ಕನ್ನಡ ಚಿತ್ರರಂಗದ ನಗು ಮುಖದ ರಾಜಕುಮಾರ ಅಂತಾ ಮನೆ ಮಾತಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Power Star Puneeth Rajkumar) ನಿಧನ ಹೊಂದಿ 25 ದಿನ ಕಳೆಯುತ್ತಿವೆ. ಆದರೆ, ಪುನೀತ್ ನೆನಪು ಮಾತ್ರ ಸಿನಿಮಾ ಮಂದಿ ಅಲ್ಲದೇ ಅಭಿಮಾನಿಗಳನ್ನ ಕಾಡುತ್ತಲೇ ಇದೆ.
ಇವತ್ತಿಗೂ ಕಂಠೀರವ ಸ್ಟುಡಿಯೋದಲ್ಲಿರೋ ಅಪ್ಪು ಸಮಾಧಿಗೆ ಸಾವಿರಾರು ಜನರು ಭೇಟಿ ನೀಡಿ ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಇನ್ನು ನಾಲ್ಕು ದಿನಗಳು ಕಳೆದರೆ ಪುನೀತ್ರ ಒಂದು ತಿಂಗಳ ಪುಣ್ಯಸ್ಮರಣೆ ಕಾರ್ಯಕ್ರಮ ಮಾಡಲು ಕುಟುಂಬದವರು ಸಿದ್ಧತೆ ನಡೆಸಿದ್ದಾರೆ.
ಹೀಗಿರಬೇಕಾದ್ರೆ, ಪವರ್ ಸ್ಟಾರ್ ಬಗ್ಗೆ ಒಂದು ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಅಪ್ಪು ಬಯೋಪಿಕ್ ಮಾಡಲು ಅಭಿಮಾನಿಗಳಿಂದ ಬೇಡಿಕೆ ಬರುತ್ತಿದೆ. ಪುನೀತ್ರ ಮತ್ತೊಬ್ಬ ಸಹೋದರನ ಹಾಗೆ ಬಳಹ ಆಪ್ತವಾಗಿದ್ದ ನಿರ್ದೇಶಕ ಸಂತೋಷ್ ಆನಂದ್ರಾಮ್ (Director Santhosh Ananddram) ಅವರಿಗೆ, ಅಪ್ಪು ಅಭಿಮಾನಿಗಳು ಟ್ಟಿಟರ್ನಲ್ಲಿ ಪವರ್ ಸ್ಟಾರ್ ಜೀವನ ಚರಿತ್ರೆಯನ್ನ ಸಿನಿಮಾ (Fans request for Puneeth Rajkumar's Biopic) ಮಾಡಿ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಕೇಳಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ನಿರಂತರ ಮಳೆಯಲ್ಲೂ 'ಅಪ್ಪು' ಪುಣ್ಯಸ್ಮರಣೆ: ಪುಷ್ಮಾಪುರದಲ್ಲಿ ಗ್ರಾಮಸ್ಥರಿಗೆಲ್ಲ ಬಾಡೂಟ
ಅಪ್ಪು ಅಭಿಯಾನಿಯೊಬ್ಬರ ಬೇಡಿಕೆಗೆ ಪ್ರತಿಕ್ರಿಯೆ ನೀಡಿರುವ ಸಂತೋಷ್ ಕೂಡ ಉತ್ಸಾಹ ತೋರಿದ್ದು, "ಈ ಐಡಿಯಾವನ್ನ ತೆರೆ ಮೇಲೆ ತರಲು ನನ್ನ ಕೈಲಾದಷ್ಟು ಪ್ರಯತ್ನ ಮಾಡುವೆ" ಎಂದು ಟ್ವೀಟ್ (Santhosh Ananddram Tweet) ಮಾಡಿದ್ದಾರೆ.