ಕನ್ನಡ ಚಿತ್ರರಂಗದ ಕಲಾ ಸಾಮ್ರಾಟ, ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಸ್. ನಾರಾಯಣ್ ಎರಡನೇ ಪುತ್ರ! - Director S Narayan second son marriage
ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಎರಡನೇ ಪುತ್ರ ಪವನ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಸ್.ನಾರಾಯಣ್ ಎರಡನೇ ಪುತ್ರ
ಎಸ್. ನಾರಾಯಣ್ ಎರಡನೇ ಮಗ ಪವನ್, ಪವಿತ್ರಾ ಎಂಬುವರ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಪವನ್, ತಮ್ಮ ತಂದೆಯ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.
ಇನ್ನು ಈ ವರ್ಷ ಸೆಟ್ಟೇರಿದ ಡಾರ್ಲಿಂಗ್ ಕೃಷ್ಣ ನಟನೆಯ 'ಶುಗರ್ ಫ್ಯಾಕ್ಟರಿ' ಸಿನಿಮಾದಲ್ಲಿ ಕೂಡ ಪವನ್ ನಟಿಸುತ್ತಿದ್ದಾರೆ. ಪವನ್ 'ನವಮಿ' ಎಂಬ ಚಿತ್ರವನ್ನ ನಿರ್ದೇಶನ ಮಾಡಿದ್ರೆ, ಮುತ್ತು ರತ್ನ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಈ ಎರಡು ಚಿತ್ರಗಳು ಇನ್ನೂ ಬಿಡುಗಡೆಯಾಗಿಲ್ಲ.