರಹಾಕಿದರು. ಈಗ ಮತ್ತೆ ಸಾಲ ಮಾಡಿ ಕಾಮಾಕ್ಯ ಹಾಗೂ ರಾಕ್​ ಲೈನ್​​​​​​​​​​​ ಮಾಲ್​​​ನಲ್ಲಿ ಸಿನಿಮಾ ರಿಲೀಸ್ ಮಾಡಿದ್ದೀವಿ. ದಯವಿಟ್ಟು ಜನರು ಬಂದು ನಮ್ಮ ಸಿನಿಮಾ ನೋಡಿ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡರು.

For All Latest Updates

TAGGED:

ABOUT THE AUTHOR

...view details