ಸ್ಯಾಂಡಲ್ವುಡ್ನಲ್ಲಿ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ, ರಾಜಕುಮಾರ ಹಾಗೂ ಯುವರತ್ನ ಅಂತಹ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸ್ಟಾರ್ ಡೈರೆಕ್ಟರ್ ಅಂತಾ ಕರೆಸಿಕೊಂಡಿದ್ದಾರೆ. ಯುವರತ್ನ ಸಿನಿಮಾದ ನಂತರ ಮುಂದಿನ ಯಾವ ಸಿನಿಮಾವನ್ನು ಯಾರ ಜೊತೆ ಮಾಡ್ತಾರೆ ಅನ್ನೋ ಕುತೂಹಲವಿತ್ತು. ಅದಕ್ಕೀಗ ತೆರೆಬಿದ್ದಿದೆ.
ಸಂತೋಷ್ ಹೇಳಿದಾಗೆ ನಟ ಪುನೀತ್ ರಾಜ್ ಕುಮಾರ್ ಅವರ ಜೊತೆ ಮೂರನೇ ಬಾರಿಗೆ ಹೊಂಬಾಳೆ ಫಿಲಂಸ್ನಲ್ಲಿ ಸಿನಿಮಾ ಮಾಡ್ತಾರೆ ಎನ್ನಲಾಗಿತ್ತು. ಆದ್ರೆ ಆ ಊಹೆ ತಪ್ಪು. ಮಾಹಿತಿ ಪ್ರಕಾರ, ಸಂತೋಷ್ ಆನಂದ್ ರಾಮ್ ಅವರ ಮುಂದಿನ ಸಿನಿಮಾ ಹೊಂಬಾಳೆ ಫಿಲಂಸ್ನ ಜೊತೆ, ಆದ್ರೆ ಹೀರೋ ಪುನೀತ್ ರಾಜ್ ಕುಮಾರ್ ಅಲ್ಲ. ನವರಸ ನಾಯಕ ಜಗ್ಗೇಶ್ ಜೊತೆ ಸಿನಿಮಾ ಮಾಡಲಿದ್ದಾರೆ.
ಹೌದು, ಹೀಗೊಂದು ಸುದ್ದಿ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಸಂತೋಷ್ ಆನಂದ್ ರಾಮ್ ಸದ್ದಿಲ್ಲದೇ ಹೊಸ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರಂತೆ. ಮೊದಲಿನಿಂದಲೂ ಸಂತೋಷ್ ಆನಂದ್ ರಾಮ್ ನಿರ್ದೇಶನದ ಸಿನಿಮಾಗಳೆಂದ್ರೆ ಜಗ್ಗೇಶ್ ಅವರಿಗೆ ಎಲ್ಲಿಲ್ಲದ ಪ್ರೀತಿ.