ಕರ್ನಾಟಕ

karnataka

ETV Bharat / sitara

ಶುಭಾ ಪೂಂಜಾ ನಟನೆಯ 'ಅಂಬುಜ' ಚಿತ್ರದ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ - Shubha poonja in Ambuja movie

ಶ್ರೀನಿ ಹನುಮಂತರಾಜ್ ನಿರ್ದೇಶನದ 'ಅಂಬುಜ' ಚಿತ್ರದಲ್ಲಿ ಶುಭಾ ಪೂಂಜಾ ಪತ್ರಕರ್ತೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆ ಆಧಾರಿತ ಚಿತ್ರ ಎಂದು ನಿರ್ದೇಶಕ ಶ್ರೀನಿ ಮಾಹಿತಿ ನೀಡಿದ್ದಾರೆ.

Ambuja movie
ಶುಭಾ ಪೂಂಜಾ

By

Published : Aug 7, 2020, 5:20 PM IST

'ಮೊಗ್ಗಿನ ಮನಸು' ಹುಡುಗಿ ಶುಭಾ ಪೂಂಜಾ ಹುಟ್ಟುಹಬ್ಬದಂದು 'ಅಂಬುಜ' ಚಿತ್ರವನ್ನು ಅನೌನ್ಸ್ ಮಾಡಿದ್ದರು. ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಈ ಚಿತ್ರಕ್ಕೆ ಕಾಶಿನಾಥ್ ಡಿ. ಮಡಿವಾಳರ್ ಕಥೆ, ಚಿತ್ರಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ.

'ಅಂಬುಜ' ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ

'ಕೆಲವು ದಿನಗಳ ನಂತರ' ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ನಿರ್ದೇಶನ ಮಾಡಿ ಗಮನ ಸೆಳೆದಿದ್ದ ನವ ನಿರ್ದೇಶಕ ಶ್ರೀನಿ ಹನುಮಂತರಾಜ್ ಎರಡು ವರ್ಷಗಳ ನಂತರ 'ಅಂಬುಜ' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳೋಕೆ ರೆಡಿಯಾಗಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಶ್ರೀನಿ, ರಾಯಚೂರಿನ ಲಂಬಾಣಿ ಕುಟುಂಬದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ನಮ್ಮ ನಿರ್ಮಾಪಕರಾದ ಕಾಶಿನಾಥ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಇನ್ನು ಈ ಚಿತ್ರದಲ್ಲಿ ಶುಭಾ ಪೂಂಜಾ ಕಷ್ಟದಲ್ಲಿರುವ ಲಂಬಾಣಿ ಕುಟುಂಬಕ್ಕೆ ನೆರವಾಗುವ ಪತ್ರಕರ್ತೆ ಪಾತ್ರದಲ್ಲಿ ನಟಿಸಲಿದ್ದಾರೆ.

'ಅಂಬುಜ'

ಉತ್ತರ ಕರ್ನಾಟಕ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದ್ದು ಕೊನೆಯ ಇಪ್ಪತ್ತು ನಿಮಿಷದಲ್ಲಿ ಚಿತ್ರಕ್ಕೆ ತಿರುವು ಇರಲಿದೆ. ಕ್ಲೈಮ್ಯಾಕ್ಸ್ ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್. 'ಅಂಬುಜ' ಮಹಿಳಾ ಪ್ರಧಾನ ಚಿತ್ರವಾಗಿದ್ದು, ಶುಭಾ ಪೂಂಜಾ ಅವರದ್ದು ಪ್ರಮುಖ ಪಾತ್ರವಾಗಿದೆ. ನಾಯಕನ ಪಾತ್ರಕ್ಕೆ ಹೊಸ ಮುಖದ ಹುಡುಕಾಟದಲ್ಲಿದ್ದೇವೆ. ಡಿಸೆಂಬರ್​ ವೇಳೆಗೆ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶನ ಶ್ರೀನಿ ಮಾಹಿತಿ ನೀಡಿದ್ದಾರೆ.

ನಿರ್ದೇಶಕ ಶ್ರೀನಿ ಹನುಮಂತರಾಜ್

ABOUT THE AUTHOR

...view details